ಕೈ ಕಾರ್ಯಕರ್ತೆ ಮೇಲೆ ಮಾಜಿ ಸಚಿವ ಹೆಚ್.ಎಂ ರೇವಣ್ಣ ಹಲ್ಲೆ ಆರೋಪ

ಸಮಗ್ರ ನ್ಯೂಸ್ : ಕೈ ಕಾರ್ಯಕರ್ತೆ ಮೇಲೆ ಮಾಜಿ ಸಚಿವ ಹಾಗೂ ಗ್ಯಾರಂಟಿ ಅನುಷ್ಠಾನ ಯೋಜನೆಗಳ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದೆ. ತಮ್ಮ ಬಗ್ಗೆ ಮಾತಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾರ್ಯಕರ್ತೆ ನಂದಿನಿ ನಾಗರಾಜು ಗಂಭೀರ ಆರೋಪ ಮಾಡಿದ್ದಾರೆ.

Ad Widget ... ..

ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ನಂದಿನಿ ನಾಗರಾಜ್ ನಿನ್ನೆ (ಮಾರ್ಚ್ 17) ಕೆಕೆ ಗೆಸ್ಟ್ ಹೌಸ್ ನಲ್ಲಿ ಇರುವಾಗ ಈ ಘಟನೆ ಆಗಿದೆ. ಇನ್ನು ಈ ಸಂಬಂಧ ನಂದಿನಿ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.

Ad Widget

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಎಂ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. “ಆ ಮಹಿಳೆ ನನಗೆ ಕಿರಿಕಿರಿ ಮಾಡಿಕೊಂಡು ಗಲಾಟೆ ಮಾಡುತ್ತಿದ್ದರು. ಆ ಮಹಿಳೆ ಯಾರು ಅನ್ನೋದನ್ನೂ ನಾನು ನೋಡಿಲ್ಲ. ಪದೇ ಪದೇ ರಾಹುಲ್ ಗಾಂಧಿ ಎಂದು ಹೇಳುತ್ತಿದ್ದಳು. ಕೊಲೆ ಮಾಡಲು ಬಂದಿದ್ದರು, ಹೊಡೆದರು ಅನ್ನೋದು ಸರಿಯಲ್ಲ. ವಿಡಿಯೋ ಮಾಡಬೇಡಮ್ಮ ಅಂತಾ ಮೊಬೈಲ್​ ತಳ್ಳಿದ್ದು ನಿಜ. ನಾವು ಯಾರೂ ಆಕೆಯ ಮೇಲೆ ಹಲ್ಲೆ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದರು. ಅಧಿಕಾರಿಯನ್ನು ವರ್ಗಾವಣೆ ಮಾಡಿಸುವುದಾಗಿ ಮಹಿಳೆ ಫೋನ್ಪೇ ಮೂಲಕ 1 ಲಕ್ಷ ರೂ. ದುಡ್ಡು ಪಡೆದಿದ್ದಾಳೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ” ಎಂದು ಹೇಳಿದರು.

Leave a Comment

Your email address will not be published. Required fields are marked *