Ad Widget .

ಸೌಜನ್ಯ ಪ್ರಕರಣ ಕುರಿತು ವಿಡಿಯೋ ಮಾಡಿದ ‘ಧೂತ’ ಸಮೀರ್| ಎಡಿಜಿಪಿಯಿಂದ ಪೊಲೀಸ್ ಆಯುಕ್ತರು, ಸೋಶಿಯಲ್ ಮೀಡಿಯಾ ಸೆಲ್ ಗಳಿಗೆ ಪತ್ರ

ಸಮಗ್ರ ನ್ಯೂಸ್: 2012ರಲ್ಲಿ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಎಂಬ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಂದಿಗೂ ಸಹ ಬಗೆಹರಿದಿಲ್ಲ. ಪ್ರಕರಣದಲ್ಲಿ ಪಿಎಸ್‌ಐ ಯೋಗೇಶ್ ಮಾಡಿದ ತಪ್ಪುಗಳಿಂದ ಪ್ರಕರಣಕ್ಕೆ ಯಾವುದೇ ಸಾಕ್ಷಿ ಇಲ್ಲದಂತಾಗಿದೆ.

Ad Widget . Ad Widget . Ad Widget . Ad Widget .

ಇನ್ನು ಸೌಜನ್ಯ ಕೊಲೆ ಪ್ರಕರಣದಲ್ಲಿ ಸಂತೋಷ್ ಎಂಬ ನಿರಪರಾಧಿಯನ್ನು ಬಂಧಿಸಿ ಇಡೀ ಪ್ರಕರಣವನ್ನು ಹಳ್ಳ ಹಿಡಿಸಿದ್ದ ಯೋಗೇಶ್ ಪ್ರಕರಣ ಇನ್ನೂ ಈ ಹಂತದಲ್ಲಿರಲು ಕಾರಣ.

Ad Widget . Ad Widget .

ಹೀಗೆ ಬಗೆಹರಿಯದೇ ಉಳಿದ ಈ ಪ್ರಕರಣ ಸೌಜನ್ಯ ಹುಟ್ಟುಹಬ್ಬ ಮತ್ತು ನಿಧನ ವಾರ್ಷಿಕೋತ್ಸವದ ದಿನಗಳಂದು ಮನೆಯವರು ಹಾಗೂ ಊರಿನವರು ಮಾಡುವ ಪ್ರತಿಭಟನೆಯಿಂದ ಆಗಾಗ ಸುದ್ದಿಯಾಗುತ್ತಿತ್ತು. ಆದರೆ ಇದೀಗ ಕನ್ನಡದ ಯುಟ್ಯೂಬರ್ ಸಮೀರ್ ಎಂಬಾತ ಮಾಡಿರುವ ವಿಡಿಯೊ ಈ ಪ್ರಕರಣವನ್ನು ಮತ್ತೊಮ್ಮೆ ದೊಡ್ಡಮಟ್ಟದಲ್ಲಿ ಮುನ್ನೆಲೆಗೆ ತಂದಿದೆ.

ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತಾಗಿ ವಿಡಿಯೊ ಮಾಡಿರುವ ಸಮೀರ್ ಇಡೀ ಪ್ರಕರಣದ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ. ಅಲ್ಲದೇ ವಿಡಿಯೊದ ಆರಂಭದಲ್ಲಿ ಧರ್ಮಸ್ಥಳ ಹಿಂದೂ ದೇವಾಲಯವಲ್ಲ ಇದೊಂದು ಜೈನ ದೇವಾಲಯ ಎಂದು ಸ್ವತಃ ಮಾಲೀಕರೇ ಹೇಳಿದ್ದಾರೆ ಎಂದೂ ಸಹ ಸಮೀರ್ ಹೇಳಿದ್ದರು.

ಇನ್ನು ಸೌಜನ್ಯ ಕೊಲೆ ಪ್ರಕರಣದಲ್ಲಿ ಸಂತೋಷ್ ಎಂಬ ನಿರಪರಾಧಿಯನ್ನು ಬಂಧಿಸಿ ಇಡೀ ಪ್ರಕರಣವನ್ನು ಹಳ್ಳ ಹಿಡಿಸಿದ್ದ ಯೋಗೇಶ್ ಪ್ರಕರಣ ಇನ್ನೂ ಈ ಹಂತದಲ್ಲಿರಲು ಕಾರಣ ಎಂದೂ ಸಹ ಸಮೀರ್ ಹೇಳಿದ್ದರು.

ಈ ವಿಡಿಯೊ ಸದ್ಯ ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡು ವೈರಲ್ ಆಗಿದ್ದು, ಇದರ ಕುರಿತಾಗಿ ಸ್ವತಃ ಪೊಲೀಸ್ ಮಹಾ ನಿರ್ದೇಶಕರೇ ಪತ್ರ ಬರೆದಿದ್ದಾರೆ. ಎಲ್ಲಾ ಜಿಲ್ಲೆಯ ಪೊಲೀಸ್ ಆಯುಕ್ತರು ಹಾಗೂ ಎಲ್ಲ ವಲಯ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿರುವ ಎಡಿಜಿಪಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಘಟಕಾಧಿಕಾರಿಗಳು ಈ ವೈರಲ್ ವಿಡಿಯೊವನ್ನು ಮೇಲಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ.

ಈ ವಿಡಿಯೊ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪರ – ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದು, ಸಮಾಜದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಸಾಮಾಜಿಕ ಜಾಲತಾಣದ ಮೇಲೆ ಒಂದು ಕಣ್ಣಿಡಿ ಎಂದು ಸೂಚಿಸಿದ್ದಾರೆ.

Leave a Comment

Your email address will not be published. Required fields are marked *