ಸಮಗ್ರ ನ್ಯೂಸ್: ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗದ ಅಡ್ಕಾರ್ ಆರ್ಕೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಶಾಲೆಯಿಂದ ಒಂದನೇ ತರಗತಿಗೆ ತೆರಳಿರುವ ಯುಕೆಜಿ ವಿಥ್ಯಾರ್ಥಿಗಳಿಗೆ ಗ್ರಾಜ್ಯುವೇಶನ್ ಡೇ’ ಕಾರ್ಯಕ್ರಮ ಮತ್ತು ಪೋಷಕರ ಸಭೆ ಮಾ.1ರಂದು ನಡೆಯಿತು.
ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ.ಜಿ., ಸಂಸ್ಥೆಯ ಅಧ್ಯಕ್ಷ ಶುಭಕರ ಬಿ.ಸಿ. ಹಾಗೂ ಪೋಷಕರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಬಗ್ಗೆ ಗೀತಾಂಜಲಿ ಟಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಶೈಕ್ಷಣಿಕ ಚಟುವಟಿಕೆಯ ಕುರಿತು ಪೋಷಕರಿಗೆ ತಿಳಿಸಿದರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಪ್ರಶಸ್ತಿಯನ್ನು ನೀಡಲಾಯಿತು. ನಂತರ ಮಕ್ಕಳ ಬಗ್ಗೆ ಪೋಷಕರು ಅನಿಸಿಕೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀಮತಿ ಲಕ್ಷ್ಮಿ ಶೆಟ್ಟಿ, ಪ್ರಮೀಳ, ದೀಕ್ಷಾ, ಸುಕನ್ಯರವರು ಹಾಗೂ ಪೋಷಕರು ಉಪಸ್ಥಿತರಿದ್ದರು, ಶಿಕ್ಷಕಿ ಫೇಬಿದ ರವರು ಕಾರ್ಯಕ್ರಮ ನಿರೂಪಿಸಿ
ಸಹಕರಿಸಿದರು.