ಸಮಗ್ರ ನ್ಯೂಸ್: ಪ್ರೀತಿಯಲ್ಲಿ ಬಿದ್ದವರು ಲೋಕವನ್ನೇ ಮರೆಯುತ್ತಾರೆ ಎಂದು ಹೇಳುತ್ತಾರೆ ಅದರಂತೆ ಪ್ರೇಮಿಗಳು ನಾವು ಎಲ್ಲಿದ್ದೇವೆ ಏನುಮಾಡುತ್ತಿದ್ದೇವೆ ಎಂಬ ಗುಂಗೇ ಇಲ್ಲದೆ ಪಾರ್ಕ್ , ಬಸ್, ಟ್ರೈನ್, ಬಸ್‌ಸ್ಟ್ಯಾಂಡ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಮೈ ಮರೆತು ಕಿಸ್ಸಿಂಗ್-ರೊಮ್ಯಾನ್ಸ್ ಮಾಡುವವರು ತುಂಬಾ ಜನ ಇದ್ದರೆ ಅದು ಮುಜುಗರಕ್ಕೆ ಒಳಗಾಗಿಸುತ್ತದೆ.
ಅದರಂತೆ ಇದೀಗ ಬೆಂಗಳೂರಿನ ಕ್ಯಾಬ್‌ನಲ್ಲೂ ಇಂತಹ ಘಟನೆ ನಡೆಯುತ್ತಿರುವುದರಿಂದ ಬೇಸತ್ತು ಕ್ಯಾಬ್ ಡ್ರೈವರ್ ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ನಡುವೆ ಅಂತರವಿರಲಿ ಎಂದು ವಾರ್ನಿಂಗ್ ಬೋರ್ಡ್ ಒಂದನ್ನು ಕ್ಯಾಬ್‌ನಲ್ಲಿ ನೇತು ಹಾಕಿದ್ದಾನೆ. ಈ ಎಚ್ಚರಿಕೆ ಫಲಕದ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು dancing_pappu ಎಂಬ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಕ್ಯಾಬ್‌ನಲ್ಲಿದ್ದ ಈ ಎಚ್ಚರಿಕೆ ಫಲಕದ ಫೋಟೋವನ್ನು ಹಂಚಿಕೊಂಡು, “ಇಂದು ಬೆಂಗಳೂರಿನ ಕ್ಯಾಬ್ ಒಂದರಲ್ಲಿ ಇದನ್ನು ನೋಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ಎಚ್ಚರಿಕೆ ಫಲಕ ಫೋಟೋದಲ್ಲಿ “ಎಚ್ಚರಿಕೆ!! ನೋ ರೊಮ್ಯಾನ್ಸ್; ಇದು ಕ್ಯಾಬ್. ಖಾಸಗಿ ಸ್ಥಳ ಅಥವಾ ಓಯೋ ಅಲ್ಲ ಆದ್ದರಿಂದ ದಯವಿಟ್ಟು ಇಲ್ಲಿ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಶಾಂತವಾಗಿ ವರ್ತಿಸಿ” ಎಂಬ ಬರಹವನ್ನು ಬರೆದಿರುವ ದೃಶ್ಯವನ್ನು ಕಾಣಬಹುದು.