ಸಮಗ್ರ ನ್ಯೂಸ್: ಮಾರ್ಚ್ ತಿಂಗಳ ಕೊನೆಯ ವಾರವಿದು. ವಾರಾಂತ್ಯದಲ್ಲಿ ನಾವು ಯುಗಾದಿ ಹಬ್ಬದೊಂದಿಗೆ ನವ ಸಂವತ್ಸರಕ್ಕದ ಕಾಲಿಡಲಿದ್ದೇವೆ. ಈ ವಾರದಲ್ಲಿ ಯಾವ ರಾಶಿಗೆ ಲಾಭ? ಯಾರಿಗೆ ಶುಭ? ನೋಡೋಣ ಬನ್ನಿ…
ಮೇಷ ರಾಶಿ:
ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ರಾಶಿ ಚಕ್ರದ ಮೊದನೇ ರಾಶಿಯವರಿಗೆ ಮಿಶ್ರಫಲ. ವಿಶ್ರಾಂತಿಯನ್ನು ಪಡೆಯಬೇಕು ಎಂಬ ಮನೋಭಾವ ಅಧಿಕವಾಗಲಿದೆ. ಶತ್ರುಗಳಿಂದ ಸಂಪತ್ತು ಹರಣ ಹಾಗೂ ವ್ಯರ್ಥವಾದ ಕೆಸಗಳಿಂದ ಬೇಸರವುಂಟಾಗುವುದು. ಮಕ್ಕಳು ಮತ್ತು ಸಂಗಾತಿಗಳು ರೋಗಬಾಧೆಯಿಂದ ತಪಿಸುವರು. ತಂದೆ-ತಾಯಿಯರ ಪ್ರೀತಿ ಸಿಗಲಿದೆ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಗೊಂದಲಗಳು ಬರಬಹುದು. ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಪರಾಕ್ರಮದಿಂದ ಭೂಮಿಯ ಲಾಭವು ಆಗಲಿದೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ಬುದ್ಧಿವಂತಿಕೆಯನ್ನು ಬಳಸಿಕೊಂಡು ಲಾಭ ಪಡೆಯುವಿರಿ. ಬೇಗ ಮುಗಿದಂತೆ ಭಾಸವಾಗುವುದು. ದಿನದ ಕೊನೆಯಲ್ಲಿ ಬಹಳ ಕೆಲಸವಿರುವಂತೆ ತೋರುವುದು. ಸುಬ್ರಹ್ಮಣ್ಯನ ಉಪಾಸನೆಯನ್ನು ಯಾವುದಾರೂ ಒಂದು ರೀತಿಯಲ್ಲಿ ಮಾಡಿ.
ವೃಷಭ ರಾಶಿ:
ಇದು ರಾಶಿ ಚಕ್ರದ ಎರಡನೇ ರಾಶಿಯಾಗಿದ್ದು ಈ ರಾಶಿಯವರಿಗೆ ಈ ವಾರ ಶುಭ. ಶನಿಯು ಏಕಾದಶವನ್ನು ಪ್ರವೇಶಮಾಡುವನು. ಎಲ್ಲ ಕಾರ್ಯಗಳಲ್ಲಿ ನೆಮ್ಮದಿ ಇರುವುದು. ಬೇರೆಬೇರೆ ಮಾರ್ಗಗಳಿಂದ ಧನಲಾಭವಾಗುವುದು. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುವುದು. ಏಕಾಗ್ರತೆ ಕೊರತೆ ಅತಿಯಾಗಿ ಕಾಡಲಿದೆ. ನೀವು ಹೇಳದೇ ಇರುವ ರಹಸ್ಯವನ್ನು ನಿಮ್ಮಿಂದ ತಿಳಿಯಲಿದೆ. ಕೊಟ್ಟ ಹಣವು ಮತ್ತೆ ಬರುವ ನಿರೀಕ್ಷೆಯಲ್ಲಿ ಇರುವಿರಿ. ವಿದ್ಯಾಭ್ಯಾಸವು ಕಷ್ಟದಿಂದ ಸಾಗಲಿದೆ. ಉನ್ನತವಾದ ಧ್ಯೇಯವೇ ನಿಮ್ಮ ಮೊದಲ ಮೆಟ್ಟಿಲು ಎನ್ನುವುದನ್ನು ತಿಳಿದಿದ್ದೀರಿ. ಕಲಹಕ್ಕೆ ದಾರಿಯನ್ನು ಮಾಡಿಕೊಡಬೇಡಿ. ಮನೆ ಬಳಕೆಯ ವಸ್ತುಗಳನ್ನು ಖರೀದಿಸಲಿದ್ದೀರಿ. ನಿಮ್ಮವರಿಗೆ ಸಮಯವನ್ನು ಕೊಡಲು ಮರೆತಿದ್ದು ಇಂದು ತಿಳಿಯುತ್ತದೆ. ನಾಗಾರಾಧನೆ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.
ಮಿಥುನ ರಾಶಿ:
ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಅಶುಭ. ವ್ಯಾಪಾರಸ್ಥರಾಗಿದ್ದರೆ ಕೆಟ್ಟ ವ್ಯವಹಾರದಲ್ಲಿ ಮನಸ್ಸು ಮಾಡುವರು. ಇಲ್ಲವೇ ಕೆಟ್ಟ ವ್ಯವಹಾರ ಮಾಡುವವರ ಸ್ನೇಹ ಬಯಸುವರು. ಸ್ಥಾನ ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಪಮಾನಕ್ಕೆ ಒಳಗಾಗುವ ಸಂಭವವಿದೆ. ರೋಗಬಾಧೆಯಿಂದ ಸಮಸ್ಯೆಯಲ್ಲಿ ಬೀಳುವಿರಿ. ಸಾವಧಾನತೆಯಿಂದ ಕೆಲಸವು ಸಾಧ್ಯವಾಗುವುದು. ಸಂಗಾತಿಯಿಂದ ಸಂಪತ್ತನ್ನು ಪಡೆದು ಖರೀದಿಗಳನ್ನು ಮಾಡಲಿದ್ದೀರಿ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ನಿಮ್ಮ ಸಹಾಯಕರು ನಿಮ್ಮ ಬಗ್ಗೆ ಸಲ್ಲದ ಪ್ರಚಾರವನ್ನು ಮಾಡುವರು. ಹೆಚ್ಚು ಕಾಲ ದೇವತೋಪಾಸನೆಯಲ್ಲಿ ಕಾಲವನ್ನು ಕಳೆಯುವುದು ಕಷ್ಟ. ಆರೋಗ್ಯದ ಮೇಲೆ ಗಮನವಿರಲಿ. ಗಣಪತಿಗೆ ಪ್ರಿಯವಾದ ಮೋದಕವನ್ನು ಅರ್ಪಿಸಿ.
ಕರ್ಕಾಟಕ ರಾಶಿ:
ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಅಶುಭ. ಶನಿಯು ನವಮಸ್ಥಾನವನ್ನು ಪ್ರವೇಶಿಸುವನು. ಇದರಿಂದ ಆರ್ಥಿಕವಾದ ಹಿನ್ನಡೆಯಾಗಲಿದೆ. ಧರ್ಮಕಾರ್ಯಗಳನ್ನು ಮಾಡಲು ಮನಸ್ಸು ಇರದು ಅಥವಾ ಧರ್ಮಕಾರ್ಯಕ್ಕೆ ವಿಘ್ನಗಳು ನಾನಾ ಪ್ರಕಾರವಾಗಿ ಬರಬಹುದು. ಪಿತೃಸಮಾನರನ್ನು ಕಳೆದುಕೊಳ್ಳುವ ಸಂಭವವಿದೆ. ಹಾಗೂ ಅತಿದುಃಖ, ಸಂಕಟಗಳಿಂದ ಮನಸ್ಸು ಜರ್ಝರಿತವಾಗಬಹುದು. ಇನ್ನೊಬ್ಬರನ್ನು ಮೊಸಗೊಳಿಸಲು ಹೋಗಿ ನೀವೇ ಸಮಸ್ಯೆಯಲ್ಲಿ ಸಿಕ್ಕಿಬೀಳುವಿರಿ. ನಿಮಗಾಗದವರು ರೂಪಿಸಿದ ಜಾಲಕ್ಕೆ ಬೀಳಲಿರುವಿರಿ. ಸ್ನೇಹಿತರ ಸಹಕಾರದಿಂದ ನೀವು ಸ್ವಲ್ಪ ಸಮಯದಲ್ಲಿಯೇ ಪಾರಾಗುವಿರಿ. ಇನ್ನೊಬ್ಬರ ಕೆಲಸದಲ್ಲಿ ಮೂಗು ತೂರಿಸಲು ಹೋಗಬೇಡಿ. ಆರೋಗ್ಯವನ್ನು ಹೆಚ್ಚಿಸುವ, ಚೆನ್ನಾಗಿಡುವ ಆಹಾರ, ಪಾನೀಯಗಳನ್ನು ಸೇವಿಸಿ. ನಿಧಾನಗತಿಯಲ್ಲಿ ಸಾಗುವ ಕೆಲಸದಿಂದ ಬೇಸರಗೊಳ್ಳುವಿರಿ. ಕುಲಗುರುವಿನ ಅನುಗ್ರಹವನ್ನು ಪಡೆಯಿರಿ.
ಸಿಂಹ ರಾಶಿ:
ಈ ತಿಂಗಳ ಕೊನೆಯ ಅದರಲ್ಲಿ ನಿಮಗೆ ಅಶುಭ. ಶನಿಯು ಸಪ್ತಮದಿಂದ ಅಷ್ಟಮಕ್ಕೆ ಪ್ರವೇಶ ಮಾಡುತ್ತಿದ್ದಾನೆ. ಮಕ್ಕಳ ವಿಚಾರದಲ್ಲಿ ಗೊಂದಲ ಅಥವಾ ದೂರ ಮಾಡಿಕೊಳ್ಳುವಿರಿ. ಇಲ್ಲವೇ ಪುತ್ರ ಶೋಕ ಉಂಟಾಗಬಹುದು. ನಿಮ್ಮ ಪಶುಸಂಪತ್ತು ಕಡಿಮೆಯಾಗುವುದು. ಮಿತ್ರರು ದೂರಾಗುವರು. ಸಂಪತ್ತನ್ನು ಕಳೆದುಕೊಳ್ಳುವ ಸಂದರ್ಭ ಬರುವುದು. ಮಕ್ಕಳ ಬಗ್ಗೆ ಹೆಚ್ಚು ಕಾಳಜಿಯನ್ನು ಇರಿಸಿಕೊಳ್ಳುವುದು ಉತ್ತಮ. ಅನೇಕ ದಿನಗಳಿಂದ ಸಣ್ಣ ಪುಟ್ಟ ಅನಾರೋಗ್ಯದ ತೊಂದರೆಯಾಗಲಿದ್ದು ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. ಅಪರಿಚಿತರ ವರ್ತನೆಯಿಂದ ಸಹವಾಸವನ್ನು ಮಾಡಬೇಡಿ. ಸಹಾಯವನ್ನು ಮಾಡಿ ಸಮಯವನ್ನು ವ್ಯರ್ಥಮಾಡಬೇಡಿ. ಯಾವುದೇ ನಿರ್ಧಾರಗಳನ್ನು ಇಂತಹ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಡಿ. ಹಣವು ಖರ್ಚಾಗುವುದೆಂಬ ಆತಂಕ ಬೇಡ. ಆದಿತ್ಯಹೃದಯವನ್ನು ಪಠಿಸಿ.
ಕನ್ಯಾ ರಾಶಿ:
ಇದು ರಾಶಿ ಚಕ್ರದ ಆರನೇ ರಾಶಿಯಾಗಿದ್ದು ಈ ತಿಂಗಳ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಶುಭ. ಸಪ್ತಮಕ್ಕೆ ಶನಿ ಪ್ರವೇಶವಾದ ಕಾರಣ ಸ್ತ್ರೀಯರ ಅಥವಾ ಸಂಗಾತಿಯ ವಿಚಾರದಲ್ಲಿ ಧೈರ್ಯ ಬರುವುದು. ರೋಗ ಪರಿಹಾರಕ್ಕೆ ಬೇಕಾದ ಉಪಾಯವನ್ನು ಕಂಡುಕೊಳ್ಳುವಿರಿ. ಪ್ರಯಾಣದಲ್ಲಿ ಅಭೀತಿ ಉಂಟಾಗಲಿದೆ. ಆಲಸ್ಯವನ್ನು ಮೈಗೂಡಿಸಿಕೊಂಡಿರುತ್ತೀರಿ. ಫಲವು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ವಿದ್ಯಾರ್ಥಿಗಳು ಶಿಕ್ಷಕರಿಂದ ಉಪದೇಶವನ್ನು ಪಡೆಯುವರು. ಮಕ್ಕಳಿಂದ ತಲೆ ತಗ್ಗಿಸುವ ಕೆಲಸವಾಗಲಿದೆ. ಸಮಾಜಸೇವೆಗೆ ನಿಮ್ಮನ್ನು ತೊಡಗಿಸಿಕೊಳ್ಳುವ ಹಂಬಲದಲ್ಲಿ ಇರುತ್ತೀರಿ. ಆರೋಗ್ಯದ ವ್ಯತ್ಯಸವನ್ನು ಗಮನಿಸುತ್ತ ವೈದ್ಯರ ಸಲಹೆಯನ್ನು ನಿರಾಕರಿಸದೇ ಹಾಗೆಯೇ ನಡೆದುಕೊಳ್ಳಿ. ಬೆಳಗಿನಿಂದ ಮನಸ್ಸು ಭಾರವಾದಂತೆ ಅನ್ನಿಸುವುದು. ಬಹಳ ದಿನಗಳಿಂದ ಇದ್ದ ಆಸೆಯು ಪೂರ್ಣವಾಗುವುದು. ಚಕ್ರಾಣಿಯಾದ ಮಹಾವಿಷ್ಣುವಿನ ಸ್ತೋತ್ರಮಾಡಿ.
ತುಲಾ ರಾಶಿ:
ಇದು ಈ ತಿಂಗಳ ಕೊನೆಯ ವಾರ. ಈ ರಾಶಿಯವರಿಗೆ ಶುಭ. ಪಂಚಮ ಶನಿಯಿಂದ ಬಿಡುಗಡೆ ಹೊಂದಿ ನಿಶ್ಚಿಂತೆ ಒಂದುಕಡೆಗೆ. ಇನ್ನೊಂದು ಕಡೆ ನಾನಾವಿಧವಾದ ಸುಖದ ಪ್ರಾಪ್ತಿ ಇರಲಿದೆ. ವಾಹನ ಲಾಭ, ಉದ್ಯಮದಲ್ಲಿ ಸಫಲತೆ, ಅಂದುಕೊಂಡ ಕಾರ್ಯದಲ್ಲಿ ವಿಘ್ನ ನಿವಾರಣೆ ಇದೆಲ್ಲವೂ ಆಗಲಿದೆ. ವೈವಾಹಿಕ ಜೀವನಕ್ಕೆ ಪ್ರವೇಶ, ಸಂತಾನ ಲಾಭ ಇವೆಲ್ಲದರಿಂದ ಸುಖ ಸಿಗಲಿದೆ. ಉದ್ಯೋಗಸ್ಥರು ಒತ್ತಡಗಳು ಇಲ್ಲದೇ ನಿಶ್ಚಿಂತೆಯಿಂದ ಕೆಲಸವನ್ನು ಮಾಡುವಿರಿ. ದುಶ್ಚಟಗಳಿಗೆ ದಾಸರಾಗುವ ಸಾಧ್ಯತೆ ಇದೆ. ವಿಶ್ವಾಸಘಾತಕರು ನಿಮ್ಮ ಸುತ್ತಲೇ ಇದ್ದಾರೆ ಎಂದು ಅನ್ನಿಸುತ್ತದೆ. ಸಣ್ಣ ಅನಾಹುತವೂ ನಿಮ್ಮ ವೃತ್ತಿಗೆ ಕಂಟಕವಾದೀತು. ನಿಮ್ಮ ಮನೋಬಲವನ್ನು ಕುಗ್ಗಿಸೀತು. ಸ್ವಂತ ಆಲೋಚನೆಗಳಿಂದ ಮಾಡಬೇಕಾದುದನ್ನು ಮಾಡಿಕೊಳ್ಳಿ. ಋಣಮುಕ್ತರಾಗಲು ನೀವು ಬಹಳ ಶ್ರಮಪಡಬೇಕಾಗಿದೆ. ಕುಬೇರಯಂತ್ರವನ್ನು ತಂದು ಮನೆಯಲ್ಲಿ ಇರಿಸಿಕೊಳ್ಳಿ. ಸಂಪತ್ತಿನ ಹರಿವು ಇರುವುದು.
ವೃಶ್ಚಿಕ ರಾಶಿ:
ಈ ತಿಂಗಳ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಅಶುಭ. ಶನಿಯು ಪಂಚಮ ರಾಶಿಯನ್ನು ಪ್ರವೇಶಿಸುವನು. ಇದರಿಂದ ನಿಮ್ಮ ಸಂಪತ್ತು ನಾಶವಾಗುವ ಸಾಧ್ಯತೆ ಅಧಿಕ. ಹಾಗಯೇ ಮಕ್ಕಳಿಂದ ತೊಂದರೆ, ದೂರವಿರಬೇಕಾದ ಸ್ಥಿತಿಯೂ ಬರಬಹುದು. ಬುದ್ಧಿ ಹಾದಿತಪ್ಪುವುದು, ಚುರುಕುತನ ವಿಲ್ಲದೇ ಇರುವುದು, ತಪ್ಪು ನಿರ್ಧಾರ ಮತ್ತು ಬೇಗನೆ ಸೂಚಿಸದೇ ಸಮಸ್ಯೆಗೆ ಪರಿಹಾರವಿಲ್ಲವೆಂದು ತಿಳಿಯುವುದು. ರೂಪಕ್ಕೆ ತಕ್ಕಂತೆ ಸ್ವರೂಪವಿರುವಿಲ್ಲ ಎಂಬ ಮಾತನ್ನು ನೆನಪಿಸಿಕೊಳ್ಳುತ್ತಿರಿ. ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಿರಿ. ನಿಮಗೆ ಸಲ್ಲದ ಮಾತುಗಳು ನಿಮ್ಮೆದುರು ಬರಬಹುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಬೇಡಿ. ನಿಮ್ಮನ್ನು ಅನ್ಯರಂತೆ ಕಂಡಾರು. ದಾಂಪತ್ಯದಲ್ಲಿ ಬಿರುಸಿನ ಮಾತುಗಳು ಕೇಳಿಬರಬಹುದು. ದಾಂಪತ್ಯದಲ್ಲಿ ವಿರಸವು ಮೂಡಲಿದೆ. ಮಾತನ್ನು ಕೇಳಿಸಿಕೊಳ್ಳುವರ ಜೊತೆ ಮಾತ್ರ ಮಾತನಾಡಿ. ಅನ್ಯಕಾರ್ಯಗಳಿಗೆ ಸಂಪತ್ತು ನಷ್ಟವಾಗಲಿದೆ. ಲಕ್ಷ್ಮೀಸ್ತೋತ್ರವನ್ನು ಮಾಡಿ. ಸಂಪತ್ತಿನ ವ್ಯಯವನ್ನು ತಡೆಯುವಳು.
ಧನು ರಾಶಿ:
ರಾಶಿ ಚಕ್ರದ ಒಂಭತ್ತನೇ ರಾಶಿಯಿದು. ಈ ರಾಶಿಯವರಿಗೆ ಶನಿಯು ನಾಲ್ಕನೇ ರಾಶಿಯ ಪ್ರವೇಶದಿಂದ ಅಶುಭ. ಇವರು ಸಂಗಾತಿಯನ್ನು ಕಳೆದುಕೊಳ್ಳುವ ಅಥವಾ ದೂರಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳೂ ನಿಮ್ಮ ಸ್ವಭಾವದಿಂದ ದೂರಾಗುವರು. ಸಂಪತ್ತಿನ ನಾಶ ಕುಗ್ಗುವಿರಿ. ನಿಮ್ಮ ಮಾತುಕತೆಗಳಿಂದ ನೀವಿನ್ನೂ ಬಹಳ ತಿಳಿದುಕೊಳ್ಳಬೇಕು ಎಂದನ್ನಿಸುವುದು. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಿರಿ. ಪ್ರಕ್ಷುಬ್ದವಾಗಿದ್ದ ಮನಸ್ಸು ಸಮಾಧಾನಕ್ಕೆ ಬರಲಿದೆ. ಸಾಲಬಾಧೆಯಿಂದ ಮುಕ್ತರಾಗಲಿದ್ದೀರಿ. ಎಲ್ಲರೂ ವಿದ್ಯಾವಂತೆ ತೋರಿ ನಿಮಗೇ ನಿಮ್ಮ ಮೇಲೆ ಅಶಿಕ್ಷಿತ ಭಾವನೆ ಬರಲಿದೆ. ಶತ್ರುಗಳೆದುರು ತಲೆ ಎತ್ತಿ ನಿಲ್ಲುವ ಮನಸ್ಸು ಮಾಡುವಿರಿ. ಯಾರದೋ ಸಿಟ್ಟನ್ನು ಮಕ್ಕಳ ಮೇಲೆ ತೀರಿಕೊಂಡು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಮನೆಯಿಂದ ಹೊರಗೆ ಇರಬೇಕಾದ ಸ್ಥಿತಿ ಬರಲಿದೆ. ನಾಗದೇವರಿಗೆ ಕ್ಷೀರ ಹಾಗೂ ಫಲ ಸಮರ್ಪಣೆ ಮಾಡಿ.
ಮಕರ ರಾಶಿ:
ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಈ ರಾಶಿಯವರು ಸಾಡೇ ಸಾಥ್ ಶನಿಯಿಂದ ಮುಕ್ತರಾಗುವರು. ಉನ್ನತ ಸ್ಥಾನಮಾನ ಸಿಗಲಿದೆ. ಒಳ್ಳೆಯ ಸೇವಕರು ನಿಮ್ಮ ಪಾಲಿಗೆ ಇರುವರು. ನಿಮ್ಮವರೇ ನಿಮಗೆ ವಂಚನೆಯ ಸಂಚನ್ನು ಹಾಕುವರು. ನೀವೇ ಮಾಡಿಕೊಂಡ ತಪ್ಪಿನಿಂದ ನಿಮಗೆ ಬೀಳುವ ಸಾಧ್ಯತೆ ಇದೆ. ನಿಮ್ಮ ಮಾತುಗಳು ಅನರ್ಥವನ್ನು ಉಂಟುಮಾಡಿ ಕಲಹಕ್ಕೂ ಕಾರಣವಾಗಲಿದೆ. ಪರಿಶ್ರಮಮದಿಂದ ಅರ್ಥಲಾಭವಾಗುವುದು. ಸ್ತ್ರೀಯರಿಂದ ಅಪವಾದ ಬರುವ ಸಾಧ್ಯತೆ ಇದೆ. ಉದ್ಯೋಗದ ನಿಮಿತ್ತ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಇದ್ದಕ್ಕಿಂದ ನಿಮ್ಮ ವಿರುದ್ಧ ಶತ್ರುಗಳು ನಿರ್ಮಾಣವಾಗಲಿದ್ದಾರೆ. ನೂತನ ಗೃಹನಿರ್ಮಾಣದ ಕನಸನ್ನು ಕಾಣಲಿದ್ದೀರಿ. ದೂರ ಹೋಗಬಾಏಕಾದ ಅನಿವಾರ್ಯತೆ ಬರಲಿದ್ದು, ವಾಹನಚಾಲನೆಯಿಂದ ಅಪಘಾತವಾಗುವ ಸಾಧ್ಯತೆ ಇದೆ. ಗ್ರಾಮದೇವರಿಗೆ ನಮಸ್ಕರಿಸಿ ನಿಮ್ಮ ಕೆಲಸಕ್ಕೆ ತೆರಳಿ.
ಕುಂಭ ರಾಶಿ:
ಈ ತಿಂಗಳ ಕೊನೆಯ ವಾರದಲ್ಲಿ ಶನಿಯ ಸ್ಥಾನ ಬದಲಾವಣೆ ಆಗಲಿದ್ದು, ಈ ರಾಶಿಯಲ್ಲಿ ಇದ್ದ ಶನಿ ಬದಲಾಗಲಿದ್ದಾನೆ. ದ್ವಿತೀಯ ಸ್ಥಾನಕ್ಕೆ ಬಂದು ನಿಮಗೆ ಧನಾಗಮನ ಆಗಲಿದೆ. ಹಾಗೆಯೇ ಮಕ್ಕಳ ಪ್ರಾಪ್ತಿ, ಅವರಿಂದ ಸುಖವಿರುವುದು. ನಿಮ್ಮ ಮಾತುಗಳು ಪ್ರೀತಿಸಿದವರ ಹೃದಯಕ್ಕೆ ನಾಟಿ ಅವರೂ ದೂರಾಗುವರು. ಅಪಮಾವಾಗುವ ಸಂಗತಿಯನ್ನು ನೀವೇ ತಂದುಕೊಳ್ಳುವಿರಿ. ಬೇಸರವನ್ನು ಹೆಚ್ಚು ಮಾಡಿಕೊಳ್ಳುವ ಸನ್ನಿವೇಶವನ್ನು ಎದುರು ಹಾಕಿಕೊಳ್ಳಬೇಡಿ. ನಿಮ್ಮ ಸತ್ಕಾರ್ಯವು ನಿಮ್ಮನ್ನು ಕೈ ಬಿಡದು. ನಿಮಗೆ ಗೊಂದಲುಗಳು ಇಂದು ಬರಬಹುದು. ಅನುಭವಿಗಳ ಅಥವಾ ಹಿರಿಯರ ಮಾತುಗಳು ಉಪಯೋಗಕ್ಕೆ ಬರಬಹುದು. ಒಳ್ಳೆಯವರ ಸಹವಾಸವನ್ನು ಮಾಡಿದ್ದಕ್ಕೆ ಒಳ್ಳೆಯ ಸ್ಥಿತಿಯು ಬರಲಿದೆ. ಶನಿಯು ನಿಮ್ಮ ಗತಿಯನ್ನು ನಿಯಂತ್ರಿಸುವನು. ಶನೈಶ್ಚರನಿಗೆ ಶಮೀಪತ್ರೆಯನ್ನು ನೀಡಿ.
ಮೀನ ರಾಶಿ:
ಮಾರ್ಚ್ ನ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಅಶುಭ ಅಧಿಕ. ಶನಿಯು ವಾರದ ಮಧ್ಯದಲ್ಲಿ ಈ ರಾಶಿಯನ್ನು ಪ್ರವೇಶ ಮಾಡುವನು. ನಾನಾ ರೋಗಗಳು ಕಾಣಿಸಿಕೊಳ್ಳುವುದು. ಅಷ್ಟೇ ಅಲ್ಲದೇ ಅಂತರಂಗ ಬಹಿರಂಗದ ಮಾಲಿನ್ಯ ಅಧಿಕವಾಗಲಿದೆ. ಶುಚಿತ್ವವಿಲ್ಲದಂತೆ ವರ್ತಿಸುವರು. ಈ ವಾರ ಒತ್ತಡದಲ್ಲಿ ಆರಂಭವಾದರೂ ಮುಕ್ತಾಯಕ್ಕೆ ಪ್ರಸನ್ನ ಮನಸ್ಕರಾಗಿ ಇರುವಿರಿ. ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ವಾಹನ ಖರೀದಿಯನ್ನು ಮಾಡಲಿದ್ದೀರಿ. ನೀರಿನ ಉತ್ಪನ್ನದ ವ್ಯಾಪರಿಗಳಿಗೆ ಲಾಭವು ಸಿಗಲಿದೆ. ಸಹೋದರರ ಜೊತೆ ಆತ್ಮೀಯವಾದ ಒಡನಾಟವನ್ನು ಹೊಂದುವಿರಿ. ಮನೆಯವರ ಮಾತಿನಿಂದ ನೋವಾದೀತಹಣವನ್ನು ಉಳಿಸಲು ರಾಶಿಯಾಗಿ ಹೂಡಿಕೆ ಮುಂತಾದ ಯೋಜನೆಗಳನ್ನು ಆರಂಭಿಸುವ ಮನಸ್ಸು ಮಾಡುವಿರಿ. ಆಕಸ್ಮಿಕವಾಗಿ ಹಣವನ್ನು ಕಳೆದುಕೊಳ್ಳುವಿರಿ. ಶನೈಶ್ಚರನಿಗೆ ಎಣ್ಣೆ ದೀಪ ಬೆಳಗಿ.