Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗುರು ವೃಷಭ ರಾಶಿಯಲ್ಲಿ, ಕುಜ ಮಿಥುನ ರಾಶಿಯಲ್ಲಿ, ಕೇತು ಕನ್ಯಾರಾಶಿಯಲ್ಲಿ, ರವಿ ಮತ್ತು ಶನಿ ಕುಂಭ ರಾಶಿಯಲ್ಲಿ, ಮತ್ತು ರಾಹು, ಶುಕ್ರ, ಬುಧ ಮೀನ ರಾಶಿಯಲ್ಲಿ ಸಂಚರಿಸುತ್ತಾರೆ. ಮಾರ್ಚ್‌ 9 ರಂದು ಗಜಕೇಸರಿ ಮಹಾಯೋಗವಿದೆ. ಮೇಷ ಮತ್ತು ವೃಷಭ ರಾಶಿಗಳ ಫಲಾಫಲಗಳ ವಿವರವಾದ ವಿವರಣೆ ನೀಡಲಾಗಿದೆ. ಪ್ರತಿಯೊಂದು ರಾಶಿಯವರಿಗೆ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಏನು ಫಲ ಎಂಬುದನ್ನು ವಿವರಿಸಲಾಗಿದೆ. ಯಾರಿಗೆ ಲಾಭ? ಯಾರಿಗೆ ಶುಭ? ನೋಡೋಣ…

Ad Widget . Ad Widget . Ad Widget . Ad Widget .

ಮೇಷ ರಾಶಿ:
ರಾಶಿಯ ಅಧಿಪತಿ ಕುಜ ತೃತೀಯದಲ್ಲಿ ಸಹೋದರನ ಸಾಂಗತ್ಯವನ್ನು ಕೊಡಿಸುವನು. ಇಲ್ಲ ಸಲ್ಲದ ಯೋಚನೆಗಳಿಲ್ಲದೇ ಮನಸ್ಸು ಶಾಂತವಾಗಲಿದೆ. ಇತರರು ನಿಮ್ಮ ಕುರಿತು ಸಲ್ಲದ ಮಾತುಗಳನ್ನು ಆಡಬಹುದು. ಬುಧ ಹಾಗೂ ಶುಕ್ರರು ದ್ವಾದಶದಲ್ಲಿ ಇದ್ದು ನಿಮ್ಮ ಆರೋಗ್ಯವನ್ನು, ಸಂಪತ್ತು ಕಳೆಯುವರು. ತಪ್ಪುಗಳ ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ. ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಆಪ್ತರ ಭೇಟಿಯಾಗಬಹುದು. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಚರ್ಚಿಸುವಿರಿ. ಆಪ್ತಸಮಾಲೋಚನೆ ನಡೆಯಲಿದೆ. ಉದ್ಯೋಗದಲ್ಲಿ ಮೇಲ್ಮಟ್ಟಕ್ಕೆ ಹೋಗಲಿದ್ದೀರಿ. ಅವರಿಂದ ಸಹಕಾರವೂ ನಿಮಗೆ ಸಿಗುವ ಸಾಧ್ಯತೆ ಇದೆ‌. ಕಾರ್ತಿಕೆಯನ್ನು ಸ್ತೋತ್ರಮಾಡಿ.

Ad Widget . Ad Widget .

ವೃಷಭ ರಾಶಿ:
ಮಾರ್ಚ್ ತಿಂಗಳ ಮೊದಲ ವಾರದಲ್ಲಿ ನಿಮಗೆ ಅತಿ ಶುಭ. ರಾಶಿಯ ಅಧಿಪತಿ ಏಕಾದಶಲ್ಲಿ ಇದ್ದಾನೆ. ಅಂದುಕೊಂಡಿದ್ದು ಸಿದ್ಧಿಸುವುದು. ಶುಕ್ರದಶೆ ನಿಮಗೆ ಅತ್ಯಂತ ಒಳ್ಳೆಯದಾಗಿದೆ. ಆಯತಪ್ಪಿದರೆ ದುಶ್ಚಟಕ್ಕೆ ದಾಸರಾಗುವ ಸಾಧ್ಯತೆಯೂ ಇದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಎಲ್ಲವನ್ನೂ ಶಕ್ತಿಮೀರಿ ಪ್ರಯತ್ನಿಸುವಿರಿ. ಅತಿಯಾದ ನಿದ್ರೆಯಯನ್ನು ಮಾಡುವ ಮನಸ್ಸು ಮಾಡುವಿರಿ. ಆಲಸ್ಯವು ಒಳ್ಳೆಯದಲ್ಲ‌. ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ಕಲಾವಿದರು ಉತ್ತಮವಾದ ಅವಕಾಶವನ್ನು ಪಡೆಯಲಿದ್ದಾರೆ. ಹಣಕಾಸಿನಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಕಾಣಬಹುದು. ಮಹಾಗೌರಿಯನ್ನು ಪ್ರಾರ್ಥಿಸಿ.

ಮಿಥುನ ರಾಶಿ;
ಈ ವಾರದಲ್ಲಿ ನಿಮಗೆ ಪೂರ್ಣಶುಭವಿಲ್ಲದಿದ್ದರೂ ಉದ್ಯೋಗದಲ್ಲಿ ತೃಪ್ತಿ ಇರುವುದು. ಮನಸ್ಸಿನಲ್ಲಿ ನಾನಾ ತೊಳಲಾಟ ಇರಲಿದ್ದು, ಪ್ರಯತ್ನಪೂರ್ವಕವಾಗಿ ಬಿಡಬೇಕು. ಶುಭಕಾರ್ಯಗಳಿಗೆ ಸಮಯವನ್ನು ಕೊಡುವಿರಿ. ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ಹೊಸ ಕಾರ್ಯವನ್ನು ಮಾಡಲು ಯೋಜನೆಯನ್ನು ರೂಪಿಸಲಿದ್ದೀರಿ. ಆಹಾರದ ಅಭಾವವು ನಿಮಗೆ ಆಗಲಿದೆ. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟ. ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಭತ್ಯೆಯು ಸಿಗಬಹುದಾಗಿದೆ. ಯಾರಾದರೂ ಚುಚ್ಚಿ ಮಾತನಾಡಬಹುದು. ಅದನ್ನು ಮನಸ್ಸಿಗೆ ತೆಗದುಕೊಳ್ಳುವಿರಿ. ವಿಷ್ಣುಸಹಸ್ರನಾಮವನ್ನು ಪಠಿಸಿ.

ಕರ್ಕಾಟಕ ರಾಶಿ:
ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ಗುರು ಬಲ ಹಾಗೂ ಶುಕ್ರನ ದೃಷ್ಟಿ ಇರಲಿದ್ದು ಶೋಕಿಯನ್ನು ಹೆಚ್ಚು ಇಷ್ಟಪಡುವಿರಿ. ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಳ್ಳಿ. ಹೊಸ ಅಭ್ಯಾಸವನ್ನು ಕಲಿಯಲು ಪ್ರಯತ್ನಪಡುವಿರಿ. ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಆಸಕ್ತಿ ಇದೆ. ಮಕ್ಕಳಿಂದ ನಿಮಗೆ ಸಂತೋಷಕರವಾದ ವಾರ್ತೆಯು ಸಿಗಲಿದೆ. ಉದ್ಯೋಗವನ್ನು ಬಿಡುವ ಮನಸ್ಸು ಮಾಡುವಿರಿ. ಯಾವುದಾದರೂ ಸುಂದರ ಪ್ರದೇಶಕ್ಕೆ ಹೋಗುವ ಸಾಧ್ಯತೆ. ನಿರಂತರ ಶ್ರಮದ ಫಲವನ್ನು ನೀವಿಂದು ಪಡೆಯುವಿರಿ. ಬುಧನು ನವಮದಲ್ಲಿ ನೀಚನಾಗಿದ್ದು ಬಂಧುಗಳ ವಿಚಾರದಲ್ಲಿ ಅಸಮಾಧಾನ. ಆಲಸ್ಯವನ್ನು ಬಿಟ್ಟು ಮುನ್ನಡೆಯುವ ತೀರ್ಮಾನವನ್ನು ಮಾಡಲಿದ್ದೀರಿ. ಕೃಷಿಯನ್ನು ಇಷ್ಟಪಟ್ಟು ಮಾಡಲಿದ್ದೀರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ಕುಲದೇವರ ಪ್ರಸಾದವನ್ನು ಪಡೆಯುವಿರಿ.

ಸಿಂಹ ರಾಶಿ:
ಈ ರಾಶಿಯವರಿಗೆ ಮಾರ್ಚ್ ನ ಮೊದಲ ವಾರದಲ್ಲಿ ಅಶುಭ. ದ್ವಿತೀಯಾಧಿಪತಿ ಅಷ್ಟಮದಲ್ಲಿ ಇದ್ದು, ಮಾತಿನಲ್ಲಿ ಸಿಕ್ಕಿಬೀಳುವಿರಿ ಅಥವಾ ಮಾತಿನಿಂದ ನಿಮ್ಮ ಭಾವವನ್ನು ಹೇಳಲಾಗದು. ಅಪರೂಪದ ಬಂಧುಗಳ ಆಗಮನವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ತನಗೆ ಬೇಕಾದುದನ್ನು ಬೇಟೆಯಾಡಲೇ ಬೇಕು. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಕೆಲಸವನ್ನು ಮುಂದೂಡುವುದು ಒಳ್ಳೆಯದು. ಉದ್ಯಮವನ್ನು ಬಿಡುವಂತೆ ಆಗುವುದು. ಮನೆಯಿಂದ ದೂರವಿರುವವರಿಗೆ ಮನೆಗೆ ಬರುವರು. ಸದಾಚಾರವನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಲಕ್ಷ್ಮೀನೃಹಿಂಹನನ್ನು ಶರಣು ಹೊಂದಿ.

ಕನ್ಯಾ ರಾಶಿ:
ರಾಶಿ ಚಕ್ರದ ಆರನೇ ರಾಶಿಯಾಗಿದ್ದು ನಿಮಗೆ ಅಧಿಕ ಶುಭವಿದೆ. ಗುರು ಬಲ, ದೃಷ್ಟಿ ಹಾಗೂ ಶುಕ್ರನ ದೃಷ್ಟಿ ಇರುವ ಕಾರಣ, ಎಂತಹ ನಕಾರತ್ಮಕ ವಿಚಾರವೂ ಸುಳಿಯದು. ಇರುವಕುಟುಂಬದ ಜೊತೆ ದೇವಾಲಯ ಹಾಗೂ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ಆಯ್ಕೆ ಮಾಡಿಕೊಳ್ಳುವುದು ಕಷ್ಟವಾದೀತು. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ಶ್ರಮದ ಕೆಲಸವು ಆಯಾಸವನ್ನು ತರಲಿದೆ‌. ಅತಿಯಾದ ಆಲಸ್ಯದಿಂದ ನಿದ್ರಿಸುವ ಮನಸ್ಸಿನಲ್ಲಿ ಇರುವಿರಿ. ರಾಶಿಯ ಅಧಿಪತಿ ದುರ್ಬಲನಾದ ಕಾರಣ ಭಯದ ವಾತಾವರಣ ನಿಮ್ಮಲ್ಲಿ ಇರಲಿದೆ. ಯಾರೂ ನನಗೆ ಸಹಾಯಕ್ಕೆ ಬರಲಾರರು ಎಂಬ ಅನಾಥ ಪ್ರಜ್ಞೆ ಇರುವುದು. ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ನಿಮ್ಮ ವಾಹನದ ದುರಸ್ತಿಯನ್ನು ಇಂದು ಮಾಡಲಿದ್ದೀರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು.

ತುಲಾ ರಾಶಿ:
ಈ ವಾರದಲ್ಲಿ ನಿಮಗೆ ಅಶುಭ. ಗುರು ಹಾಗು ಬುಧರು ದುರ್ಬಲರಾಗಿ ಅಶುಭಸ್ಥಾನದಲ್ಲಿ ಇದ್ದಾರೆ. ಎಲ್ಲ ಕಡೆಯಿಂದ ದುರ್ದೈವವೇ ಮುತ್ತಿದಂತೆ ಅನ್ನಿಸುವುದು. ವಿದ್ಯಾರ್ಥಿಗೆಳಿಗೆ ಗೊಂದಲದ ವಾತಾವರಣ ಇರಲಿದೆ. ಕಳ್ಳತನದ ಅಪವಾದವು ಬಂದು ದುಃಖಿಸುವಿರಿ. ನಿಮ್ಮ ಮೇಲಧಿಕಾರಿಗಳನ್ನು ಚೆನ್ನಾಗಿ ಇರಿಸಿಕೊಳ್ಳಿ. ಅನಿರೀಕ್ಷಿತ ಧನಲಾಭವನ್ನು ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಟ್ಟುಬಿಡಿ. ಶುಕ್ರನು ಷಷ್ಠದಲ್ಲಿ ಇರುವ ಕಾರಣ ಆಂತರಿಕ ಕಲಹವು ಜಗಜ್ಜಾಹಿರವು ಆಗಬಹುದು. ನಿಮ್ಮ ವಾಸಸ್ಥಾನವು ಮನೆಯಿಂದ ದೂರವಾಗಬಹುದು. ನಿಮ್ಮ ಬೆಳವಣಿಗೆಯನ್ನು ಕಂಡು ಮನೆಯಲ್ಲಿ ಸಂತಸಗೊಳ್ಳಬಹುದು. ಆರೋಗ್ಯದ ಕಾಳಜಿ ಮುಖ್ಯವಾದ ಕಾರಣ ಧನ್ವಂತರಿಯ ಸ್ತೋತ್ರ ಮಾಡಿ.

ವೃಶ್ಚಿಕ ರಾಶಿ:
ಮಾರ್ಚ್ ತಿಂಗಳ ಮೊದಲ ವಾರದಲ್ಲಿ ನಿಮಗೆ ಹೆಚ್ಚು ಶುಭ. ಗುರುವುದು ಸಪ್ತಮದಲ್ಲಿಯೂ ಶುಕ್ರನು ಪಂಚಮದಲ್ಲಿಯೂ ತ್ರಿಕೋಣದಲ್ಲಿ ಇರುವ ಕಾರಣ ಬಯಸಿದ್ದನ್ನು ಪಡೆಯಬಹುದು. ನ್ಯಾಯಾಲಯದ ಮೆಟ್ಟಿಲೇರಿದ ದೂರು ತೀರ್ಮಾನವಾಗಲು ವಿಳಂಬವಾಗಬಹುದು. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ. ನಿಮ್ಮ ಮಾತಿನಿಂದ ಮನೆಯವರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಲಿದೆ‌. ವಿವಾಹಕ್ಕೆ ನಿಶ್ಚಯಿಸಿದರೆ ಕಾಲವೂ ಕೂಡಿಬರಲಿದೆ. ನಿಮಗೆ ಅನುಕೂಲಕರ ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ಅಲ್ಪಲಾಭವು ಆಗಲಿದೆ. ಮನೆಯನ್ನು ಬದಲಾಯಿಸುವಿರಿ. ಮಿತ್ರರಿಂದ ವಂಚನೆಯಾಗಬಹುದು. ಮಾನಸಿಕ ಧೈರ್ಯಕ್ಕೆ ದೇವಸೇನಾನಾಯಕ ಕಾರ್ತಿಕೇಯನನ್ನು ಸ್ಮರಿಸಿ.

ಧನು ರಾಶಿ:
ಈ ವಾರ ನಿಮಗೆ ಅಶುಭ. ತಾಯಿಯಿಂದ ಸಿಗಬೇಕಾದ ಸಂಪತ್ತು ತಪ್ಪಿಹೋಗುವುದು. ಹೊಸ ಉದ್ಯೋಗಕ್ಕೆ ಸಂಬಂಧಿಸಿದಂತೆ ಗೊಂದಲಗಳು ಏಳಬಹುದು. ಸಾಹಿತಿಗಳೋ ಕವಿಗಳೋ ಆಗಿದ್ದರೆ ನಿಮಗಿಂದು ಗೌರವ, ಸಮ್ಮಾನಗಳು ಸಿಗಲಿವೆ. ಮೇಲಿನಿಂದ ಬಿದ್ದು ಪೆಟ್ಟು‌ಮಾಡಿಕೊಳ್ಳುವಿರಿ. ನಿಮಗೆ ಇಷ್ಟವಾದ ವ್ಯಕ್ತಿತ್ವವನ್ನು ಪ್ರೀತಿಸಲು ಆರಂಭಿಸುವಿರಿ. ಅವಸರದಲ್ಲಿ ಅನಾಹುತವಾದೀತು. ಉದ್ಯಮಾಧಿಪತಿ ನೀಚರಾಶಿಯಲ್ಲಿ ಇದ್ದು ಔದ್ಯೋಗಿಕ ವಿಚಾರದಲ್ಲಿ ವಿಷಾದವಿರಲಿದೆ. ಅಧಿಕ ಖರ್ಚಾಗುವುದನ್ನು ನಿಲ್ಲಿಸಲಿದ್ದೀರಿ. ಧಾರ್ಮಿಕ‌ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ಕಂಡು ಕೆಲವರು ಸಲಹೆಗಳನ್ನು ಕೊಡಲು ಬರಬಹುದು. ದೈವೀಸಂಪತ್ತಿಗೆ ಆಸೆಪಡಲಿದ್ದೀರಿ, ಜಾಗರೂಕರಾಗಿರಿ. ಯಾವುದೇ ಪ್ರತ್ಯುತ್ತರಗಳನ್ನು ಕೊಡಲು ಹೋಗಬೇಡಿ. ಲಕ್ಷ್ಮೀನಾರಾಯಣ ಹೃದಯವನ್ನು ಪಠಿಸಿ.

ಮಕರ ರಾಶಿ:
ಈ ವಾರ ನಿಮಗೆ ಶುಭಾಶುಭ ಫಲ. ತೃತೀಯದಲ್ಲಿ ಶುಕ್ರನು ಉಚ್ಚನಾಗಿದ್ದು ಸ್ತ್ರೀಯರಿಂದ ತೊಂದರೆ. ಮಹಿಳಾ ಉದ್ಯೋಗಿಯಾಗಿದ್ದರೆ ನೀವು, ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಬದಲಾವಣೆಯನ್ನು ಇಷ್ಟಪಡುತ್ತೀರಿ. ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ‌ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಬುಧನೂ ನೀಚನಾಗಿ ತೃತೀಯದಲ್ಲಿ ಇದ್ದು ಸಹೋದರರ ನಡುವೆ ಕಲಹ, ಒತ್ತಡ. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಇದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ನೆಮ್ಮದಿಯನ್ನು ಪಡೆಯಲು ಕಷ್ಟಪಡುವಿರಿ. ಎಂದೋ‌ ಮಾಡಿದ್ದು ನಿಮ್ಮ ಆಪತ್ತಿಗೆ ಬರಲಿದೆ. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಮುಂದೆ ಅದೇ ದೊಡ್ಡ ಕಂಟಕವಾದೀತು. ಶನಿಯ ಸ್ತೋತ್ರ ಮಾಡಿ.

ಕುಂಭ ರಾಶಿ:
ಈ ರಾಶಿಯವರಿಗೆ ಈ ವಾರದಲ್ಲಿ ಮಧ್ಯಮಫಲ. ದ್ವಿತೀಯದಲ್ಲಿ ಶುಕ್ರನು ಭೋಗವಸ್ತುಗಳಿಂದ ಸುಖ ಕೊಡಿಸುವನು. ಕುಂಟುತ್ತ ಸಾಗುತ್ತಿದ್ದ ಸರ್ಕಾರಿ ಕೆಲಸದಲ್ಲಿ ವೇಗವಿರಲಿದೆ. ಬುಧನು ದ್ವಿತೀಯದಲ್ಲಿ ಬುದ್ಧಿಯು ಸೂಚಿಸದಂತೆ ಮಾಡುವನು. ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಮಾತಿಗೆ ಬೆಲೆಯು ಕಡಿಮೆಯಾದೀತು. ಬಲವಂತವಾಗಿ ಯಾರನ್ನೂ ನಿಮ್ಮವರನ್ನಾಗಿ ಮಾಡಿಕೊಳಗಳಬೇಡಿ. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಸಾಡೆ ಸಾಥ್ ಶನಿಯಿಂದ ಬಿಡುಗಡೆ ಹೊಂದಿತ್ತಿದ್ದು ಹನುಮಾನ್ ಚಾಲೀಸ್ ಪಠಿಸಿ.

ಮೀನ ರಾಶಿ:
ಈ ವಾರ ನಿಮಗೆ ಮಿಶ್ರಫಲ. ಶುಕ್ರ ಹಾಗು ಬುಧರು ಒಟ್ಟಿಗೆ ಇದ್ದು ಒಬ್ಬರು ಉಚ್ಚ, ಮತ್ತೊಬ್ಬರು ನೀಚ. ಹಾಗಾಗಿ ನಿಮ್ಮ ಪರೀಕ್ಷೆಯ ಕಾಲ. ಅದಕ್ಕೆ ಯೋಗ್ಯವಾದ ಉತ್ತರವನ್ನು ಕೊಡುವ ಭರದಲ್ಲಿ ಅವಘಡಗಳು ಆಗಬಹುದು. ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳಿವೆ. ಸಹಾಯಕ್ಕೆ ಯಾರನ್ನಾದರೂ ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ಶುಕ್ರದಶೆಯವರಿಗೆ ಇದ್ದವರು ಭೋಗವಸ್ತುಗಳಲ್ಲಿ ನಿರತರೂ ಸಂಗಾತಿಯ ಜೊತೆ ಕಾಲವನ್ನು ಕಳೆದರೂ ತಂದೆ-ತಾಯಿಯರ ಜೊತೆಗೂ ಕೆಲವು ಕಾಲ ಕಳೆಯಿರಿ. ಅವರ ನೋವು ಮತ್ತು ನಲಿವಿನಲ್ಲೂ ಭಾಗಿಯಾಗಿ. ಅಚ್ಚರಿಯ ಸುದ್ದಿಗಳು ನಿಮಗಾಗಿ ಇರಲಿವೆ. ತಂದೆಯ ಕಾರಣಕ್ಕಾಗಿ ಧನವನ್ನು ವ್ಯಯಿಸುವಿರಿ. ಮೃತ್ಯುಂಜಯನನ್ನು ಜಪಿಸಿ.

Leave a Comment

Your email address will not be published. Required fields are marked *