ಸಮಗ್ರ ನ್ಯೂಸ್: ಮಚ್ಚು ಹಿಡಿದು ಮಾಜಿ ಬಿಗ್ ಬಾಸ್ ಸ್ಪರ್ಧಿ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಮತ್ತು ರಜತ್ ಇಬ್ಬರಿಗೂ ಜಾಮೀನು ಮಂಜೂರಾಗಿದೆ. ವಿನಯ್ ಹಾಗೂ ರಜತ್ ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋನಲ್ಲಿ ವಿನಯ್ ಮತ್ತು ರಜತ್ ಇಬ್ಬರೂ ಸಹ ಮಚ್ಚೊಂದನ್ನು ಹಿಡಿದುಕೊಂಡಿದ್ದರು. ಇದೇ ಕಾರಣಕ್ಕೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ನಂತರ ಸಾಕ್ಷ್ಯ ನಾಶ ಪ್ರಕರಣದಡಿ ಇಬ್ಬರನ್ನೂ ಬಂಧಿಸಲಾಗಿತ್ತು. ಇದೀಗ ಇಬ್ಬರಿಗೂ ಸಹ ಷರತ್ತುಬದ್ಧ ಜಾಮೀನನ್ನು 24ನೇ ಎಸಿಜೆಎಂ ನ್ಯಾಯಾಲಯವು ನೀಡಿದೆ. ಇಬ್ಬರಿಗೂ ಸಹ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, 10 ಸಾವಿರ ರೂಪಾಯಿ ಶೂರಿಟಿ ನೀಡುವ ಷರತ್ತನ್ನು ನ್ಯಾಯಾಲಯ ವಿಧಿಸಿದೆ.
ಇನ್ನೂ ಜಾಮೀನು ಕಾಪಿ ಸಂಜೆ ವೇಳೆಗೆ ಜೈಲಿಗೆ ಕೊಂಡೊಯ್ದರೆ ಇಂದೇ ವಿನಯ್ ಹಾಗೂ ರಜತ್ ಬಿಡುಗಡೆ ಆಗಲಿದ್ದಾರೆ. ಇಲ್ಲವಾದರೆ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆದು ನಾಳೆ (ಮಾರ್ಚ್ 29) ಬಿಡುಗಡೆ ಆಗಬೇಕಾಗುತ್ತದೆ.