March 2025

ಮದುವೆಯಾಗಿ ಮೂರೇ ದಿನಕ್ಕೆ ನವ ವಿವಾಹಿತನ ದುರಂತ ಅಂತ್ಯ.. ಆಗಿದ್ದೇನು?

ಸಮಗ್ರ ನ್ಯೂಸ್: ನವ ವಿವಾಹಿತ ಯುವಕನೊಬ್ಬ ಮದುವೆಯಾಗಿ ಮೂರೇ ದಿನಕ್ಕೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಡ್ಯದ ಕೆ.ಆರ್ ಪೇಟೆಯಲ್ಲಿ ನಡೆದಿದೆ. ಪುರಸಭೆಯ ಸದಸ್ಯ ಕೆ.ಸಿ ಮಂಜುನಾಥ್ ಪುತ್ರ ಶಶಾಂಕ್ ಮೃತ ದುರ್ದೈವಿ. ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದ ಶಶಾಂಕ್ ಜಾರ್ಖಂಡ್ ಮೂಲದ ಅಷ್ಣಾ ಹೆಸರಿನ ಯುವತಿಯನ್ನು ಪ್ರೀತಿಸಿ ಕಳೆದ ಭಾನುವಾರವಷ್ಟೇ ಮೈಸೂರಲ್ಲಿ ಬಹಳ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯ ದಿನ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದು, ಇದನ್ನು ಸ್ನೇಹಿತರ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಮದುವೆಯ […]

ಮದುವೆಯಾಗಿ ಮೂರೇ ದಿನಕ್ಕೆ ನವ ವಿವಾಹಿತನ ದುರಂತ ಅಂತ್ಯ.. ಆಗಿದ್ದೇನು? Read More »

ಹಕ್ಕಿಜ್ವರದ ಭೀತಿ/ ಆರೋಗ್ಯ ಇಲಾಖೆ ಹೈ ಅಲರ್ಟ್

ಸಮಗ್ರ ನ್ಯೂಸ್‌: ಹಕ್ಕಿಜ್ವರದ ಭೀತಿ ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳ ನಂತರ ಇದೀಗ ಬೆಂಗಳೂರಿಗೂ ಕಾಡಲು ಶುರುವಾಗಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಹಕ್ಕಿಜ್ವರ ನಿಯಂತ್ರಣಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇದೀಗ ಬೆಂಗಳೂರಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿದ್ಧತೆಗೆ ಸೂಚನೆ ನೀಡಲಾಗಿದ್ದು, ಪ್ರತ್ಯೇಕ ವಾರ್ಡ್ ಮಾಡಲು ನಿರ್ದೇಶನ ನೀಡಲಾಗಿದೆ. ಹಕ್ಕಿಜ್ವರದ ಗುಣಲಕ್ಷಣ ಕಂಡು ಬಂದರೆ ಅಂಥವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಇನ್ನು ಜ್ವರ ಬಂದಲ್ಲಿ ಜನರು ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಜತೆಗೆ, ವೂ ಬಂದ ಸ್ಥಳದಲ್ಲಿ ಕೆಲಸ

ಹಕ್ಕಿಜ್ವರದ ಭೀತಿ/ ಆರೋಗ್ಯ ಇಲಾಖೆ ಹೈ ಅಲರ್ಟ್ Read More »

ನಟಿ ರನ್ಯಾ ರಾವ್ ಮನೆಯಿಂದ 17.29 ಕೋಟಿ ಮೌಲ್ಯದ ನಗ ನಗದು ವಶ

ಸಮಗ್ರ ನ್ಯೂಸ್: ನಟಿ ರನ್ಯಾ ರಾವ್ ನಿನ್ನೆಯಷ್ಟೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ನಟಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಂತೆ ನಟಿಯ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತದ ಚಿನ್ನ ವಶಪಡಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ. ಡಿಆರ್​ಐ ಅಧಿಕಾರಿಗಳು

ನಟಿ ರನ್ಯಾ ರಾವ್ ಮನೆಯಿಂದ 17.29 ಕೋಟಿ ಮೌಲ್ಯದ ನಗ ನಗದು ವಶ Read More »

ಏಕದಿನ ಕ್ರಿಕೆಟ್ ಗೆ ಸ್ಟೀವ್ ಸ್ಮಿತ್ ವಿದಾಯ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್‌ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್‌ಗೆ ಅಚ್ಚರಿಯ ವಿದಾಯ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಬೆನ್ನಲ್ಲೇ ಕ್ರಿಕೆಟಿಗ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ಭಾರತ ವಿರುದ್ಧದ ಸೆಮಿ ಕದನದಲ್ಲಿ 73 ರನ್ ಗಳಿಸಿದ ಅವರು ಆಸ್ಟ್ರೇಲಿಯಾ ಪರ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಇದನ್ನೇ ತಮ್ಮ ಕೊನೆಯ ಏಕದಿನ ಪಂದ್ಯ ಎಂದು ತಂಡದ ಸಹ ಆಟಗಾರರಿಗೆ ತಿಳಿಸಿದರು. ಏಕದಿನ ಸ್ವರೂಪಕ್ಕೆ ವಿದಾಯ ಹೇಳಿದರೂ, 35

ಏಕದಿನ ಕ್ರಿಕೆಟ್ ಗೆ ಸ್ಟೀವ್ ಸ್ಮಿತ್ ವಿದಾಯ Read More »

ದೇಶಕ್ಕಾಗಿ ರಂಜಾನ್ ಉಪವಾಸ ಮುರಿದ‌ ಮೊಹಮ್ಮದ್ ಶಮಿ

ಸಮಗ್ರ ನ್ಯೂಸ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ದೇಶಕ್ಕಾಗಿ ತಮ್ಮ ರಂಜಾನ್ ಉಪವಾಸ ಮುರಿದಿದ್ದಾರೆ. ಹೌದು, ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಲು ಉಪವಾಸ ಮುರಿದಿದ್ದಾರೆ. ದೇಶಕ್ಕಾಗಿ ಶಮಿ ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮೊಹಮ್ಮದ್ ಶಮಿ ನಡೆಯನ್ನು ಕೊಂಡಾಡಿದ್ದಾರೆ. ಪಂದ್ಯದ ನಡುವೆ ಮೊಹಮ್ಮದ್ ಶಮಿ ಎನರ್ಜಿ ಜ್ಯೂಸ್ ಕುಡಿಯುತ್ತಿರುವ ವಿಡಿಯೋಗಳು ಹರಿದಾಡುತ್ತಿದೆ. ಇದೇ ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಪವಿತ್ರ

ದೇಶಕ್ಕಾಗಿ ರಂಜಾನ್ ಉಪವಾಸ ಮುರಿದ‌ ಮೊಹಮ್ಮದ್ ಶಮಿ Read More »

“ಅಂಕದ ಕೋಳಿ ರುಚಿ ತೋರಿಸ್ತೇನೆ ಬನ್ನಿ”| ಸದನದಲ್ಲಿ ಡಿಸಿಎಂ ಗೆ ಆಹ್ವಾನ ನೀಡಿದ ಶಾಸಕ ಸುನಿಲ್ ಕುಮಾರ್

ಸಮಗ್ರ ನ್ಯೂಸ್: ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಕ್ಕೆ ಅನುಮತಿ ನೀಡುವ ನಿಯಮಗಳನ್ನು ಸಡಿಲಗೊಳಿಸಿ ಎಂದು ಸದನದಲ್ಲಿ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ ಪ್ರಸ್ತಾಪಿಸಿದರು. ಗಮನ ಸೆಳೆಯುವ ಸೂಚನೆ ವೇಳೆ ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ನಿಲ್ಲಿಸುವಂತೆ ಅಡೆತಡೆಗಳು ಇವೆ.‌ ಅದನ್ನು ಸಡಿಲಗೊಳಿಸಿ ಎಂದು ಮನವಿ ಮಾಡಿದರು. ಈ ವೇಳೆ ಸ್ಪೀಕರ್‌ ಮಾತನಾಡಿ, ಮೊದಲು ಆ ರೀತಿ ಇರಲಿಲ್ಲ. 10 ಗಂಟೆಯ ನಂತರ ಧ್ವನಿವರ್ಧಕ ಬಳಸಬಾರದು ಎಂದು ನಿಯಮ ತಂದರು. ಈಗ

“ಅಂಕದ ಕೋಳಿ ರುಚಿ ತೋರಿಸ್ತೇನೆ ಬನ್ನಿ”| ಸದನದಲ್ಲಿ ಡಿಸಿಎಂ ಗೆ ಆಹ್ವಾನ ನೀಡಿದ ಶಾಸಕ ಸುನಿಲ್ ಕುಮಾರ್ Read More »

ಸಂಜೆ 7ಕ್ಕೆ ಡೆಡ್ ಸಿಟಿಯಾದರೆ ಕರಾವಳಿಗೆ ಯಾವ ಐಟಿ ಬಿಟಿಯವ್ರು ಬರ್ತಾರೆ? ಸದನದಲ್ಲಿ ಸ್ವಾರಸ್ಯಕರ ಚರ್ಚೆ ಹುಟ್ಟುಹಾಕಿದ ಡಿಸಿಎಂ ಡಿಕೆಶಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದವರಿಗೆ ರಾತ್ರಿ ಎಂಟರ್ ಟೈನ್ ಮೆಂಟ್ ಬೇಕು, ಇಲ್ಲಾಂದ್ರೆ ಮನೆಯಿಂದಾನೇ ಹೊರಗೆ ಬರಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸದನದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಡಿಕೆಶಿ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದರ. ದಕ್ಷಿಣ ಕನ್ನಡದಲ್ಲಿ ಎಲ್ಲದಕ್ಕೂ ಅವಕಾಶವಿದೆ. ಅಲ್ಲಿ ಹೆಲ್ತ್ ಟೂರಿಸಂ ಮಾಡಬಹುದು, ಅತೀ ಎಜುಕೇಷನಲ್ ಟೂರಿಸಂ ಮಾಡಬಹುದು, ಧಾರ್ಮಿಕ ಟೂರಿಸಂ ಮಾಡಬಹುದು. ಅತೀ ಹೆಚ್ಚು ಕಾಲೇಜುಗಳು, ಬೀಚ್ ಎಲ್ಲವೂ ಇದೆ. ಆದರೆ

ಸಂಜೆ 7ಕ್ಕೆ ಡೆಡ್ ಸಿಟಿಯಾದರೆ ಕರಾವಳಿಗೆ ಯಾವ ಐಟಿ ಬಿಟಿಯವ್ರು ಬರ್ತಾರೆ? ಸದನದಲ್ಲಿ ಸ್ವಾರಸ್ಯಕರ ಚರ್ಚೆ ಹುಟ್ಟುಹಾಕಿದ ಡಿಸಿಎಂ ಡಿಕೆಶಿ Read More »

ಅಕ್ರಮ ಚಿನ್ನ ಸಾಗಾಟ| ಬೆಂಗಳೂರು‌ ಏರ್ ಪೋರ್ಟ್ ನಲ್ಲಿ ನಟಿ ರನ್ಯಾ ರಾವ್ ಅರೆಸ್ಟ್

ಸಮಗ್ರ ನ್ಯೂಸ್: ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ಅವರನ್ನು​ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ವಿಚಾರ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರನ್ನು ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸಲಾಗುತ್ತಿದೆ. ಅವರು ಸುದೀಪ್ ನಟನೆಯ ‘ಮಾಣಿಕ್ಯ’ ಸಿನಿಮಾದಲ್ಲಿ ನಟಿಸಿದ್ದರು. ನಟಿ ರನ್ಯಾ ರಾವ್ ಅವರು ಡಿಜಿಪಿ ರಾಮಚಂದ್ರ ರಾವ್ ಮಗಳು. ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ರಾತ್ರಿ ಮರಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ

ಅಕ್ರಮ ಚಿನ್ನ ಸಾಗಾಟ| ಬೆಂಗಳೂರು‌ ಏರ್ ಪೋರ್ಟ್ ನಲ್ಲಿ ನಟಿ ರನ್ಯಾ ರಾವ್ ಅರೆಸ್ಟ್ Read More »

ಸೌಜನ್ಯ ಕೇಸ್ ನಲ್ಲಿ ಧ್ವನಿ‌ ಎತ್ತಿದ ಕನ್ನಡದ ಯೂಟ್ಯೂಬರ್ ಸಮೀರ್ ಗೆ ಜೀವ ಬೆದರಿಕೆ| ಯಾವಾಗ ಏನು ಬೇಕಾದರೂ ಆಗಬಹುದು ಎಂದು ಪೋಸ್ಟ್ ಹಾಕಿದ ‘ಧೂತ’

ಸಮಗ್ರ ನ್ಯೂಸ್: ಕನ್ನಡದ ಯುಟ್ಯೂಬರ್ ಸಮೀರ್ ಎಂಬಾತ ತನ್ನ ವಿಭಿನ್ನ ವಿಡಿಯೊಗಳಿಂದ ಯುವ ವೀಕ್ಷಕ ವರ್ಗವನ್ನು ತನ್ನತ್ತ ಸೆಳೆದವರು. ಮಾಟ, ದೆವ್ವ ಹಾಗೂ ವಿಸ್ಮಯಗಳಂತಹ ವಿಭಿನ್ನ ವಿಡಿಯೊಗಳನ್ನು ಮಾಡುತ್ತಾ ಬರುತ್ತಿದ್ದ ಸಮೀರ್ ಆಗಾಗ ಕೆಲ ಘಟನೆಗಳ ಕುರಿತು ಸಹ ವಿಡಿಯೊಗಳನ್ನು ಮಾಡುತ್ತಿದ್ದರು. ಹೀಗೆ ಒಳ್ಳೊಳ್ಳೆ ಅಂಶಗಳಿರುವ ವಿಡಿಯೊಗಳನ್ನು ಮಾಡುತ್ತಾ ಬಂದಿರುವ ಸಮೀರ್ ಸದ್ಯ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಹೊಸ ವಿಡಿಯೊವೊಂದನ್ನು ಹಂಚಿಕೊಂಡಿದ್ದು ಸದ್ಯ ಆ ವಿಡಿಯೊ ತೀವ್ರ ವಿರೋಧವನ್ನು ಹುಟ್ಟುಹಾಕಿದೆ. ದಶಕದ ಹಿಂದೆ ನಡೆದಿದ್ದ ಸೌಜನ್ಯಾ ರೇಪ್

ಸೌಜನ್ಯ ಕೇಸ್ ನಲ್ಲಿ ಧ್ವನಿ‌ ಎತ್ತಿದ ಕನ್ನಡದ ಯೂಟ್ಯೂಬರ್ ಸಮೀರ್ ಗೆ ಜೀವ ಬೆದರಿಕೆ| ಯಾವಾಗ ಏನು ಬೇಕಾದರೂ ಆಗಬಹುದು ಎಂದು ಪೋಸ್ಟ್ ಹಾಕಿದ ‘ಧೂತ’ Read More »

ಬಂಡೀಪುರ: ರೆಸಾರ್ಟ್‌ನಲ್ಲಿ ತಂಗಿದ್ದ ದಂಪತಿ, ಮಗು ಅಪಹರಣ

ಸಮಗ್ರ ನ್ಯೂಸ್: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದ ದಂಪತಿ ಮತ್ತು ಅವರ ಮಗುವನ್ನು ದುಷ್ಕರ್ಮಿಗಳು ಅಪಹರಣ ಮಾಡಿರುವ ಘಟನೆ ನಡೆದಿದೆ. ನಿಶಾಂತ್ ಮತ್ತು ಚಂದನ ದಂಪತಿಗಳು ತಮ್ಮ ಮಗುವಿನೊಂದಿಗೆ ಭಾನುವಾರ ರಾತ್ರಿ ಬಂಡೀಪುರ ಸಮೀಪದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ದಂಪತಿ ಹಾಗೂ ಮಗು ರೆಸಾರ್ಟ್ ನಿಂದ ಹೊರ ಬಂದ ವೇಳೆ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಮೂವರನ್ನು ಅಪಹರಿಸಿದ್ದಾರೆಂದು ತಿಳಿದುಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು,

ಬಂಡೀಪುರ: ರೆಸಾರ್ಟ್‌ನಲ್ಲಿ ತಂಗಿದ್ದ ದಂಪತಿ, ಮಗು ಅಪಹರಣ Read More »