ದಿ. ಸೌಜನ್ಯಳ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲು ಹೈಕೋರ್ಟ್ ಅಸ್ತು

ಸಮಗ್ರ ನ್ಯೂಸ್: ಕಳೆದ 13 ವರ್ಷಗಳ‌ ಹಿಂದೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ‌ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಬಳಿ ಅತ್ಯಾಚಾರಗೈದು ಕೊಲೆಯಾಗಿ ಹೋದ ವಿದ್ಯಾರ್ಥಿನಿ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿ ಶಾಂತಿಯುತ ಧರಣಿ, ಪ್ರತಿಭಟನೆ ನಡೆಸಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.

Ad Widget ... ..

ಮಾ.18 ರಂದು ಸಂಜೆ 5.30 ಕ್ಕೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆ ನಿಲ್ಲಿಸುವಂತೆ ಶೇಷಾದ್ರಿಪುರಂ ಪೊಲೀಸರು ನೀಡಿದ್ದ ನೋಟಿಸ್‌ ರಿಟ್‌ ಅರ್ಜಿ ವಿಚೃಣೆ ಮಾಡಿದ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಆದೇಶ ನೀಡಿದ್ದಾರೆ.

Ad Widget

ಸಮಾಲೋಚನಾ ಸಭೆಯ ಸಂಚಾಲಕರಾದ ವಿನಯ್‌ ಶ್ರೀನಿವಾಸ್‌ ಮತ್ತು ವಿಜಯಭಾಸ್ಕರ್‌ ಅವರ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ʼಪೊಲೀಸರು ಮತ್ತು ಸರಕಾರ ಸಭೆ, ಪ್ರತಿಭಟನೆಯನ್ನು ತಡೆಯುವಂತಿಲ್ಲ. ಆದರೆ ಕಾನೂನು ಉಲ್ಲಂಘನೆಯಾದಲ್ಲಿ ಮಾತ್ರ ಪೊಲೀಸರು ಕ್ರಮ ಕೈಗೊಳ್ಳಬಹುದು. ಊಹೆಯ ಆಧಾರದಲ್ಲಿ ಪ್ರತಿಭಟನೆ ತಡೆಯುವಂತಿಲ್ಲʼ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆದೇಶಿಸಿದ್ದಾರೆ.

Leave a Comment

Your email address will not be published. Required fields are marked *