ಧರ್ಮಸ್ಥಳ ಠಾಣಾ ಸಬ್ ಇನ್ಸ್‌ಪೆಕ್ಟರ್ ನಿಂದ ವರದಕ್ಷಿಣೆ ಕಿರುಕುಳ| ಕಿರಾತಕನ ಹಣದಾಹಕ್ಕೆ ಆಸ್ಪತ್ರೆ ಪಾಲಾದ ಪತ್ನಿ

ಸಮಗ್ರ ನ್ಯೂಸ್: ಜನರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸಪ್ಪನೇ ಹೆಂಡತಿಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಕಿಶೋರ್ ವಿರುದ್ಧ ಚಂದ್ರಲೇಔಟ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ.

Ad Widget .

2024ರಲ್ಲಿ ಮೂಡಿಗೆರೆ ಸಬ್ ಇನ್ಸ್ ಪೆಕ್ಟರ್ ʼರನ್ನು ವರ್ಷ ಮದುವೆಯಾಗಿದ್ದರು. ವರದಕ್ಷಿಣೆಗಾಗಿ 10 ಲಕ್ಷ ನಗದು,22 ಲಕ್ಷದ ಕ್ರೇಟಾ ಕಾರು,135 ಗ್ರಾಂ ಚಿನ್ನ ನೀಡಿದ್ರು. ಅಲ್ಲದೆ ವರ್ಷಾಳಿಗೆ ಪೋಷಕರು 900 ಗ್ರಾಂ ಚಿನ್ನ ನೀಡಿದ್ದರು. ಜೊತೆಗೆ ಒಂದು ಕೋಟಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು.

Ad Widget . Ad Widget .

ಇಷ್ಟಾದರೂ ಮೂಡಿಗೆರೆಯಿಂದ ಟ್ರಾನ್ಸ್ ಫರ್ ಮಾಡಿಸಲು ಕಿಶೋರ್ 10 ಲಕ್ಷ ಕೇಳಿದ್ದರು. ಹಣ ತರದಿದ್ದಕ್ಕೆ ಹೆಂಡತಿ ವರ್ಷಾಳಿಗೆ ಅವಾಚ್ಯವಾಗಿ ನಿಂದಿಸಿ ಗಂಡ,ಅತ್ತೆ ಮಾವ ಹಾಗೂ ಮೈದುನನಿಂದ ಹಲ್ಲೆ ಮಾಡಲಾಗಿದೆ. ಅದಲ್ಲದೆ ಮನಸೋ ಇಚ್ಚೆ ಹಲ್ಲೆ ನಡೆಸಿ ಕಿಶೋರ್ ವರ್ಷಾಳನ್ನು ಧರ್ಮಸ್ಥಳದ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಡೌರಿ ಕೇಸ್ ಹಾಗು ಬಿ ಎನ್ ಎಸ್ ಎಸ್ ಅಡಿ ಕಿಶೋರ್ ವಿರುದ್ಧ ಚಂದ್ರಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *