March 2025

ರಾಜ್ಯದ ಜನತೆಗೆ ಶಾಕ್ ಮೇಲೆ‌ ಶಾಕ್| ವಿದ್ಯುತ್ ದರ ಏರಿಸಿ ರಾಜ್ಯ ಸರ್ಕಾರ ಆದೇಶ| ಎ.1ರಿಂದಲೇ ಪರಿಷ್ಕೃತ ದರ ಜಾರಿ

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಹಾಲಿನ ದರ ಏರಿಕೆ ಬೆನ್ನಲ್ಲೇ ವಿದ್ಯುತ್ ದರ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಿಸಿ ‘KERC’ ಆದೇಶ ಹೊರಡಿಸಿದೆ. ಪ್ರತಿ ಯೂನಿಟ್ ಗೆ 36 ಪೈಸೆಯಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ವ್ ಎಸ್ಕಾಮ್ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್ ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್ ಸಿ ಹೊಸ […]

ರಾಜ್ಯದ ಜನತೆಗೆ ಶಾಕ್ ಮೇಲೆ‌ ಶಾಕ್| ವಿದ್ಯುತ್ ದರ ಏರಿಸಿ ರಾಜ್ಯ ಸರ್ಕಾರ ಆದೇಶ| ಎ.1ರಿಂದಲೇ ಪರಿಷ್ಕೃತ ದರ ಜಾರಿ Read More »

ಅಕ್ರಮ ಚಿನ್ನ ಸಾಗಾಟ ಪ್ರಕರಣ| ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ

ಸಮಗ್ರ ನ್ಯೂಸ್: ನಟಿ ರನ್ಯಾ ರಾವ್ ಅವರು ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಟಿ ರನ್ಯಾ ರಾವ್ ಗೆ ಬಿಗ್ ಶಾಕ್ ನೀಡಲಾಗಿದೆ. ಈ ಸಂಬಂಧ ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಅವರು ವಿಚಾರಣೆಯ ವೇಳೆ ಸರಿಯಾಗಿ ಸಹಕರಿಸಿಲ್ಲ. ತನಿಖೆ ಬಾಕಿ ಇದೆ. ಯಾವುದೇ

ಅಕ್ರಮ ಚಿನ್ನ ಸಾಗಾಟ ಪ್ರಕರಣ| ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ Read More »

ಅಡಿಕೆ ಸುಲಿಯುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಸಮಗ್ರ ನ್ಯೂಸ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಪತ್ನಿ ಶೋಭಾ ಹೆಗಡೆ ಆಕಸ್ಮಿಕ ಅವಘಡದಲ್ಲಿ ನಿಧನರಾಗಿದ್ದಾರೆ. ಅಡಕೆ ಚಾಲಿ ಸುಲಿಯುವ ಯಂತ್ರಕ್ಕೆ ಸಿಲುಕಿ ಶೋಭಾ ಮೃತಪಟ್ಟಿದ್ದಾರೆ. ಶೋಭಾ ಮನೆಯಲ್ಲಿ ಅಡಕೆ ಸುಲಿಯುವ ಕಾರ್ಯ ನಡೆಯುತ್ತಿತ್ತು. ಶೋಭಾ ಹೆಗಡೆ ಕೆಲಸಗಾರರನ್ನು ನೋಡಿಕೊಳ್ಳಲು ಹೋಗಿದ್ದರು. ಈ ವೇಳೆ ಚಾಲಿ ಸುಲಿಯುವ ಯಂತ್ರಕ್ಕೆ ಆಕಸ್ಮಿಕವಾಗಿ ಶೋಭಾ ಸೀರೆಯ ಸೆರಗು ಸಿಲುಕಿ ಅವರು ಪ್ರಾಣಬಿಟ್ಟಿದ್ದಾರೆ. ಕೆಲಸಗಾರರು ಅಲ್ಲಿಯೇ ಇದ್ದರೂ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ. ಯಂತ್ರ ಶೋಭಾರನ್ನು ಎತ್ತಿ ಬಿಸಾಡಿದ್ದು, ರಕ್ತಸ್ರಾವವಾಗಿ

ಅಡಿಕೆ ಸುಲಿಯುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು Read More »

ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ| ನಂದಿನಿ ಹಾಲಿನ ದರದಲ್ಲಿ ₹4 ಏರಿಕೆಗೆ ಸಚಿವ ಸಂಪುಟ ಅನುಮೋದನೆ|

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಬಿಗ್ ಶಾಕ್ ನೀಡಿದ್ದು, ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ಮತ್ತೆ 4 ರೂಪಾಯಿ ಏರಿಕೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ. ಪರಿಷ್ಕೃತ ನೂತನ ದರ ಎ.1ರಿಂದ ಜಾರಿಗೆ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ 4 ರೂ ಏರಿಕೆಗೆ ಅನುಮೋದನೆ ದೊರಕಿದೆ. ಈಗಾಗಲೇ ರಾಜ್ಯ ಸರ್ಕಾರ ಕೆಎಸ್‌ಆರ್ಟಿಸಿ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣದ ಟಿಕೆಟ್

ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ| ನಂದಿನಿ ಹಾಲಿನ ದರದಲ್ಲಿ ₹4 ಏರಿಕೆಗೆ ಸಚಿವ ಸಂಪುಟ ಅನುಮೋದನೆ| Read More »

ವಿಟ್ಲ: ತೋಟಕ್ಕೆ ಬಂದಿದ್ದ ಬಾಲಕಿಯನ್ನು ಗುಡ್ಡಕ್ಕೆ ಕರೆದ ಮಾಲೀಕ| ಫೋಕ್ಸೋ ಪ್ರಕರಣ ದಾಖಲು

ಸಮಗ್ರ ನ್ಯೂಸ್: ‘ನೀನು ಚನ್ನಾಗಿದ್ದೀಯಾ. ಗುಡ್ಡೆಗೆ ಬರುತ್ತೀಯ?’ ಎಂದು ಅಪ್ರಾಪ್ತೆ ವಯಸ್ಸಿನ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. 15 ವರ್ಷದ ಬಾಲಕಿ ಜೊತೆ ಅನುಚಿತ ವರ್ತಿಸಿದ ಮಹೇಶ್ ಭಟ್ ಎನ್ನುವಾತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ದೂರು ದಾಖಲಾಗಿದೆ. ಜನವರಿ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ. ಜನವರಿ 12ರಂದು ತಂದೆ ಕೆಲಸ ಮಾಡುವ ತೋಟಕ್ಕೆ

ವಿಟ್ಲ: ತೋಟಕ್ಕೆ ಬಂದಿದ್ದ ಬಾಲಕಿಯನ್ನು ಗುಡ್ಡಕ್ಕೆ ಕರೆದ ಮಾಲೀಕ| ಫೋಕ್ಸೋ ಪ್ರಕರಣ ದಾಖಲು Read More »

ಮಾ.29ರಂದು ಸೂರ್ಯಗ್ರಹಣ| ಎಲ್ಲೆಲ್ಲಿ ಗೋಚರಿಸುತ್ತದೆ? ಇಲ್ಲಿದೆ‌ ಮಾಹಿತಿ…

ಸಮಗ್ರ ನ್ಯೂಸ್: ಈ ವರ್ಷದ ಮೊದಲ ಗ್ರಹಣ ಹೋಳಿ ಹಬ್ಬದ ದಿನದಂದು, ಅಂದರೆ ಮಾರ್ಚ್ 14 ರಂದು ಸಂಭವಿಸಿತು. ಇದು ಚಂದ್ರ ಗ್ರಹಣ. ಈಗ, ವರ್ಷದ ಎರಡನೇ ಗ್ರಹಣ ಮಾರ್ಚ್‌ನಲ್ಲಿ ಸಂಭವಿಸಲಿದೆ. ಈ ಗ್ರಹಣವು 2025 ರ ಮೊದಲ ಸೂರ್ಯಗ್ರಹಣವಾಗಲಿದೆ. ಇದು ಮಾರ್ಚ್ 29 ರಂದು, ಚೈತ್ರ ಮಾಸದ ಆರಂಭದ ಒಂದು ದಿನ ಮೊದಲು ಸಂಭವಿಸುತ್ತದೆ. ಈ ಸೂರ್ಯಗ್ರಹಣದ ಸಮಯದಲ್ಲಿ, ಭೂಮಿಯ ಕೆಲವು ಪ್ರದೇಶಗಳು ಹಗಲು ಬೆಳಕಿನಿಂದ ಆವೃತವಾಗಿರುತ್ತವೆ ಮತ್ತು ಕೆಲವು ಪ್ರದೇಶಗಳು ಕತ್ತಲೆಯಲ್ಲಿ ಆವರಿಸಲ್ಪಡುತ್ತವೆ. ಜನರು

ಮಾ.29ರಂದು ಸೂರ್ಯಗ್ರಹಣ| ಎಲ್ಲೆಲ್ಲಿ ಗೋಚರಿಸುತ್ತದೆ? ಇಲ್ಲಿದೆ‌ ಮಾಹಿತಿ… Read More »

‘ಸತ್ಯವಂತರಿಗಿದು ಕಾಲವಲ್ಲ’| ಉಚ್ಛಾಟನೆ ಬೆನ್ನಲ್ಲೇ ಯತ್ನಾಳ್ ಆಕ್ರೋಶ ಭರಿತ ಟ್ವೀಟ್

ಸಮಗ್ರ ನ್ಯೂಸ್: ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆಯಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾರ್ಮಿಕ ಟ್ವೀಟ್‌ ಮಾಡಿ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಪಕ್ಷದಲ್ಲಿ ಬದಲಾವಣೆ, ಏಕವ್ಯಕ್ತಿ ನಾಯಕತ್ವವನ್ನು ಬದಲಾವಣೆ ಮಾಡಿ ಎಂದು ಹೇಳಿದ್ದಕ್ಕೆ ಪಕ್ಷ ನನ್ನನ್ನು ಉಚ್ಛಾಟನೆ ಮಾಡಿದೆ. ಈ ಕುರಿತು ಅವರು ಸಾಮಾಜಿಕ ಮಾಧ್ಯಮದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ’. ಉಪಕಾರ ಮಾಡಿದರೆ ಅಪಕರಿಸುವ ಕಾಲ. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ

‘ಸತ್ಯವಂತರಿಗಿದು ಕಾಲವಲ್ಲ’| ಉಚ್ಛಾಟನೆ ಬೆನ್ನಲ್ಲೇ ಯತ್ನಾಳ್ ಆಕ್ರೋಶ ಭರಿತ ಟ್ವೀಟ್ Read More »

ಯತ್ನಾಳ್ ಗೆ ಬಿಗ್ ಶಾಕ್ ನೀಡಿದ ಬಿಜೆಪಿ| 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ

ಸಮಗ್ರ ನ್ಯೂಸ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ನಿನ್ನೆಯಷ್ಟೇ ರಾಜ್ಯದ ಐವರು ಬಿಜೆಪಿ ನಾಯಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ಶಾಕ್ ಕೊಟ್ಟಿದ್ದ ಬಿಜೆಪಿ ಹೈಕಮಾಂಡ್ ಇಂದು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿ ಆದೇಶ ಹೊರಡಿಸಿದೆ. ಪದೇ ಪದೇ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಕಾರಣಕ್ಕೆ ಈ ಬೃಹತ್ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಕೈಗೊಂಡಿದೆ.

ಯತ್ನಾಳ್ ಗೆ ಬಿಗ್ ಶಾಕ್ ನೀಡಿದ ಬಿಜೆಪಿ| 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ Read More »

‘ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ’| ಅಲಹಾಬಾದ್ ಹೈಕೋರ್ಟ್ ನ‌ ವಿವಾದಿತ ‌ಆದೇಶಕ್ಕೆ ಸುಪ್ರೀಂ ತಡೆ

ಸಮಗ್ರ ನ್ಯೂಸ್: ಸಂತ್ರಸ್ತ ಬಾಲಕಿಯ ಸ್ತನಗಳನ್ನು ಹಿಡಿದುಕೊಳ್ಳುವುದು, ಆಕೆಯ ಪೈಜಾಮಾದ ದಾರವನ್ನು ಹಿಡಿದು ಎಳೆಯುವುದಷ್ಟೇ ಅತ್ಯಾಚಾರ ಆಗುವುದಿಲ್ಲ ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಿತ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಇಂದು (ಬುಧವಾರ) ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್‌ ಮಸೀಹ್ ನೇತೃತ್ವದ ಪೀಠವು ಈ ಕುರಿತು ಪ್ರತಿಕ್ರಿಯಿಸಿದ್ದು, ‘ಇದು ಗಂಭೀರ ವಿಷಯವಾಗಿದೆ. ಇಂತಹ ಆದೇಶಗಳು ಸಂವೇದನಾರಹಿತ, ಅಮಾನವೀಯ ವಿಧಾನವನ್ನು ಪ್ರತಿನಿಧಿಸುತ್ತವೆ’ ಎಂದು ಹೇಳಿದೆ. ಈ ಪ್ರಕರಣ ಕುರಿತಂತೆ ಆದೇಶ ಹೊರಡಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ

‘ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ’| ಅಲಹಾಬಾದ್ ಹೈಕೋರ್ಟ್ ನ‌ ವಿವಾದಿತ ‌ಆದೇಶಕ್ಕೆ ಸುಪ್ರೀಂ ತಡೆ Read More »

ದೇಶದ 32ಲಕ್ಷ ಬಡ ಮುಸ್ಲಿಮರಿಗೆ ಬಿಜೆಪಿಯಿಂದ ‘ರಂಜಾನ್ ಕಿಟ್’| ‘ಸೌಗತ್ ಎ ಮೋದಿ’ ಯೋಜನೆಯಡಿ ಅಭಿಯಾನ

ಸಮಗ್ರ ನ್ಯೂಸ್: 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ದೇಶಾದ್ಯಂತ ರಂಜಾನ್ ಕಿಟ್ ನೀಡಲು ಆರಂಭಿಸಿದೆ. ಈ ಯೋಜನೆಗೆ ಸೌಗತ್ ಎ ಮೋದಿ ಎಂದು ಅಭಿಯಾನಕ್ಕೆ ಹೆಸರಿಡಲಾಗಿದೆ. ಈದ್ ಸಂದರ್ಭದಲ್ಲಿ ಬಿಜೆಪಿ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಹೌದು, ಈದ್ ಸಂದರ್ಭದಲ್ಲಿ ಬಿಜೆಪಿ ದೇಶಾದ್ಯಂತ ಬಡ ಮುಸ್ಲಿಮರಿಗೆ ದೊಡ್ಡ ಉಡುಗೊರೆಯನ್ನು ನೀಡಲಿದೆ. ಈದ್ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಮರಿಗೆ ‘ಸೌಗತ್-ಎ-ಮೋದಿ’ ಕಿಟ್ ನೀಡುವುದಾಗಿ ಬಿಜೆಪಿ ಅಂದರೆ ಭಾರತೀಯ ಜನತಾ ಪಕ್ಷ ಘೋಷಿಸಿದೆ. ಈ

ದೇಶದ 32ಲಕ್ಷ ಬಡ ಮುಸ್ಲಿಮರಿಗೆ ಬಿಜೆಪಿಯಿಂದ ‘ರಂಜಾನ್ ಕಿಟ್’| ‘ಸೌಗತ್ ಎ ಮೋದಿ’ ಯೋಜನೆಯಡಿ ಅಭಿಯಾನ Read More »