ಸಮಗ್ರ ನ್ಯೂಸ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಪತ್ನಿ ಶೋಭಾ ಹೆಗಡೆ ಆಕಸ್ಮಿಕ ಅವಘಡದಲ್ಲಿ ನಿಧನರಾಗಿದ್ದಾರೆ. ಅಡಕೆ ಚಾಲಿ ಸುಲಿಯುವ ಯಂತ್ರಕ್ಕೆ ಸಿಲುಕಿ ಶೋಭಾ ಮೃತಪಟ್ಟಿದ್ದಾರೆ.
ಶೋಭಾ ಮನೆಯಲ್ಲಿ ಅಡಕೆ ಸುಲಿಯುವ ಕಾರ್ಯ ನಡೆಯುತ್ತಿತ್ತು. ಶೋಭಾ ಹೆಗಡೆ ಕೆಲಸಗಾರರನ್ನು ನೋಡಿಕೊಳ್ಳಲು ಹೋಗಿದ್ದರು. ಈ ವೇಳೆ ಚಾಲಿ ಸುಲಿಯುವ ಯಂತ್ರಕ್ಕೆ ಆಕಸ್ಮಿಕವಾಗಿ ಶೋಭಾ ಸೀರೆಯ ಸೆರಗು ಸಿಲುಕಿ ಅವರು ಪ್ರಾಣಬಿಟ್ಟಿದ್ದಾರೆ. ಕೆಲಸಗಾರರು ಅಲ್ಲಿಯೇ ಇದ್ದರೂ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ. ಯಂತ್ರ ಶೋಭಾರನ್ನು ಎತ್ತಿ ಬಿಸಾಡಿದ್ದು, ರಕ್ತಸ್ರಾವವಾಗಿ ಸಾವನಪ್ಪಿದ್ದಾರೆ.
ಕಳೆದ ಮೂರು ವರ್ಷಗಳಿಂದ ಚಾಲಿ ಸುಲಿಯುವ ವೇಳೆ ಶೋಭಾ ಹೆಗಡೆ ಅವರೇ ದೇಖರೇಖಿ ನೋಡಿಕೊಳ್ಳುತ್ತಿದ್ದರು. ಆದ್ರೆ ವಿಧಿ ಕೈಕೊಟ್ಟಿದ್ದು, ನಿನ್ನೆ ಸಾವಿಗೀಡಾಗಿದ್ದಾರೆ. ಈ ಸಂಬಂಧ ಶಿರಸಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.