Ad Widget .

ಪುತ್ತೂರು: ಯೂಟ್ಯೂಬರ್ ಸಮೀರ್ ವಿರುದ್ಧ ವಿಎಚ್ ಪಿ ಗರಂ

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯೂಟ್ಯೂಬರ್ ವಿಡಿಯೋ ವಿರುದ್ದ ವಿಶ್ವಹಿಂದೂ ಪರಿಷತ್ ಗರಂ ಆಗಿದ್ದು, ಧರ್ಮಸ್ಥಳ‌ ಕ್ಷೇತ್ರದಲ್ಲಿ ಸೌಜನ್ಯಳ ಆರೋಪಿಗಳಿದ್ದರೆ ಅವರನ್ನು ಹಿಡಿದು ಕೊಂಡೋಗಿ ಅವರಿಗೆ ಯಾವರೀತಿ ಹಿಂಸೆ ಮಾಡುತ್ತೀರಿ, ಯಾವ ಲೀಸ್ ,ನ್ಯಾಯಾಲಯದ ಎದುರು ನಿಲ್ಲಿಸುತ್ತೀರಿ ಅದಕ್ಕೆ ನಮ್ಮ ಬೆಂಬಲವಿದೆ, ಆದರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ದ ಅವಹೇಳನ ಮಾಡಿದರೆ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

Ad Widget . Ad Widget . Ad Widget . Ad Widget .

ಪುತ್ತೂರಿನಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಮುಖಂಡ ಬಾಸ್ಕರ್ ಧರ್ಮಸ್ಥಳ ಸೌಜನ್ಯ ಕೇಸ್ ಬಗ್ಗೆ ಯ್ಯೂಟ್ಯೂಬರ್ ಸಮೀರ್ ವಿಡಿಯೋ ಮಾಡಿದ್ದು, ಅದರಲ್ಲಿ ಧರ್ಮಸ್ಥಳ ಕ್ಷೇತ್ರವನ್ನು ಸರಕಾರದ ವ್ಯಾಪ್ತಿಗೆ ತರುವ ಬಗ್ಗೆ ಉಲ್ಲೇಖ ಮಾಡಿದ್ದಾನೆ. ಸೌಜನ್ಯ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಮೊದಲಿನಿಂದಲೇ ಹೋರಾಟ ಮಾಡಿಕೊಂಡು ಬಂದಿದೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರೇ ಆಗಿನ ಗೃಹಸಚಿವ ಆರ್.ಅಶೋಕ್ ಗೆ ಕರೆಮಾಡಿ ತನಿಖೆಗೆ ಒತ್ತಾಯ ಮಾಡಿದ್ದಾರೆ. ಇಂದಿಗೂ ವಿಶ್ವಹಿಂದೂ ಪರಿಷತ್ ಸೌಜನ್ಯನಿಗೆ ನ್ಯಾಯ‌ ಸಿಗಬೇಕೆಂದು‌ ಒತ್ತಾಯಿಸುತ್ತದೆ, ಧರ್ಮಸ್ಥಳ‌ ಕ್ಷೇತ್ರದಲ್ಲಿ ಸೌಜನ್ಯಳ ಆರೋಪಿಗಳಿದ್ದರೆ ಅವರನ್ನು ಹಿಡಿದು ಕೊಂಡೋಗಿ ಅವರಿಗೆ ಯಾವರೀತಿ ಹಿಂಸೆ ಮಾಡುತ್ತೀರಿ, ಯಾವ ಪೋಲೀಸ್ , ನ್ಯಾಯಾಲಯದ ಎದುರು ನಿಲ್ಲಿಸುತ್ತೀರಿ ಅದಕ್ಕೆ ನಮ್ಮ ಬೆಂಬಲವಿದೆ. ಅದು ಬಿಟ್ಟು ಹಿಂದೂ ಕ್ಷೇತ್ರದ ವಿರುದ್ಧ ಮಾತನಾಡಿದಲ್ಲಿ ವಿಶ್ವಹಿಂದೂ ಪರಿಷತ್ ಸುಮ್ಮನೆ ಕೂರುವುದಿಲ್ಲ ಎಂದರು.

Ad Widget . Ad Widget .

ಯ್ಯೂಟ್ಯೂಬರ್ ಸಮೀರ್ ಇತರ ಹಿಂದೂ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರದ ಬಗ್ಗೆಯೂ ಮಾತನಾಡಬೇಕು, ಕೇರಳದ ಪೊನ್ನಾನಿಯಲ್ಲಿ ಹಿಂದೂ ಹೆಣ್ಣುಮಕ್ಕಳ ಮತಾಂತರ ನಡೆಯುತ್ತದೆ. ಅದರ ಬಗ್ಗೆಯೂ ವಿಡಿಯೋ ಮಾಡಿ ಹಾಕಬೇಕು ಎಂದು ಯ್ಯೂಟ್ಯೂಬರ್ ಸಮೀರ್ ವಿರುದ್ಧ ಕಿಡಿಕಾರಿದ್ದಾರೆ.

ವಿಶ್ವಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಎಂ.ಪೂವಪ್ಪ ಮಾತನಾಡಿ ಹಿಂದೂ ದೇವಸ್ಥಾನಗಳ ಬಗ್ಗೆ ಮಾತನಾಡುವ ಅಧಿಕಾರ ಯ್ಯೂಟ್ಯೂಬರ್ ಗೆ ಇಲ್ಲ, ಧಾರ್ಮಿಕ ಕೇಂದ್ರಗಳಲ್ಲಿ ತಪ್ಪಾಗಿದ್ದರೆ ಅದನ್ನು ತಿದ್ದಲು ವಿಶ್ವಹಿಂದೂ ಪರಿಷತ್ ಇದೆ. ಅಖಿಲ ಭಾರತ ಮಟ್ಟದಿಂದ ವಿ.ಹೆಚ್.ಪಿ ಈ ಕೆಲಸ ಮಾಡುತ್ತಿದೆ. ಅನ್ಯಾಯಕ್ಕೋಳಗಾದ ಯುವತಿಗೆ ನ್ಯಾಯಕ್ಕಾಗಿ ವಿಶ್ವಹಿಂದೂ ಪರಿಷತ್ ಹೋರಾಟ ಮಾಡಿದೆ. ಈಗಲೂ ನ್ಯಾಯಕ್ಕಾಗಿ ಒತ್ತಾಯಿಸುತ್ತಿದೆ. ಸಮೀರ್ ಎನ್ನುವ ಯ್ಯೂಟ್ಯೂಬರ್ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ವಿಡಿಯೋ ಮಾಡಿ ಅಧಿಕ ಪ್ರಸಂಗಿತನ ಮಾಡಿದ್ದಾನೆ. ಆತನ ತನ್ನ ತಪ್ಪನ್ನು ತಿದ್ದಿಕೊಳ್ಳದೇ ಇದ್ದಲ್ಲಿ ವಿಶ್ವಹಿಂದೂ ಪರಿಷತ್ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದರು.

ಹಿಂದೂ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ತಪ್ಪಿಸುವ ಪ್ರಯತ್ನದಲ್ಲಿ ವಿ.ಹೆಚ್.ಪಿ ಕಾರ್ಯಪ್ರವೃತ್ತವಾಗಿದೆ. ಇಡೀ ದೇಶ ಮಟ್ಟದಲ್ಲಿ ಈ ಕಾರ್ಯ ನಡೆಯುತ್ತಿದೆ. ಈ ನಡುವೆ ದೇವಾಲಯಗಳನ್ನು ಸರಕಾರದ ಸುಪರ್ದಿಗೆ ನೀಡುವ ಹೇಳಿಕೆಗಳನ್ನು ಪರಿಷತ್ ಖಂಡಿಸುತ್ತದೆ. ಸಮೀರ್ ಅಹಮ್ಮದ್ ತನ್ನ ತಪ್ಪನ್ನು ತಿದ್ದಿಲ್ಲ ಎಂದಾದರೆ ವಿಧ್ವಹಿಂದೂ ಪರಿಷತ್ ಗೆ ಮುಂದೆ ಏನು ಮಾಡಬೇಕು ಅನ್ನೋದು ತಿಳಿದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *