ಹವಾಮಾನ ವರದಿ| ಮಾ.30, 31ರಂದು ಕರಾವಳಿಯಲ್ಲಿ ಮಳೆ ಸಾಧ್ಯತೆ| ದ.ಕ, ಉಡುಪಿ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಮಾರ್ಚ್ ತಿಂಗಳ ಕೊನೆಯ ಎರಡು ದಿನಗಳಲ್ಲಿ ಕರಾವಳಿ ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಾ.31 ಮತ್ತು ಎ.1 ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ “ಎಲ್ಲೋ ಅಲರ್ಟ್‌’ ಘೋಷಣೆ ಮಾಡಲಾಗಿದೆ. ಈ ವೇಳೆ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯುವ ನಿರೀಕ್ಷೆ ಇದೆ.

Ad Widget ... ..

ಶುಕ್ರವಾರ ಕರಾವಳಿಯ ಹಲವೆಡೆ ಹಗಲಿನಲ್ಲಿ ಮೋಡದ ವಾತಾವರಣ ಇತ್ತು. ರಾತ್ರಿಯ ವೇಳೆ ಪಶ್ಚಿಮ ಘಟ್ಟದ ತಪ್ಪಲು ಭಾಗದ ಮುಂಡಾಜೆ, ಕಡಿರುದ್ಯಾವರ, ಮುಂಡಾಜೆ, ಮಡಂತ್ಯಾರು, ಬೆಳ್ತಂಗಡಿ, ಧರ್ಮಸ್ಥಳ, ಗುರಿಪ್ಪಳ್ಳ, ಬಂದಾರು, ಕನ್ಯಾಡಿ ಮತ್ತು ಬಂಟ್ವಾಳ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ.

Ad Widget

ರಾಜ್ಯದ ತುಮಕೂರು, ವಿಜಯನಗರ, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಗದಗ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿಯಲ್ಲಿ ಒಣಹವೆ ಇರಲಿದೆ.

Leave a Comment

Your email address will not be published. Required fields are marked *