ಮುರಿದು ಬಿದ್ದಹುಸ್ಕೂರು ಮದ್ದೂರಮ್ಮ ಜಾತ್ರಾ ರಥ‌| ಸೌಜನ್ಯ ‌ಪೋಟೋ ಹಾಕಿದ್ದೇ ಕಾರಣ ಅಂತ ಜಾಲತಾಣಗಳಲ್ಲಿ ವೈರಲ್

ಸಮಗ್ರ ನ್ಯೂಸ್: ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ಜನತೆ ತಯಾರಿಸಿದ್ದ 100 ಅಡಿ ಎತ್ತರದ ರಥ (ಕುರ್ಜು) ಎಳೆದುಕೊಂಡು ಹೋಗುವ ಮುನ್ನ ಜಸ್ಟೀಸ್ ಫಾಸ್ ಸೌಜನ್ಯ ಎಂಬ ಫಲಕವನ್ನು ತೋರಿಸಿದ್ದರಿಂದಲೇ ಈ ರಥ ಮುರಿದು ಬಿದ್ದಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಜೊತೆಗೆ, ಸೌಜನ್ಯಾಗೆ ನ್ಯಾಯ ಸಿಗುವುದಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ ಎಂದು ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.

Ad Widget .

ಕರ್ನಾಟದಕ ಅತಿ ಎತ್ತರದ ರಥಗಳನ್ನು ನಿರ್ಮಾಣ ಮಾಡುವ ಜಾತ್ರೆ ಎಂದರೆ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವದ ರಥಗಳಾಗಿವೆ. ಇಲ್ಲಿ ಸುತ್ತಲಿನ ಗ್ರಾಮಸ್ಥರು ಮದ್ದೂರಮ್ಮ ದೇವಿಗೆ ತಮ್ಮ ತಮ್ಮ ಗ್ರಾಮದಿಂದ ಕುರ್ಜು (ರಥ) ನಿರ್ಮಿಸಿಕೊಂಡು ಬಂದು ಅರ್ಪಣೆ ಮಾಡುತ್ತಾರೆ. ಪ್ರತಿ ವರ್ಷ ನಡೆಯುವ ಈ ಜಾತ್ರೆಗೆ ಯಾವ ಗ್ರಾಮಸ್ಥರು ಅತಿ ಎತ್ತರದ ರಥವನ್ನು ನಿರ್ಮಾಣ ಮಾಡುತ್ತಾರೋ ಅವರಿಗೆ ದೇವಿಯ ಧ್ವಜವನ್ನು ನೀಡಲಾಗುತ್ತದೆ. ಜೊತೆಗೆ, ಅತಿ ಎತ್ತರದ ರಥ ಎಂದು ಗೌರವಿಸಲಾಗುತ್ತದೆ. ಹೀಗಾಗಿ, ಸುತ್ತಲಿನ 20 ಹಳ್ಳಿಗಳ ಜನರು ಅತಿ ಎತ್ತರದ ರಥಗಳನ್ನು ನಿರ್ಮಿಸಲು ಪ್ರತಿವರ್ಷ ಶ್ರಮಿಸುತ್ತಲೇ ಇರುತ್ತಾರೆ.

Ad Widget . Ad Widget .

ಈ ವರ್ಷ ದೊಡ್ಡ ನಾಗಮಂಗಲ ಹಾಗೂ ರಾಯಸಂದ್ರ ಎರಡು ಗ್ರಾಮಗಳ ಜನರು ಸೇರಿಕೊಂಡು 100 ಅಡಿ ಎತ್ತರದ ರಥವನ್ನು ನಿರ್ಮಿಸಿದ್ದಾರೆ. ಈ ರಥವನ್ನು ಶನಿವಾರ ಸಂಜೆ ಮದ್ದೂರಮ್ಮ ದೇವಸ್ಥಾನದ ಬಳಿಗೆ ಎಳೆದುಕೊಂಡು ಹೋಗುವಾಗ ಭಾರೀ ಗಾಳಿ ಹಾಗೂ ಮಳೆ ಬಂದಿದ್ದರಿಂದ ಜನರು ರಥವನ್ನು ಎಳೆಯುತ್ತಿದ್ದಾಗಲೇ ಗಾಳಿಯ ಒತ್ತಡಕ್ಕೆ ಸಿಲುಕು ಧರೆಗುರುಳಿತು. ಈ ಅವಘಡದಲ್ಲಿ ರಥದಡಿ ಸಿಲುಕಿ ಒಬ್ಬ ವ್ಯಾಪಾರಿ ಸಾವನ್ನಪ್ಪಿದರೆ, ಮತ್ತೊಬ್ಬರಿಗೆ ಗಂಭೀರ ಗಾಯವಾಗಿತ್ತು. ಸುಮಾರು 20 ಜನರು ಸಣ್ಣಪುಟ್ಟ ಗಾಯಗಳಾಗು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ರಥ ಉರುಳು ಬೀಳಲು ಜಸ್ಟೀಸ್ ಫಾರ್ ಸೌಜನ್ಯಎಂಬ ಫಲಕವನ್ನು ರಥದ ಮೇಲೆ ಹೋಗಿ ಪ್ರದರ್ಶನ ಮಾಡಿದ್ದೇ ಕಾರಣ ಎಂಬಂತೆ ಕೆಲವರು ಆರೋಪ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *