Ad Widget .

ನಟಿ ರನ್ಯಾ ರಾವ್ ಮನೆಯಿಂದ 17.29 ಕೋಟಿ ಮೌಲ್ಯದ ನಗ ನಗದು ವಶ

ಸಮಗ್ರ ನ್ಯೂಸ್: ನಟಿ ರನ್ಯಾ ರಾವ್ ನಿನ್ನೆಯಷ್ಟೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ನಟಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಂತೆ ನಟಿಯ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Ad Widget . Ad Widget . Ad Widget . Ad Widget .

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತದ ಚಿನ್ನ ವಶಪಡಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ. ಡಿಆರ್​ಐ ಅಧಿಕಾರಿಗಳು ಮೊನ್ನೆ ರನ್ಯಾ ಬಂಧನ ಬಳಿಕ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್​ನ ಫ್ಲ್ಯಾಟ್​ನಲ್ಲಿ ರನ್ಯಾ ಮನೆ ಇದ್ದು, 5ಕ್ಕೂ ಹೆಚ್ಚು ಅಧಿಕಾರಿಗಳು ಫ್ಲ್ಯಾಟ್​ನಲ್ಲಿ ಪರಿಶೀಲನೆ ನಡೆಸಿದ್ದರು, ಬಳಿಕ 3 ದೊಡ್ಡ ಪೆಟ್ಟಿಗೆಯನ್ನು ನಗದು ಹಣ ಮತ್ತು ಚಿನ್ನವನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು. ರನ್ಯಾ ಮನೆಯಲ್ಲಿ 2.06 ಕೆಜಿ ಚಿನ್ನ ಹಾಗೂ 2.67 ಕೋಟಿ ನಗದು ಹಣ ಪತ್ತೆಯಾಗಿದೆ.

Ad Widget . Ad Widget .

ನಟಿ ರನ್ಯಾ ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ಗಲ್ಫ್ ದೇಶಕ್ಕೆ ಹೋಗಿ ಬಂದಿದ್ದರಂತೆ. ಪ್ರತಿ ಬಾರಿ ನಟಿ ರನ್ಯಾ ವಿಮಾನ ನಿಲ್ದಾಣಕ್ಕೆ ಹೋದಾಗಲೂ ಹಿರಿಯ ಅಧಿಕಾರಿಗಳು ಬಳಸುವ ಅಫಿಷಿಯಲ್ ಪ್ರೋಟೊಕಾಲ್ ಸರ್ವೀಸ್ ಅನ್ನು ಬಳಸಿ ಸೆಕ್ಯುರಿಟಿ ಚೆಕ್ ನಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮತ್ತು ಪ್ರತಿಬಾರಿ ಚಿನ್ನ ಕಳ್ಳಸಾಗಣೆಗೆ ಹೋದಾಗಲು ಒಂದೇ ರೀತಿಯ ಬಟ್ಟೆ ಹಾಕಿಕೊಂಡು ಹೋಗುತ್ತಿದ್ದರಂತೆ. ಬೆಲ್ಟ್ ನ ಒಳಗೆ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು, ಆ ಬೆಲ್ಟು ಹೊರಗೆ ಕಾಣದಂತೆ ಬಟ್ಟೆ ಹಾಕಿಕೊಂಡು ಬರುತ್ತಿದ್ದರಂತೆ ರನ್ಯಾ. ಹಾಗಾಗಿ ಯಾರಿಗೂ ಸಹ ನಟಿಯ ಮೇಲೆ ಅನುಮಾನ ಬಂದಿರಲಿಲ್ಲ. ಆದರೆ ದೆಹಲಿಯಲ್ಲಿ ಕೂತಿದ್ದ ಡಿಆರ್’ಐ ಅಧಿಕಾರಿಗಳಿಗೆ ಅನುಮಾನ ಬಂದು ತಪಾಸಣೆ ನಡೆದಾಗ ನಟಿಯ ಕಳ್ಳತನ ಸಿಕ್ಕಿಹಾಕಿಕೊಂಡಿದೆ.

Leave a Comment

Your email address will not be published. Required fields are marked *