ಸಮಗ್ರ ನ್ಯೂಸ್: ಈಗಾಗಲೇ ಬೆಲೆ ಏರಿಕೆಯಿಂದ ಜನರು ತಮಗೆ ಅಗತ್ಯವಿರುವ ದಿನನಿತ್ಯದ ವಸ್ತುಗಳನ್ನು ಖರೀದಿಸಿ ಜೀವನ ಮಾಡಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ದೇಶಾದ್ಯಂತ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿರುವುದು ಜನರಿಗೆ ಒಂದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಯಾಕೆಂದರೆ ನಾಳೆಯಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರ, ವಿದ್ಯುತ್ ದರ, ಜೊತೆಗೆ ದೇಶದಲ್ಲಿ ಹೊಸ ಟೋಲ್ ದರಗಳು ಜಾರಿಗೆ ಬರಲಿವೆ.
ಹಾಲಿನ ದರ 4 ರೂಪಾಯಿ, ಮೊಸರು ದರ 4 ರೂಪಾಯಿ, ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ, ಅಲ್ಲದೇ ಮಾಸಿಕ ಶುಲ್ಕ 20 ರೂ ಏರಿಕೆ ಆಗಲಿದ್ದು, ದೇಶದಲ್ಲಿ ಟೋಲ್ ದರ ಶೇಕಡ 5ರಷ್ಟು ಹೆಚ್ಚಳವಾಗಲಿದೆ.
ಹೊಸ ವಾಹನ ಖರೀದಿಸಬೇಕು ಎಂದು ಕನಸು ಕಾಣುತ್ತಿರುವ ಗ್ರಾಹಕರಿಗೂ ಶಾಕ್ ಎದುರಾಗಿದೆ. ಉಕ್ಕು ಬಿಡಿ ಭಾಗ ದುಬಾರಿಯಾಗಲಿದ್ದು, ಇದರ ಜೊತೆಗೆ ಬಿಡಿ ಭಾಗ ಉಕ್ಕುಗಳ ಆಮದು ದರ ನಾಳೆಯಿಂದಲೇ ಏರಿಕೆಯಾಗುತ್ತದೆ. ಇದರಿಂದಾಗಿ ವಾಹನಗಳ ಬೆಲೆಯೂ ಗಗನಕ್ಕೇರಲಿದೆ.