ಸಮಗ್ರ ನ್ಯೂಸ್: ಪುತ್ತೂರಿನ ಹಲವು ದಶಕಗಳ ಬೇಡಿಕೆಯಾದ ಸರಕಾರಿ ವೈದಕೀಯ ಕಾಲೇಜ್ ಸ್ಥಾಪನೆಯ ಕನಸ್ಸು ಕೊನೆಗೂ ಈಡೇರಿದೆ. ಶಾಸಕ ಅಶೋಕ್ ರೈಯವರ ಭಗೀರಥ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು , ಸಿ ಎಂ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಪುತ್ತೂರಿಗೆ ಹೊಸ ಸರಕಾರಿ ವೈದಕೀಯ ಕಾಲೇಜ್ ಘೋಷಿಸಿದ್ದಾರೆ.
ಪುತ್ತೂರಿನಲ್ಲಿ ಹೊಸ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಉದ್ಧೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮಾರ್ಥ್ಯದ ತಾಲೂಕು ಆಸ್ಫತ್ರೆಯನ್ನು ಉನ್ನತಿಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು ಎಂದು ಬಜೆಟ್ ಪತ್ರದಲ್ಲಿ ತಿಳಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪುತ್ತೂರಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸುವುದಾಗಿ ಶಾಸಕ ಅಶೋಕ್ ರೈಯವರು ಘೋಷಿಸಿದ್ದರು . ತಾವು ಶಾಸಕರಾಗಿ ಆಯ್ಕೆಯಾದ ಬಳಿಕ ರಂತರವಾಗಿ ಅಶೋಕ್ ರೈಯವರು ಸರಕಾರದ ಮೇಲೆ ಒತ್ತಡ ಹಾಕುವ ಕಾರ್ಯ ಮಾಡಿದ್ದರು. ಕಂದಾಯ ಇಲಾಖೆಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೂಲಕ ವೈದ್ಯಕೀಯ ಕಾಲೇಜು ಪ್ರಸ್ತಾವನೆಯನ್ನು ಸರಕಾರದ ತುತ್ತತುದಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದರು.