ರಾಜ್ಯದ ಸಿಎಂ, ಮಂತ್ರಿಗಳು ಹಾಗೂ ಶಾಸಕರ ವೇತನ ಹೆಚ್ಚಳಕ್ಕೆ ‌ಗ್ರೀನ್ ಸಿಗ್ನಲ್| ಶೇ.100ರಷ್ಟು ಹೆಚ್ಚಿಸಿ ತಿದ್ದುಪಡಿ!!

ಸಮಗ್ರ ನ್ಯೂಸ್: ರಾಜ್ಯದ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವೇತನ ಹಾಗೂ ದಿನ ಭತ್ಯೆ ಹೆಚ್ಚಳವಾಗಿದ್ದು, ಇದಕ್ಕೆ ಸಂಬಂಧಿಸಿದ ‘ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025’ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ. ರಾಜ್ಯಪಾಲರು ಅನುಮೋದನೆ ನೀಡಿದ ಕೂಡಲೇ ವಿಧಾನಸಭೆಯಲ್ಲಿ ಈ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.

Ad Widget .

ಸದನದಲ್ಲಿ ವಿಧೇಯಕ ಮಂಡನೆಗಿಂತ ಮುಂಚೆ ರಾಜ್ಯಪಾಲರ ಅನುಮತಿ ಅಗತ್ಯವಿರುವುದರಿಂದ, ಈ ಸಂಬಂಧ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈಗ ರಾಜ್ಯಪಾಲರ ಅನುಮೋದನೆ ಪಡೆಯಲು ಸಾಧ್ಯವಾಗಿರುವ ಕಾರಣ, ವಿಧಾನಸಭೆಯಲ್ಲಿ ಶೀಘ್ರವೇ ಈ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ.

Ad Widget . Ad Widget .

ನೂತನ ತಿದ್ದುಪಡಿ ಪ್ರಕಾರ ಸಿಎಂ, ಸಚಿವರು ಮತ್ತು ಶಾಸಕರ ಸಂಬಳ ಹೆಚ್ಚಳವಾಗಲಿದೆ. ಈ ಹೆಚ್ಚಳದ ನಂತರ ಜನಪ್ರತಿನಿಧಿಗಳಿಗೆ ಭಾರೀ ಪ್ರಮಾಣದ ವೇತನ ಮತ್ತು ಭತ್ಯೆ ನೀಡಲಾಗುವುದು.

ನೂತನ ಸಂಬಳ ವಿವರ:

ಮುಖ್ಯಮಂತ್ರಿ ಸಂಬಳ: ₹75,000 → ₹1,50,000
ಸಚಿವರ ಸಂಬಳ: ₹60,000 → ₹1,25,000
ಮುಖ್ಯಮಂತ್ರಿ, ಸಚಿವರ ಆತಿಥ್ಯ ಭತ್ಯೆ: ₹4,50,000 → ₹5,00,000
ಸಚಿವರ ಮನೆ ಬಾಡಿಗೆ ಭತ್ಯೆ: ₹1,20,000 → ₹2,50,000
ರಾಜ್ಯ ಸಚಿವರ ಸಂಬಳ: ₹50,000 → ₹75,000
ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ: ₹1,20,000 → ₹2,00,000
ಶಾಸಕರ ಸಂಬಳ: ₹40,000 → ₹80,000

ಈ ತಿದ್ದುಪಡಿ ಜನಪ್ರತಿನಿಧಿಗಳ ಭವಿಷ್ಯ ಭದ್ರತೆಗೆ ಮತ್ತು ಸೇವಾ ಸೌಲಭ್ಯಗಳ ಸುಧಾರಣೆಗೆ ಒಳಪಟ್ಟಿದೆ ಎಂದು ಸರ್ಕಾರ ಹೇಳಿದೆ. ಆದರೆ, ಸಾಮಾನ್ಯ ಜನರ ಮೇಲೆ ತೆರಿಗೆ ಭಾರ ಹೆಚ್ಚಾಗುತ್ತಿರುವ ನಡುವೆಯೂ, ಶಾಸಕರ ಸಂಬಳ ದುಪ್ಪಟ್ಟಾಗಿದೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಈ ಸಂಬಳ ಹೆಚ್ಚಳದ ತಿದ್ದುಪಡಿ ವಿರುದ್ಧ ಪ್ರತಿಪಕ್ಷಗಳ ಆಕ್ಷೇಪ, ಜನರ ಪ್ರತಿಕ್ರಿಯೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Leave a Comment

Your email address will not be published. Required fields are marked *