ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಮತ್ತೊಂದು ವಿಡಿಯೋ ಹರಿಬಿಟ್ಟ ‘ಧೂತ’| ವೈರಲ್ ಆಗ್ತಿದೆ ಸಾಕ್ಷಿನಾಶ!

ಸಮಗ್ರ ನ್ಯೂಸ್: 13 ವರ್ಷಗಳಿಂದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಹೋರಾಟಗಳು ನಡೆದು ಹೋಗಿವೆ. ಈಗಲೂ ಆ ಹೋರಾಟ ಮುಂದುವರೆದಿದೆ. ಕೆಲವೇ ದಿನಗಳ ಹಿಂದಷ್ಟೇ ಕನ್ನಡದ ಯೂಟ್ಯೂಬರ್ ಸಮೀರ್ ಎಂಡಿ ಇದೇ ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ್ದರು. ಅದು, ರಾತ್ರಿ ಕಳೆದು ಬೆಳಕಾಗುವುದರೊಳಗೆ ವೈರಲ್ ಆಗಿತ್ತು. ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಂಡು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

Ad Widget .

ಸೌಜನ್ಯ ಕೇಸ್ ಬಗ್ಗೆ ಸಮೀರ್ ಎಂಡಿ ಮಾಡಿದ ಮೊದಲ ವಿಡಿಯೋ ಸಂಚಲನವನ್ನೇನೋ ಸೃಷ್ಟಿಸಿತ್ತು. ಜೊತೆ ವಿವಾದವನ್ನು ಹುಟ್ಟಾಕಿತ್ತು. ಸಮೀರ್ ಎಂಡಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕೋರ್ಟ್, ಕಚೇರಿ ಅಂತ ಓಡಾಡಬೇಕಾಯ್ತು. ಇನ್ನೊಂದು ಕಡೆ ಸಮೀರ್ ವಿಡಿಯೋ ವಿರುದ್ಧ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ.

Ad Widget . Ad Widget .

ಸಮೀರ್ ಎಂಡಿ ತನ್ನ ಧೂತ ಎನ್ನುವ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಧರ್ಮಸ್ಥಳದ ಸೌಜನ್ಯ ಕೇಸ್ ಬಗ್ಗೆ ಎರಡನೇ ವಿಡಿಯೋದಲ್ಲಿ ಅಂತಹದ್ದೇನಿದೆ? ಈ ಪ್ರಕರಣದ ಸಾಕ್ಷಿ ನಾಶದ ಬಗ್ಗೆ ಮಾಹಿತಿ ಏನಿದೆ? ಯಾರೆಲ್ಲ ಈ ಕೇಸ್‌ಗೆ ಸಾಕ್ಷಿಯಾಗಿದ್ದರು? ಅವರೆಲ್ಲ ಏನಾದರು? ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.

ಸೌಜನ್ಯ ಪ್ರಕರಣದ ಬಗ್ಗೆ ಯೂಟ್ಯೂಬರ್ ಸಮೀರ್ ಎಂಡಿ ವಿಡಿಯೋ ಮತ್ತೆ ಕಿಚ್ಚು ಹಚ್ಚಿದೆ. 13 ವರ್ಷಗಳಿಂದ ಅಂತ್ಯ ಕಾಣದ ಈ ಕೇಸ್ ವಿಚಾರವಾಗಿ ಮತ್ತೆ ಆಕ್ರೋಶ ವ್ಯಕ್ತವಾಗುತ್ತಿದೆ. ಹೋರಾಟಗಾರರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ಮೇಲೆ ಸಮರ ಸಾರಿದ್ದಾರೆ. ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸ್ವಯಂ ಪ್ರೇರಿತರಾಗಿ ಹೋರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಎಫ್‌ಐಆರ್, ಕೋರ್ಟ್ ಅಂತ ಓಡಾಡಬೇಕಾಗಿದ್ದರೂ, ಸಮೀರ್ ಎಂಡಿ ಮತ್ತೊಂದು ವಿಡಿಯೋ ಮಾಡಿದ್ದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಎರಡನೇ ವಿಡಿಯೋದಲ್ಲಿ ಅಂತಹದ್ದೇನಿದೆ?

“ಸೌಜನ್ಯಗೆ ನ್ಯಾಯ ಕೇಳುವುದಕ್ಕೆ ನನ್ನ ಮೇಲೆ ಇಷ್ಟೊಂದೆಲ್ಲ ಆಗಿದೆ ಅಂದರೆ, ಜಸ್ಟ್ ಇಮ್ಯಾಜಿನ್ ಸೌಜನ್ಯ ಕೇಸ್‌ನಲ್ಲಿ ಯಾರೆಲ್ಲ ಸಾಕ್ಷಿ ಆಗಬಹುದಿತ್ತೋ ಅವರ ಜೊತೆ ಇನ್ನೂ ಏನೆಲ್ಲ ಆಗಿರಲ್ಲ. ಈ ವಿಡಿಯೋ ಯಾವುದೇ ಜಾತಿ, ಧರ್ಮ, ದೇವಸ್ಥಾನಕ್ಕೆ ಸಂಬಂಧ ಪಟ್ಟಿದ್ದಲ್ಲ. ಈ ವಿಡಿಯೋದಲ್ಲಿ ಕೇವಲ ಸೌಜನ್ಯ ಕೇಸ್ ಬಗ್ಗೆ ಮಾತ್ರ ಮಾತಾಡುತ್ತಿದ್ದೇನೆ. ಸೌಜನ್ಯ ಕೇಸ್‌ನಲ್ಲಿ ಯಾರೆಲ್ಲ ಸಾಕ್ಷಿ ಆಗಬಹುದಿತ್ತೋ ಅದೆಲ್ಲ ಹೇಗೆ ನಾಶ ಆಯ್ತು? ಅನ್ನೋ ಬಗ್ಗೆ ಮಾತಾಡುತ್ತಿದ್ದೇನೆ.” ಎಂದು ಸಮೀರ್ ಎಂಡಿ ವಿಡಿಯೋವನ್ನು ಆರಂಭಿಸಿದ್ದಾರೆ.

ಈ ವಿಡಿಯೋ ಕೂಡ 9 ಅಕ್ಟೋಬರ್ 2012 ಸೌಜನ್ಯ ಕಾಣೆಯಾದ ದಿನದಿಂದಲೇ ಶುರುವಾಗುತ್ತೆ. ಊರಿನ ಸುಮಾರು 200 ರಿಂದ 300 ಮಂದಿ ಸೇರಿಕೊಂಡು ಸೌಜನ್ಯಳನ್ನು ಹುಡುಕುತ್ತಾರೆ. ಅಲ್ಲಿಂದ ಒಂದೊಂದು ಸಾಕ್ಷಿ ಹೇಗೆ ನಾಶ ಆಯ್ತು? ಅಂದು ಈ ಕೇಸ್‌ ಅನ್ನು ತನಿಖೆ ಮಾಡುತ್ತಿದ್ದ ಪೊಲೀಸರು ಸಾಕ್ಷಿಗಳನ್ನು ಹೇಗೆ ನಾಶ ಮಾಡಿದರು? ಸಾಕ್ಷಿಗಳನ್ನು ಹೇಗೆ ಸೃಷ್ಟಿಸಿದ್ದರು? ಈ ಕೇಸ್ ಅಂದು ದಾರಿ ತಪ್ಪಿದ್ದು ಹೇಗೆ? ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದವರು ಒಬ್ಬೊಬ್ಬರೇ ಹೇಗೆ ಸತ್ತರು? ಅನ್ನೋದನ್ನು ಸಮೀರ್ ಎಂಡಿ ಎರಡನೇ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವಿಡಿಯೋ ಕೂಡ ಅಷ್ಟೇ ಸದ್ದು ಮಾಡುತ್ತಿದೆ. ನೆಟ್ಟಿಗರು ಈ ವಿಡಿಯೋ ನೋಡಿದ ಬಳಿಕ ಸಮೀರ್‌ ಎಂಡಿಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ.

ಇನ್ನು ಸಮೀರ್ ಈ ವಿಡಿಯೋದಲ್ಲಿ ಮತ್ತೆ ಕೆಲವು ವಿಷಯಗಳನ್ನು ವಿವರಿಸಿದ್ದಾರೆ. ಸೌಜನ್ಯ ಕಾಣೆಯಾದ ಹಿಂದಿನ ದಿನ 200 ಜನರು ಹುಡುಕಿದರೂ ಸಿಗುವುದಿಲ್ಲ. ಜೋರಾಗಿ ಮಳೆ ಬಂದಿದ್ದರಿಂದ ಮನೆಗೆ ಮರಳಿದ್ದರು. ಆದರೆ, ಮಾರನೇ ದಿನ ಸೌಜನ್ಯಳ ಮೃತದೇಹ ಸಿಕ್ಕಿದ ಸ್ಥಳದಲ್ಲಿ ಆಕೆಯ ಬ್ಯಾಗ್ ಹಾಗೂ ಬುಕ್‌ ಬಿದ್ದಿರುತ್ತೆ. ಆದರೂ ಅದು ಒದ್ದೆಯಾಗಿರುವುದಿಲ್ಲ ಎಂದಿದ್ದಾರೆ. ಇದಕ್ಕೆ ಕೆಲವು ದಾಖಲಾಗಿದ್ದನ್ನು ಸಾಕ್ಷಿಯಾಗಿ ತೋರಿಸಿದ್ದಾರೆ. ಈ ಮೂಲಕ ಬೇರೆ ಯಾವುದೇ ಜಾಗದಲ್ಲಿ ಅತ್ಯಾಚಾರ ನಡೆದಿತ್ತು. ಆದರೆ, ಪೊಲೀಸರು ಮೃತದೇಹ ಸಿಕ್ಕಿದ ಜಾಗದಲ್ಲಿ ಈ ಕೃತ್ಯ ನಡೆದಿದೆ ಅಂತ ಪ್ರೂವ್ ಮಾಡುವುದಕ್ಕೆ ಹೊರಡುತ್ತಾರೆ ಎಂದು ಆರೋಪಿಸಿದ್ದಾರೆ.

ಸೌಜನ್ಯ ಮೃತದೇಹ ಸಿಕ್ಕಿದ 50 ಅಡಿ ದೂರದಲ್ಲಿ ಸಂತೋಷ್ ರಾವ್‌ನ ಒಂದು ಟೆಂಟ್ ಹಾಕಿಸುತ್ತಾರೆ. ಎಲ್ಲೋ ಬಾಹುಬಲಿ ಬೆಟ್ಟದಲ್ಲಿದ್ದ ಸಂತೋಷ್ ರಾವ್ ಅನ್ನು ಹಿಡಿದು ಈ ಟೆಂಟ್‌ನಲ್ಲಿಯೇ ಇದ್ದ ಎಂದು ಸಾಬೀತು ಮಾಡುವುದಕ್ಕೆ ಪೊಲೀಸರು ಮುಂದಾಗುತ್ತಾರೆ. ಸೌಜನ್ಯ ಹುಡುಕಿದ ಜನರಲ್ಲಿ ಒಬ್ಬರಿಗೂ ಈ ಟೆಂಟ್ ಯಾಕೆ ಕಾಣಲಿಲ್ಲ. ಸೌಜನ್ಯ ಮೃತದೇಹ ಸಿಕ್ಕಿದ ದಿನ ಮೂರು ಸಾವಿರ ಜನ ಸೇರುತ್ತಾರೆ. ಅವರಿಗೂ ಆ ಟೆಂಟ್ ಕಾಣಿಸಲಿಲ್ಲ. ಅಲ್ಲಿ ಟೆಂಟ್ ಇರಲೇ ಇಲ್ಲ ಎಂದು ಎರಡನೇ ಆರೋಪ ಮಾಡಿದ್ದಾರೆ.

ಇನ್ನು ಸಂತೋಷ್ ರಾವ್ ಬ್ರೈನ್ ಮ್ಯಾಪಿಂಗ್‌ಗೆ ಒಪ್ಪಿಕೊಂಡಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು. ಅದಕ್ಕೂ ದಾಖಲೆಯನ್ನು ನೀಡಿದ್ದು, ಅದರಲ್ಲಿ ಸಂತೋಷ್ ರಾವ್ ನಿರಪರಾಧಿ ಅಥವಾ ಅಪರಾಧಿ ಎಂದು ಸಾಬೀತು ಪಡಿಸಲು ಯಾವುದೇ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲು ಸ್ವ ಇಚ್ಛೆಯಿಂದ ಒಪ್ಪಿದ್ದೇನೆ ಎಂದು ಹೇಳಿದ್ದಾಗಿ ದಾಖಲೆಯಲ್ಲಿದ್ದು, ಅದರಲ್ಲಿ ಸಂತೋಷ್ ರಾವ್ ಸಹಿ ಹಾಗೂ ಕೋರ್ಟ್ ಸೀಲ್ ಸಹ ಇದೆ.

ಇನ್ನು ಸೌಜನ್ಯ ಕೇಸ್‌ನಲ್ಲಿ ಸಾಕ್ಷಿಯಾಗಬಹುದಾದವರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಂತೋಷ್ ರಾವ್ ಅವರನ್ನು ಹಿಡಿದು ಕೊಟ್ಟವರಲ್ಲಿ ಒಬ್ಬರಾಗಿದ್ದ ರವಿ ಪೂಜಾರಿ. ಕೇಸ್ ಸಿಬಿಐಗೆ ವರ್ಗಾವಣೆ ಆದಾಗ, ರವಿ ಪೂಜಾರಿ ನಿಗೂಢ ಸಾವಾಗುತ್ತೆ. ನೇಣು ಹಾಕಿಕೊಂಡು ಸಾವನ್ನಪ್ಪಿದ ಅಂತಾರೆ. ಆದರೆ, ಅದಕ್ಕೂ ಸಾಕ್ಷಿಯಿಲ್ಲ ಎಂದು ಸಮೀರ್ ಹೇಳಿದ್ದಾರೆ. ಆರೋಪಿಗಳು ಸೌಜನ್ಯ ಜೊತೆ ಫಾರ್ಮ್‌ ಹೌಸ್‌ನಲ್ಲಿ ಇರುವುದನ್ನು ಅಲ್ಲೇ ಕೆಲಸ ಮಾಡುತ್ತಿದ್ದ ವಾರಿಜಾ ಎಂಬುವವರು ನೋಡಿದ್ದರು. ಅವರ ಮೃತದೇಹ ಕೂಡ ಫಾರ್ಮ್ ಹೌಸ್‌ನ ಬಾವಿಯಲ್ಲಿ ಸಿಗುತ್ತೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಹಾಗೇ ಗೋಪಾಲ ಕೃಷ್ಣ ಸ್ಲೋ ಪಾಯಿಸನ್‌ನಿಂದ ಸತ್ತಿದ್ದು, ಸೌಜನ್ಯಳನ್ನು ಕಿಡಿಗೇಡಿಗಳಿಂದ ಬಿಡಿಸುವುದಕ್ಕೆ ಪ್ರಯತ್ನ ಪಟ್ಟಿದ್ದ ಪ್ರಶಾಂತ್ ಕೂಡ ಸಾವನ್ನಪ್ಪಿದ್ದ. ಹಾಗೇ ಸೌಜನ್ಯ ಅಪಹರಣದ ಕಂಡಿದ್ದ ದಿನೇಶ್ ಗೌಡ, ಹೇಳಿಕೆ ಕೊಟ್ಟಿದ್ದ ಹರೀಶ್ ಮಡಿವಾಳ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದ. ಹೀಗೆ ಸಾಕ್ಷಿಗಳೆಲ್ಲ ನಾಶ ಆಗಿದ್ದಾವೆ ಎಂದು ಸಮೀರ್ ಎಂಡಿ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಕಾಮೆಂಟ್‌ಗಳೇನು ಕಮ್ಮಿ ಬಂದಿಲ್ಲ.

“ನಿಜವಾಗ್ಲೂ ನಿಮ್ಮ ಧೈರ್ಯ ಮೆಚ್ಚುವಂತದ್ದೇ.. ಏನೇ ಆದ್ರೂ ನಿಮ್ಮ ಪ್ರಯತ್ನ ಬಿಟ್ಟಿಲ್ಲ.. ಇದಕ್ಕೆ ಒಳ್ಳೆಯ ಯಶಸ್ಸು ಸಿಗ್ಲೇಬೇಕು” ಅಂತ ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು “ಇಷ್ಟು ಆಗಿದ್ರು ಮತ್ತೆ ಪಾರ್ಟ್ 2 ವಿಡಿಯೋ ಮಾಡಿರೋದನ್ನು ನೋಡಿದ್ರೆ ನಿಮ್ಮ ಉದ್ದೇಶ ಸೌಜನ್ಯಗೆ ನ್ಯಾಯ ಸಿಗೋವರಿಗೂ ಬಿಡಲ್ಲ ಅನ್ನಿಸುತ್ತದೆ. ನಿಮ್ಮ ಮಾನವೀಯತೆಗೆ ನನ್ನ ಒಂದು ನಮಸ್ಕಾರ” ಎಂದಿದ್ದಾರೆ. ಮತ್ತೊಬ್ಬರು “ನಮ್ಮ ಸೌಜನ್ಯ ಬಗ್ಗೆ ಮಾತಾಡಿದ್ದಕ್ಕೆ ಯಾರೇ ಎದುರಿಸಿದರು ಧೈರ್ಯವಾಗಿ ಇನ್ನೊಂದು ವಿಡಿಯೋ ಮಾಡಿದಕ್ಕಾಗಿ ಧನ್ಯವಾದಗಳು ಧೂತ ಸಮೀರ್ ಎಂಡಿ”, “ಅಣ್ಣಪ್ಪ ಪಂಜುರ್ಲಿ ನಿಮ್ಮ ಕೈಯಿಂದ ಅವನ ಧರ್ಮ ರಕ್ಷಣೆಯ ಕೆಲಸ ಮಾಡಿಸ್ತಾ ಇದ್ದಾನೆ. ನಿಮ್ಮ ಹೋರಾಟಕ್ಕೆ ಎಲ್ಲರ ಬೆಂಬಲ ಇದೆ ಅಣ್ಣ” ಎಂದು ಇನ್ನೊಬ್ಬರು ಹೇಳಿದ್ದಾರೆ.

Leave a Comment

Your email address will not be published. Required fields are marked *