ಸುಳ್ಯ: ಸುಳ್ಳು ಸುದ್ದಿ ಪ್ರಸಾರ ಆರೋಪ| ವೆಬ್ ಸೈಟ್ ಹಾಗೂ ಸಂಪಾದಕರ ವಿರುದ್ಧ ದೂರು ದಾಖಲು

ಸಮಗ್ರ ನ್ಯೂಸ್: ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ, ವೆಬ್‌ ನ್ಯೂಸ್‌ನ ವರದಿಗಾರ ಹಾಗೂ ಸಂಪಾದಕರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget .

ಮಾ.20ರಂದು ರಾತ್ರಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ಧನುಷ್‌ ಪಿ.ಎಸ್‌. ಎಂಬಾತನು ಕಲ್ಲುಗುಂಡಿ ಕಡೆಗೆ ಮಾರುತಿ ಆಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದವರೊಂದಿಗೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು.

Ad Widget . Ad Widget .

ಇದನ್ನು ಸುಳ್ಯದ ವೆಬ್‌ಸೈಟೊಂದು, “ಹಿಂದೂ ಹುಡುಗಿಯರ ಜತೆ ಅನ್ಯ ಕೋಮಿನ ಯುವಕರು; ಸಂಪಾಜೆ ತನಕ ತಡರಾತ್ರಿ ಕಾರನ್ನು ಬೆನ್ನಟ್ಟಿದ ಯುವಕ’ ಎಂಬ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿ ಕೋಮು ಸಾಮರಸ್ಯ ಕೆಡುವ ರೀತಿಯಲ್ಲಿ ಘಟನೆಯನ್ನು ಬಿಂಬಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *