ಬೆಳ್ತಂಗಡಿ: ಬೈಕ್ ಅಪಘಾತಕ್ಕೆ ಯಕ್ಷಗಾನ ಭಾಗವತ ಬಲಿ

ಸಮಗ್ರ ನ್ಯೂಸ್: ಎರಡು ಬೈಕ್ ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯ ಕಿಲಾರ ಮಾರಿಕಾಂಭ ದೇವಸ್ಥಾನದ ತಿರುವಿನಲ್ಲಿ ನಡೆದಿದೆ.

Ad Widget ... ..

ಅಂಡಿಂಜೆ ಗ್ರಾಮದ ಪಿಯೂಲಿರು ಮನೆ ನಿವಾಸಿ ಮಂಗಳಾದೇವಿ ಯಕ್ಷಗಾನ ಮೇಳದ ಯಕ್ಷಗಾನ ಭಾಗವತರಾದ ಸತೀಶ್ ಆಚಾರ್ಯ ಅಂಡಿಂಜೆ (40) ಸಾವನಪ್ಪಿದವರು.

Ad Widget

ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ 4 ಗಂಟೆಗೆ ಸತೀಶ್ ಆಚಾರ್ಯ ಅವರು ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ ಅಂಡಿಂಜೆ ಕಿಲಾರ ಮಾರುಗುಡಿ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಇವರು ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಈ ದುರ್ಘಟನೆ ನಡೆದಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಎದುರಿನಿಂದ ಬರುತ್ತಿದ್ದ ಬೈಕ್‌ನಲ್ಲಿದ್ದವರಿಗೂ ಗಾಯವಾಗಿದೆ. ಈ ಬಗ್ಗೆ ವೇಣೂರು ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *