ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್| ಯೂನಿಟ್ ದರದಲ್ಲಿ ಮತ್ತೆ 36ಪೈಸೆ ಏರಿಕೆ ಮಾಡಿದ KERC

ಸಮಗ್ರ ನ್ಯೂಸ್: ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆಯ ಗಾಯ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಬರೆ ಬಿದ್ದಿದೆ. ಪ್ರತಿ ಯೂನಿಟ್​ಗೆ 36 ಪೈಸೆ ವಿದ್ಯುತ್​ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇಂದು (ಮಾರ್ಚ್​ 20) ಆದೇಶ ಹೊರಡಿಸಿದೆ.

Ad Widget .

ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್​ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್​ಸಿ ಹೊಸ ದರ ಜಾರಿಗೆ ಬರಲಿದೆ.

Ad Widget . Ad Widget .

ಈಗಾಗಲೇ ಬಸ್​ ಟಿಕೆಟ್​ ದರ, ಮೆಟ್ರೋ ಪ್ರಯಾಣ ದರ ಹಾಗೂ ದಿನಸಿ ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಇದೀಗ ವಿದ್ಯುತ್​ ದರ ಬಿಸಿ ತುಪ್ಪವಾಗಲಿದೆ.

Leave a Comment

Your email address will not be published. Required fields are marked *