ಸಮಗ್ರ ನ್ಯೂಸ್: ಈ ವಾರ ರವಿ, ಶುಕ್ರ, ರಾಹು, ಬುಧರು ಮೀನ ರಾಶಿಯಲ್ಲಿ ಇರುವರು. ಈ ಗ್ರಹಗಳ ಬಲ ದುರ್ಬಲಗಳ ಆಧಾರದ ಮೇಲೆ ಶುಭಾಶುಭಫಲಗಳು ಬರಲಿದ್ದು, ಅಶುಭಫಲವುಳ್ಳವರು ದೈವಬಲವನ್ನು ತುಂಬಿಕೊಳ್ಳಬೇಕು. ಈ ವಾರದ ದ್ವಾದಶ ರಾಶಿಗಳ ಫಲಾಫಲ ಏನು? ತಿಳಿಯೋಣ…
ಮೇಷ ರಾಶಿ:
ಈ ವಾರ ವೃತ್ತಿ ಸಂಬಂಧಿತ ಸವಾಲುಗಳು ಬರಬಹುದು, ವಾರದ ಮಧ್ಯದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಲಾಗುವುದು. ನಿಮ್ಮ ಸಹೋದರರ ಬೆಂಬಲ ನಿಮಗೆ ದೊರೆಯುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕವಾಗಿ ನಿಮಗೆ ಉತ್ತಮವಾಗಿದೆ, ಆದರೆ ಖರ್ಚು ಹೆಚ್ಚಿರಬಹುದು. ಮಕ್ಕಳ ಕಡೆಯಿಂದ ಖುಷಿಯ ಸುದ್ದಿ ಪಡೆಯುತ್ತೀರಿ, ವಾರದ ಕೊನೆಯಲ್ಲಿ ಶತ್ರುಗಳ ಬಗ್ಗೆ ಜಾಗ್ರತೆವಹಿಸಿ, ನೀವು ಕೋಪ ನಿಯಂತ್ರಿಸಿ, ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಈ ವಾರ ಧನಾತ್ಮಕವಾಗಿರಲಿದೆ, ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣವಾಗಲಿದೆ, ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ, ಸ್ನೇಹಿತರ ಜೊತೆ ಸಮಯ ಕಳೆಯಲು ಸಾಧ್ಯವಾಗಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆ ಮಾಡುತ್ತೀರಿ. ಆರ್ಥಿಕ ಸ್ಥಿತಿ ಸ್ಥಿರವಾಗಿರಲಿದೆ, ಮಕ್ಕಳು ಅವರ ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತಾರೆ, ವ್ಯಾಪಾರಿಗಳು ಲಾಭ ಗಳಿಸುತ್ತೀರಿ. ಆರೋಗ್ಯದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ.
ಮಿಥುನ ರಾಶಿ:
ಈ ವಾರ ನಿಮಗೆ ಅನುಕೂಲಕರವಾಗಿದೆ, ಆಸ್ತಿ ಸಂಬಂಧಿತ ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ, ಆರ್ಥಿಕ ಸ್ಥಿತಿ ತುಂಬಾನೇ ಚೆನ್ನಾಗಿರಲಿದೆ. ಅಲ್ಲದೆ ಕೆಲವರು ಹಣ ಪಡೆಯಲು ಮಾಡುವ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ನೀವು ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿ. ವಾರದ ಕೊನೆಯಲ್ಲಿ ಕೆಲಸದ ಜಾಗದಲ್ಲಿ ಜಾಗ್ರತೆಯಿಂದಿರಿ.
ಕರ್ಕಾಟಕ ರಾಶಿ:
ಈ ವಾರ ಕರ್ಕಾಟಕ ರಾಶಿಯವರು ಜಾಗ್ರತೆವಹಿಸಬೇಕು, ಕೆಲಸ ಕಾರ್ಯದಲ್ಲಿ ಅಡೆತಡೆ ಉಂಟಾಗಬಹುದು. ನೀವು ಕೆಲಸದ ಕಡೆಗೆ ಹೆಚ್ಚು ಗಮನಹರಿಸಿ, ನಿಮಗೆ ನೀಡಿರುವ ಜವಾಬ್ದಾರಿ ಪೂರ್ಣಗೊಳಿಸಲು ಪ್ರಯತ್ನಿಸಿ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ವಾರ ಅನುಕೂಲಕರವಾಗಿದೆ. ಆಸ್ತಿ ಸಂಬಂಧಿಸಿದ ವ್ಯವಹಾರ ಲಾಭ ತರಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕವಾಗಿರಲಿದೆ. ವಾರಾಂತ್ಯವು ನಿಮಗೆ ಅನುಕೂಲಕರವಾಗಿರಲಿದೆ.
ಸಿಂಹ ರಾಶಿ:
ಈ ವಾರ ನಿಮಗೆ ಉತ್ತಮವಾಗಿರಲಿದೆ, ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ, ಕೆಲಸದಲ್ಲಿ ಉತ್ತಮ ಪ್ರತಿಫಲ ದೊರೆಯಲಿದೆ. ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಲಿದೆ. ಇನ್ನು ಪ್ರಯಾಣದ ಸಾಧ್ಯತೆ ಇದ್ದು ಆ ಪ್ರಯಾಣ ಖುಷಿ ನೀಡಲಿದೆ. ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿದೆ. ಈ ವಾರ ನಿಮಗೆ ಎಲ್ಲಾ ರೀತಿಯಿಂದಲೂ ಉತ್ತಮವಾಗಿದೆ.
ಕನ್ಯಾ ರಾಶಿ:
ಈ ವಾರ ನೀವು ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಇರಲಿದೆ, ಆದರೆ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿದೆ. ನೀವು ಈ ವಾರದಲ್ಲಿ ಬುಧವಾರ ಮ್ತು ಗುರುವಾರ ಸ್ವಲ್ಪ ಜಾಗ್ರತೆ ವಹಿಸಬೇಕು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು, ವಾರದ ಕೊನೆಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು, ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ತುಲಾ ರಾಶಿ:
ಆರ್ಥಿಕವಾಗಿ ಈ ವಾರ ನಿಮಗೆ ಉತ್ತಮವಾಗಿರಲಿದೆ, ಆದರೆ ವೃತ್ತಿ ಬದುಕಿನಲ್ಲಿ ಒತ್ತಡ ಹೆಚ್ಚಿರಲಿದೆ, ಕೆಲಸ ಕಾರ್ಯಗಳು ಸಮಯಕ್ಕೆ ಮುಗಿಯದೆ ಮಾನಸಿಕ ಒತ್ತಡ ಹೆಚ್ಚಾಗಬಹುದು, ಆದರೆ ಕಠಿಣ ಶ್ರಮ ಹಾಕಿದರೆ ನಿಮ್ಮ ಕೆಲಸ ಕಾರ್ಯಗಳು ಸಮಯಕ್ಕೆ ಪೂರ್ಣವಾಗುವಂತೆ ನೋಡಿಕೊಳ್ಳಬಹುದು, ಕುಟುಂಬ ಜೀವನ ಚೆನ್ನಾಗಿರಲಿದೆ. ಪ್ರತಿಕೂಲ ಸಂದರ್ಭದಲ್ಲಿ ಸಂಗಾತಿಯ ಬೆಂಬಲ ದೊರೆಯಲಿದೆ.
ವೃಶ್ಚಿಕ ರಾಶಿ:
ವಾರದ ಆರಂಭದಲ್ಲಿ ನೀವುಸ್ವಲ್ಪ ಜಾಗ್ರತೆವಹಿಸಬೇಕಾಗುತ್ತದೆ, ಹೆಚ್ಚಾಗುತ್ತಿರುವ ಖರ್ಚುಗಳು ನಿಮ್ಮ ಆರ್ಥಿಕ ಸ್ಥಿತಿ ಹದಗೆಡಿಸಬಹುದು, ಆದರೆ ಬರಬೇಕಾಗಿರುವ ಹಣವು ವಾರದ ಕೊನೆಯಲ್ಲಿ ಕೈ ಸೇರುವುದರಿಂದ ಪರಿಸ್ಥಿತಿ ಸುಧಾರಿಸಲಿದೆ. ಕೆಲಸದ ಕಡೆಗೆ ಗಮನಹರಿಸಲು ಸಾಧ್ಯವಾಗುವುದು. ಕುಟುಂಬದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ, ಅಪೂರ್ಣವಾಗಿರುವ ಕೆಲಸವು ಈ ಅವಧಿಯಲ್ಲಿ ಪೂರ್ಣವಾಗಲಿದೆ.
ಧನು ರಾಶಿ:
ಈ ವಾರ ನಿಮಗೆ ಮಿಶ್ರಫಲ. ಹಣದ ವಿಷಯದಲ್ಲಿ ಈ ವಾರ ಅಷ್ಟೊಂದು ಅನುಕೂಲಕರವಲ್ಲ, ಆದಾಯಕ್ಕಿಂತ ಖರ್ಚು ಹೆಚ್ಚು ಬರುವುದು ನಿಮ್ಮ ಚಿಂತೆಗೆ ಕಾರಣವಾಗಿರಬಹುದು. ಪ್ರತಿಕೂಲ ಸಂದರ್ಭದಲ್ಲಿ ಕುಟುಂಬದ ಬೆಂಬಲ ದೊರೆಯುವುದರಿಂದ ಪರಿಸ್ಥಿತಿ ಸುಧಾರಿಸಲಿದೆ. ಹಣಕಾಸು ಉತ್ತಮವಾಗಿರಲಿದೆ.
ಮಕರ ರಾಶಿ:
ಈ ವಾರ ಅದೃಷ್ಟದ ವಾರ, ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ಕೆಲಸದಲ್ಲಿನ ಅಡೆತಡೆ ದೂರಾಗಲಿದೆ, ವಾರದ ಮಧ್ಯದಲ್ಲಿ ಖರ್ಚು ಸ್ವಲ್ಪ ಹೆಚ್ಚಾಗಬಹುದು, ಆದರೆ ದೊಡ್ಡ ಸಮಸ್ಯೆಯಾಗುವುದಿಲ್ಲ. ಕುಟುಂಬ ಜೀವನ ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಆರೋಗ್ಯದ ದೃಷ್ಟಿಯಿಂದಲೂ ಈ ವಾರ ನಿಮಗೆ ಅನುಕೂಲಕರವಾಗಿದೆ.
ಕುಂಭ ರಾಶಿ:
ಈ ವಾರ ಕೆಲಸ ಕಾರ್ಯದ ದೃಷ್ಟಿಯಿಂದ ಅನುಕೂಲಕರವಾಗಿದೆ, ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡಿ ಮುಗಿಸಲು ಸಾಧ್ಯವಾಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರೆಗೆ ಈ ವಾರ ತುಂಬಾ ಒಳ್ಳೆಯದಿದೆ, ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಖರ್ಚು ವೆಚ್ಚಗಳು ಅಧಿಕವಿರಲಿದೆ. ಕುಟುಂಬದಲ್ಲಿ ಏನಾದರು ಭಿನ್ನಾಭಿಪ್ರಾಯ ಉಂಟಾದರೆ ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ.
ಮೀನ ರಾಶಿ:
ಈ ವಾರ ಆರ್ಥಿಕ ದೃಷ್ಟಿಯಿಂದ ಅಷ್ಟೊಂದು ಅನುಕೂಲಕರವಲ್ಲ, ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು, ಇದರಿಂದ ಒತ್ತಡ ಹೆಚ್ಚಾಗಲಿದೆ, ಆರ್ಥಿಕವಾಗಿಯೂ ಸವಾಲಿನ ವಾರ. ವಾರದ ಕೊನೆಯಲ್ಲಿ ಪರಿಸ್ಥಿತಿ ಸುಧಾರಿಸಲಿದೆ, ವ್ಯಾಪಾರಿಗಳು ಲಾಭ ಕಾಣುತ್ತೀರಿ, ಕುಟುಂಬದಲ್ಲಿನ ಸಮಸ್ಯೆ ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ.