ಸಮಗ್ರ ನ್ಯೂಸ್: ದೇಶದಲ್ಲಿ ಆಂಗ್ಲರ ಕೊಡುಗೆಯನ್ನು ಪ್ರಸಾದ ಎಂದು ಸ್ವೀಕರಿಸಿ ಶತಮಾನ ಕಳೆದಿದೆ. ಇಂಗ್ಲಿಷ್ ಮಾತನಾಡಿದರಷ್ಟೇ ಮಹಾನ್ ಸಾಧಕರು, ಅವರು ಆಕಾಶದಲ್ಲಿ ತೇಲಾಡುವವರು ಎಂದೋ ಅಂದುಕೊಂಡು ಆಗಿಬಿಟ್ಟಿದೆ. ಕನ್ನಡ ನಾಡಿನಲ್ಲಿಯೇ ಹುಟ್ಟಿ, ಕನ್ನಡದ ಮಣ್ಣಿನಲ್ಲಿಯೇ ಬೆಳೆದು, ಇಲ್ಲಿಯ ಅನ್ನ ತಿನ್ನುತ್ತಾ, ಇಲ್ಲಿಯದ್ದೇ ಹಣವನ್ನು ಸಂಪಾದನೆ ಮಾಡುತ್ತಿದ್ದವರು ಸ್ಟೈಲ್ ಆಗಿ ‘ಕನಡ್ ಗೊತ್ತಿಲ್’ ಎಂದೋ ‘ಸಲಪ ಸಲಪ ಕನಡ ಗೊತು’ ಎಂದು ಸ್ಟೈಲ್ ಆಗಿ ಹೇಳಿಬಿಟ್ಟರೆ ಸಾಕು ಹೆಚ್ಚಿನವರಿಗೆ ಅದು ಹೆಮ್ಮೆಯ ವಿಷಯವಾಗಿದೆ.
ಇನ್ನು ಕೆಲವು ಅಪ್ಪ-ಅಮ್ಮಂದಿರು ತಮ್ಮ ಮಕ್ಕಳಿಗೆ ಸರಿಯಾಗಿ ಕನ್ನಡ ಓದಲು-ಬರೆಯಲು ಬರಲ್ಲ ಎಂದು ಹೆಮ್ಮೆಯಿಂದ ಹೇಳುವುದು ಉಂಟು. ಆದರೆ ಅದೇ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದುಬಿಟ್ಟರೆ ಸಾಕು, ಅವರನ್ನು ಅವಹೇಳನ ಮಾಡುವುದು, ಕಸಕ್ಕಿಂತಲೂ ಕೀಳಾಗಿ ಕಾಣುವವರು ಇದ್ದಾರೆ. ನಮ್ಮ ಶಾಲಾ-ಕಾಲೇಜುಗಳಲ್ಲಿಯೇ ಇಂಥ ಸಂಸ್ಕೃತಿಯೂ ಬಂದು ಬಿಟ್ಟಿದೆ. ಅದೆಷ್ಟು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಷ್ ಮಾತನಾಡುವುದಿಲ್ಲ ಎಂದು ದಂಡ ಕಟ್ಟಿಸಿಕೊಳ್ಳುತ್ತಿರೋದು ಕಂಡುಬಂದಿದೆ. ಬೇರೆ ಭಾಷೆಗಳ ಹೇರಿಕೆ ಹೇರಿಕೆ ಎಂದು ಬೀದಿಗೆ ಇಳಿದು ಹೋರಾಟ ಮಾಡುವವರು ಕೂಡ ಇಂಗ್ಲಿಷ್ ಅನ್ನು ಅಪ್ಪಿ-ಒಪ್ಪಿ ಆಗಿಬಿಟ್ಟಿದೆ, ಸ್ಥಳೀಯ ಭಾಷೆ ಬರದಿದ್ದರೂ, ಇಂಗ್ಲಿಷ್ ಅಂತೂ ಬೇಕೇ ಬೇಕು ಎನ್ನುವಂಥ ಅನಿವಾರ್ಯವೂ ಈಗ ಸೃಷ್ಟಿಯಾಗಿದೆ.
ಆದರೆ ಇದೇ ಇಂಗ್ಲಿಷ್ನಲ್ಲಿ ಇರುವ ಕೆಲವು ಶಬ್ದಗಳ ನಿಜವಾದ ಅರ್ಥ ತಿಳಿದುಕೊಂಡರೆ ಮಾತ್ರ ಮೂರ್ಛೆ ಹೋಗುವುದು ಗ್ಯಾರೆಂಟಿ! ಪ್ರತಿನಿತ್ಯ ಅದೆಷ್ಟೋ ಬಾರಿ ಶಿಟ್ ಶಿಟ್ ಎಂದು ಹೇಳುತ್ತಲೇ ಇರುತ್ತೇವೆ. ಏನಾದರೂ ಎಡವಟ್ಟು ಆದರೆ ಛೇ ಎನ್ನೋ ಬದಲು ಶಿಟ್ ಎನ್ನುತ್ತೇವೆ. ಆದರೆ ಇದರ ನಿಜವಾದ ಅರ್ಥ ಗೊತ್ತಿರಲಿಕ್ಕೆ ಸಾಕು! ಅದಕ್ಕಿಂತಲೂ ಅಧ್ವಾನ ಆಗಿರುವ ಶಬ್ದ ‘ಮೇಡಂ’! ಮಹಿಳೆಯರಿಗೆ ‘ಮೇಡಂ’ ಎಂದೂ ಗಂಡಸರಿಗೆ ‘ಸರ್’ ಎಂದು ಹೇಳದೇ ಹೋದರೆ, ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿ ವಿಕೋಪಕ್ಕೂ ಹೋಗುವುದು ಉಂಟು. ಮೇಡಂ ಎನ್ನುವುದು ಗೌರವ ಸೂಚಕ ಎಂದು ಇಲ್ಲಿಯವರೆಗೆ ಅಂದುಕೊಂಡೇ ಬಂದದ್ದೇವೆ. ಇದೇ ಕಾರಣಕ್ಕೆ ಈ ಪದವನ್ನು ನಿತ್ಯವೂ ಕಚೇರಿಯಲ್ಲಿ ಇಲ್ಲವೇ ಬೇರೆ ಮಹಿಳೆಯರಿಗೆ ಸಂಬೋಧಿಸುವಾಗ ಅಥವಾ ಇನ್ನಾವುದೋ ಸ್ಥಳಗಳಲ್ಲಿ ಇದು ಮಹಿಳೆಯರಿಗೆ ಗೌರವ ಸೂಚಿಸುವ ಶಬ್ದವಾಗಿದೆ.
ಆದರೆ ಇದೀಗ ಇದರ ನಿಜವಾದ ಅರ್ಥದ ವಿಡಿಯೋ ಇದೀಗ ವೈರಲ್ ಆಗಿದೆ. ಭಾರತ್ ಬಚಾವೋ ಆಂದೋಲನ ನಡೆಸುತ್ತಿದ್ದ ರಾಜೀವ್ ದೀಕ್ಷಿತ್ ಅವರೂ ನಾವು ಬ್ರಿಟಿಷರಿಂದ ಬಳುವಳಿಯಾಗಿ ಪಡೆದುಕೊಂಡಿರುವ ಇಂಥದ್ದೇ ಎಡವಟ್ಟಿನ ಶಬ್ದಗಳ ಬಗ್ಗೆ ಎಷ್ಟೋ ವರ್ಷಗಳ ಹಿಂದೆಯೇ ಹೇಳಿದ್ದುಂಟು. ಅಷ್ಟಕ್ಕೂ ಮೇಡಂ ನಿಜವಾದ ಅರ್ಥ ಏನು ಗೊತ್ತಾ? ಫ್ರಾನ್ಸ್ನಲ್ಲಿ ಈ ಶಬ್ದವನ್ನು ಬಳಸುತ್ತಿದ್ದುದು ವೇಶ್ಯೆಯರಿಗೆ! ತಮ್ಮ ದೇಹವನ್ನು ಮಾರಿಕೊಳ್ಳುತ್ತಿದ್ದ ಮಹಿಳೆಯರಿಗೆ ಬಳಸುವ ಶಬ್ದ ಇದು. ಗೂಗಲ್ನಲ್ಲಿ ಸರ್ಚ್ ಮಾಡಿದರೂ ಇದರ ಬಗ್ಗೆ ಸಿಗುತ್ತದೆ. ‘ಮೈ ಲೇಡಿ’ ಅಂದರೆ ನನ್ನ ಹುಡುಗಿ ಇದು ‘ಮೇಡಂ’ ಆಗಿದೆ. ಇಲ್ಲಿ ನನ್ನ ಹುಡುಗಿ ಎಂದರೆ ಪ್ರೀತಿಯಿಂದ ಹೇಳುವಂಥದ್ದು ಅಲ್ಲ, ಬದಲಿಗೆ ಇಲ್ಲಿ ನನ್ನ ಹುಡುಗಿ ಬೇರೆಯದ್ದೇ ಹುಡುಗಿ ಆಗಿರುತ್ತಾಳೆ! ಹಾಗಿದ್ದರೆ ಯಾರನ್ನಾದರೂ ಮೇಡಂ ಎಂದು ಸಂಬೋಧಿಸಿದರೆ, ಅದು….!
ಇರಲಿ ಬಿಡಿ. ಹಾಗೆಂದು ಈಗ ಏಕಾಏಕಿ ಏನೂ ಬದಲಾಗಲು ಸಾಧ್ಯವಿಲ್ಲ. ಮೇಡಂ ಹೇಳುವ ಬದಲು ಅಕ್ಕ, ತಂಗಿ, ಆಂಟಿ ಎಂದೆಲ್ಲಾ ಹೇಳಲು ಸಾಧ್ಯವೇ ಇಲ್ಲ ಬಿಡಿ… ಇದೀಗ ಅನಿವಾರ್ಯವಾಗಿದ್ದು, ನಮ್ಮ ದಿನನಿತ್ಯದ ಭಾಗವೇ ಆಗಿಹೋಗಿದೆ. ಅಷ್ಟಕ್ಕೂ ಮಹಿಳೆಯರನ್ನು ಭಾರತದಲ್ಲಿ ಗೌರವದಿಂದ ಕರೆಯುವ ಸುಂದರ ಶಬ್ದವೊಂದಿದೆ. ಅದೇ ದೇವಿಜಿ. ಅಮಿತಾಭ್ ಬಚ್ಚನ್ ಅವರು ತಮ್ಮ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಇದನ್ನು ಪ್ರತಿನಿತ್ಯವೂ ಹೇಳುತ್ತಲೇ ಇರುತ್ತಾರೆ. ಆದರೆ ಯಾವುದಾದರೂ ಮಹಿಳೆಯರಿಗೆ ಅದರಲ್ಲಿಯೂ ಸ್ವಲ್ಪ ಹೈಫೈ ಎನ್ನಿಸಿಕೊಂಡವರಿಗೆ ದೇವಿಜಿ ಎಂದು ಕರೆದರೆ, ಪರಿಸ್ಥಿತಿ ಹೇಗೆ ಆಗಬಹುದು ಎನ್ನುವುದು ಬೇರೆ ಹೇಳಬೇಕಾಗಿಲ್ಲ ಬಿಡಿ.