March 2025

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ| ₹.400 ಗಡಿ ದಾಟಿದ ಹೊಸ ಅಡಿಕೆ

ಸಮಗ್ರ ನ್ಯೂಸ್: ಹೊಸ ಅಡಿಕೆ, ರಬ್ಬರ್‌, ಕಾಳುಮೆಣಸು ಧಾರಣೆ ಮತ್ತೆ ಏರಿಕೆ ಕಂಡಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 400 ರೂ. ದಾಟಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ. 11ರಂದು ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 400 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 405 ರೂ. ಇತ್ತು. ಸಿಂಗಲ್‌ ಚೋಲ್‌ 455 ರೂ., ಡಬ್ಬಲ್‌ ಚೋಲ್‌ 495 ರೂ. ಧಾರಣೆ ಇದ್ದು, ಏರಿಕೆ ಕಂಡಿಲ್ಲ. ಮಾ. 11ರಂದು ರಬ್ಬರ್‌ ಗ್ರೇಡ್‌ಗೆ 190.50 ರೂ., ರಬ್ಬರ್‌ ಸ್ಕ್ರಾಪ್‌ […]

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ| ₹.400 ಗಡಿ ದಾಟಿದ ಹೊಸ ಅಡಿಕೆ Read More »

ಹವಾಮಾನ ವರದಿ| ಕರಾವಳಿಯಲ್ಲಿ ಮತ್ತೆ ‘ಹೀಟ್ ವೇವ್’ ಆತಂಕ| ಸುಳ್ಯದಲ್ಲಿ ‌ದಾಖಲೆಯ 41.4° ಡಿಗ್ರಿ ಉಷ್ಣಾಂಶ ದಾಖಲು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಫೆ.11ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಸುಳ್ಯದಲ್ಲಿ ರಾಜ್ಯದಲ್ಲೇ ಅತ್ಯಧಿಕ 41.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಮತ್ತು ಉಡುಪಿ ಮತ್ತು ಕೊಡಗು ಜಿಲ್ಲೆಯ ಕೆಲವು ಕಡೆ 38 ಡಿ.ಸೆ.ಗೂ ಅಧಿಕ ತಾಪಮಾನ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಮತ್ತು ಉಡುಪಿ

ಹವಾಮಾನ ವರದಿ| ಕರಾವಳಿಯಲ್ಲಿ ಮತ್ತೆ ‘ಹೀಟ್ ವೇವ್’ ಆತಂಕ| ಸುಳ್ಯದಲ್ಲಿ ‌ದಾಖಲೆಯ 41.4° ಡಿಗ್ರಿ ಉಷ್ಣಾಂಶ ದಾಖಲು Read More »

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ರಿಕ್ಷಾ ಚಾಲಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಗೋಳಿತೊಟ್ಟು ಗ್ರಾಮದ ಆಂಜರ ಮನೆ ನಿವಾಸಿ ಗಗನ್‌ ರಾಜ್‌ ಶೆಟ್ಟಿ (20) ಅವರ ಮೃತದೇಹ ಇಲ್ಲಿನ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಆಂಜರಮನೆ ನಿವಾಸಿ ರವಿಚಂದ್ರ ಶೆಟ್ಟಿ ಅವರ ಮಗನಾಗಿದ್ದ ಗಗನ್‌ ರಾಜ್‌ ಶೆಟ್ಟಿ ರಿಕ್ಷಾ ಚಾಲಕನಾಗಿದ್ದು, ಸೋಮವಾರ ರಾತ್ರಿ ನೆಲ್ಯಾಡಿ ಕಡೆಗೆ ಬಾಡಿಗೆ ಇದೆ ಎಂದು ಹೇಳಿ ಹೋದವರು ರಾತ್ರಿ 10 ಗಂಟೆಯಿಂದ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಅವರ ರಿಕ್ಷಾವು ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ಬಳಿ ನಿಲ್ಲಿಸಿದ್ದು ಕಂಡು ಬಂದಿತ್ತು. ಈ

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ರಿಕ್ಷಾ ಚಾಲಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ Read More »

ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಕಾಳ್ಗಿಚ್ಚು| ಎರಡು ದಿನಗಳಿಂದ ಉರಿಯುತ್ತಿರುವ ಬೆಂಕಿಗೆ ನೂರಾರು ಎಕ್ರೆ ಅರಣ್ಯ ನಾಶ

ಸಮಗ್ರ ನ್ಯೂಸ್: ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ‌ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶಕ್ಕೆ ಕಾಡ್ಗಿಚ್ಚು ಹಬ್ಬಿದ್ದು ಕಳೆದ ಎರಡು ದಿನಗಳಿಂದ ಅರಣ್ಯ ನಿರಂತರವಾಗಿ ಬೆಂಕಿಗೆ ಆಹುತಿಯಾಗುತ್ತಿದೆ. ಕಡಿದಾದ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೇ ಇರುವುದರಿಂದ ಬೆಂಕಿ ಕೆನ್ನಾಲಿಗೆ ಸುಮಾರು 50 ಕಿ.ಮೀ.ದೂರದ ಬೆಳ್ತಂಗಡಿ ವರೆಗೆ ನೇರವಾಗಿ ಗೋಚರಿಸುತ್ತಿದೆ. ವನ್ಯಜೀವಿ‌ ವಿಭಾಗದ ಸಾಕಷ್ಟು ಮರಗಿಡ, ಹುಲ್ಲು, ಪ್ರಾಣಿಗಳು ಬಲಿಯಾಗಿರುವ ಆತಂಕ ಎದುರಾಗಿದೆ.

ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಕಾಳ್ಗಿಚ್ಚು| ಎರಡು ದಿನಗಳಿಂದ ಉರಿಯುತ್ತಿರುವ ಬೆಂಕಿಗೆ ನೂರಾರು ಎಕ್ರೆ ಅರಣ್ಯ ನಾಶ Read More »

ಬಿರುಬಿಸಿಲಿನ‌ ನಡುವೆ ರಾಜಧಾನಿ ಬೆಂಗಳೂರಿನ ಹಲವೆಡೆ ಮಳೆ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವೆಡೆ ದಿಢೀರ್​ ಮಳೆಯಾಗಿದೆ. ಇಂದು (ಮಾರ್ಚ್ 11) ಸಂಜೆ ಶಾಂತಿನಗರ, ಕಾರ್ಪೊರೇಷನ್​, ರಿಚ್ಮಂಡ್​ ಸರ್ಕಲ್, ಕೆ.ಆರ್.ಮಾರ್ಕೆಟ್​, ಮೆಜೆಸ್ಟಿಕ್​ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೇಸಿಗೆ ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣನ ಸಿಂಚನವಾಗಿದೆ. ಕರ್ನಾಟಕದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್‌ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ

ಬಿರುಬಿಸಿಲಿನ‌ ನಡುವೆ ರಾಜಧಾನಿ ಬೆಂಗಳೂರಿನ ಹಲವೆಡೆ ಮಳೆ Read More »

ಪಿಲಿಕುಳ: ಮತ್ತೆರಡು ಮರಿಗಳಿಗೆ ಜನ್ಮ ನೀಡಿದ ರಾಣಿ| ಈಗ ಈಕೆ ಹತ್ತು ಮಕ್ಕಳ ತಾಯಿ

ಸಮಗ್ರ ನ್ಯೂಸ್: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿ ಎನ್ನುವ ಹೆಣ್ಣು ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಈ ಮೂಲಕ ಇಲ್ಲಿನ ಹುಲಿಗಳ ಸಂಖ್ಯೆ ಹತ್ತಕ್ಕೇರಿದೆ. ಒಂದು ಗಂಡು ಹಾಗೂ ಹೆಣ್ಣು ಮರಿಗಳಾಗಿದ್ದು ಇವು ಆರೋಗ್ಯದಿಂದಿವೆ. ಇದೇ “ರಾಣಿ ಹುಲಿ’ಯು 2016ರಲ್ಲಿ 5 ಮರಿಗಳಿಗೆ ಜನ್ಮನೀಡಿ ದಾಖಲೆ ನಿರ್ಮಿಸಿತ್ತು. 2021 ರಲ್ಲಿ 3 ಮರಿಗಳಿಗೆ ಜನ್ಮ ನೀಡಿದ್ದು, ಒಟ್ಟು ಹತ್ತು ಮಕ್ಕಳ ತಾಯಿ. 2016ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟದಿಂದ ರಾಣಿಯನ್ನು ಪಿಲಿಕುಳಕ್ಕೆ ತಂದಿದ್ದು, ಪ್ರತಿಯಾಗಿ ಇಲ್ಲಿನ

ಪಿಲಿಕುಳ: ಮತ್ತೆರಡು ಮರಿಗಳಿಗೆ ಜನ್ಮ ನೀಡಿದ ರಾಣಿ| ಈಗ ಈಕೆ ಹತ್ತು ಮಕ್ಕಳ ತಾಯಿ Read More »

ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 13 ನಗರಗಳು

ಸಮಗ್ರ ನ್ಯೂಸ್‌: ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಈ ಪೈಕಿ 13 ನಗರಗಳು ಭಾರತದಲ್ಲೇ ಇದೆ. ಬರ್ನಿಹತ್, ದೆಹಲಿ, ಮುಲ್ಲನ್‌ಪುರ (ಪಂಜಾಬ್), ಫರಿದಾಬಾದ್, ಲೋನಿ, ನವದೆಹಲಿ, ಗುರಗಾಂವ್, ಗಂಗಾನಗರ, ಗ್ರೇಟರ್ ನೋಯ್ತಾ, ಭಿವಾಡಿ, ಮುಜಫರ್‌ನಗರ, ಹನುಮಾನ್‌ ಗಢ ಮತ್ತು ನೋಯ್ದಾ ಈ ಪಟ್ಟಿಯಲ್ಲಿ ಸೇರಿದೆ. ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ ಐಕ್ಯೂಏರ್‌ನ ‘ವಿಶ್ವ ವಾಯು ಗುಣಮಟ್ಟ ವರದಿ 2024’ ಪ್ರಕಾರ, ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿ ಉಳಿದಿದೆ. 2024 ರಲ್ಲಿ,

ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 13 ನಗರಗಳು Read More »

ಪೊಲೀಸರು ಸ್ವಂತ ವಾಹನದ ಮೇಲೆ ‘ಪೊಲೀಸ್’ ಎಂದು ಬರೆಸಿದರೆ ಕಾನೂನು ಉಲ್ಲಂಘನೆ: ಗೃಹ ಸಚಿವ ಪರಮೇಶ್ವರ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯ ಅಧಿಕಾರಿಗಳು ‌ಹಾಗೂ ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ. ಒಂದೇ ವೇಳೆ ಬರೆಸಿದ್ದರೇ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ. ವಿಧಾನ ಸದನದಲ್ಲಿ ಶ್ರವಣಬೆಳಗೊಳದ ಶಾಸಕ ಬಾಲಕೃಷ್ಣ ಸಿಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 561ಕ್ಕೆ ಲಿಖಿತ ಮೂಲಕ ಸಚಿವ ಡಾ. ಜಿ ಪರಮೇಶ್ವರ್​ ಉತ್ತರ ನೀಡಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ‌ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್

ಪೊಲೀಸರು ಸ್ವಂತ ವಾಹನದ ಮೇಲೆ ‘ಪೊಲೀಸ್’ ಎಂದು ಬರೆಸಿದರೆ ಕಾನೂನು ಉಲ್ಲಂಘನೆ: ಗೃಹ ಸಚಿವ ಪರಮೇಶ್ವರ Read More »

9 ತಿಂಗಳ ಬಳಿಕ ಭೂಮಿಗೆ ವಾಪಾಸ್ಸಾಗಲಿದ್ದಾರೆ ಸುನಿತಾ ವಿಲಿಯಮ್ಸ್ ಮತ್ತು ಬೆರ್ರಿ ವಿಲ್

ಸಮಗ್ರ ನ್ಯೂಸ್: ಕಳೆದ 9 ತಿಂಗಳಿಂದ ಅಂತರಿಕ್ಷದಲ್ಲಿ ತ್ರಿಶಂಕು ಸ್ಥಿತಿಗೆ ಸಿಲುಕಿದ್ದ ನಾಸಾ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬೆರ್ರಿ ವಿಲ್ ಮೋರ್ ಅವರು ಕೊನೆಗೂ ಮಾ.15 ರಂದು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಅಧಿಕೃತ ವಿಷಯ ಪ್ರಕಟಿಸಿದೆ. ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಡ್ರಾಗನ್ ಗಗನ ನೌಕೆಯು ಪರ್ಯಾಯ ಗಗನಯಾನಿಗಳೊಂದಿಗೆ ಮುಂದಿನ ವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದು, ಅಲ್ಲಿಂದ ಸುನಿತಾ ವಿಲಿಯಮ್ಸ್ ಮತ್ತು ವಿಲ್ ಮೋರ್ ಅವರನ್ನು ಭೂಮಿಗೆ ಕರೆತರಲಾಗುವುದು. 10 ದಿನಗಳ

9 ತಿಂಗಳ ಬಳಿಕ ಭೂಮಿಗೆ ವಾಪಾಸ್ಸಾಗಲಿದ್ದಾರೆ ಸುನಿತಾ ವಿಲಿಯಮ್ಸ್ ಮತ್ತು ಬೆರ್ರಿ ವಿಲ್ Read More »

ಅಕ್ರಮ ಚಿನ್ನ ಸಾಗಾಟ| ಪರಪ್ಪನ‌ ಅಗ್ರಹಾರ ಪಾಲಾದ ನಟಿ ರನ್ಯಾ ರಾವ್

ಸಮಗ್ರ ನ್ಯೂಸ್: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಡಿಆರ್ ಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ನಟಿ ರನ್ಯಾ ರಾವ್ ಜೈಲುಪಾಲಾಗಿದ್ದಾರೆ. ಡಿಆರ್ ಐ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯ ನಟಿ ರನ್ಯಾ ರಾವ್ ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ರನ್ಯಾ ರಾವ್ ಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿದಿಸಲಾಗಿದ್ದು, ನಟಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.

ಅಕ್ರಮ ಚಿನ್ನ ಸಾಗಾಟ| ಪರಪ್ಪನ‌ ಅಗ್ರಹಾರ ಪಾಲಾದ ನಟಿ ರನ್ಯಾ ರಾವ್ Read More »