March 2025

ನಾಳೆ ಎ.1ರಿಂದ ದುಬಾರಿ ದುನಿಯಾ| ಹಲವು ಅಗತ್ಯ ವಸ್ತುಗಳು ಕಾಸ್ಟ್ಲಿ

ಸಮಗ್ರ ನ್ಯೂಸ್: ಈಗಾಗಲೇ ಬೆಲೆ ಏರಿಕೆಯಿಂದ ಜನರು ತಮಗೆ ಅಗತ್ಯವಿರುವ ದಿನನಿತ್ಯದ ವಸ್ತುಗಳನ್ನು ಖರೀದಿಸಿ ಜೀವನ ಮಾಡಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ದೇಶಾದ್ಯಂತ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿರುವುದು ಜನರಿಗೆ ಒಂದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಯಾಕೆಂದರೆ ನಾಳೆಯಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರ, ವಿದ್ಯುತ್ ದರ, ಜೊತೆಗೆ ದೇಶದಲ್ಲಿ ಹೊಸ ಟೋಲ್ ದರಗಳು ಜಾರಿಗೆ ಬರಲಿವೆ. ಹಾಲಿನ ದರ 4 ರೂಪಾಯಿ, ಮೊಸರು ದರ 4 ರೂಪಾಯಿ, ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 […]

ನಾಳೆ ಎ.1ರಿಂದ ದುಬಾರಿ ದುನಿಯಾ| ಹಲವು ಅಗತ್ಯ ವಸ್ತುಗಳು ಕಾಸ್ಟ್ಲಿ Read More »

ಸೌದಿಯ ಮರುಭೂಮಿಯಲ್ಲಿ ರಾರಾಜಿಸುತ್ತಿರುವ ಕರ್ನಾಟಕ ಕರಾವಳಿಯ ಬೆದ್ರ!!

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಪ್ರಮುಖ ಪಟ್ಟಣ ಮೂಡುಬಿದಿರೆ ಶಿಕ್ಷಣ ಸಂಸ್ಥೆಗಳಿಗೆ ಫೇಮಸ್. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿ ಎಂಬುದಷ್ಟೇ ನಮಗೆ ಗೊತ್ತು. ಆದರೆ ಮರುಭೂಮಿ ದೇಶಗಳಲ್ಲೂ ಇದರ ಹೆಸರು ರಾರಾಜಿಸುತ್ತಿರುವುದು ಗೊತ್ತಾ? ತುಳುವಿನಲ್ಲಿ ಮಂಗಳೂರಿಗೆ ಕುಡ್ಲ, ಮೂಡುಬಿದಿರೆಗೆ ಬೆದ್ರ, ಕಾರ್ಕಳಕ್ಕೆ ಕಾರ್ಲ, ಉಪ್ಪಿನಂಗಡಿಗೆ ಉಬಾರ್ ಹೀಗೆ ಸ್ಥಳೀಯ ಸೊಗಡಿನ ಹೆಸರುಗಳಿವೆ. ಊರವರು ಎಲ್ಲಿ ಹೋದರೂ ತಮ್ಮತನವನ್ನು ಬಿಡುವುದಿಲ್ಲ ಎಂಬುದಕ್ಕೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ ನೋಡಿದರೆ ಗೊತ್ತಾಗುತ್ತದೆ. ಕನ್ನಡ ಲಿಪಿಯಲ್ಲಿ ಬೆದ್ರ ಎಂದು ಬರೆಯಲಾಗಿರುವ ಈ

ಸೌದಿಯ ಮರುಭೂಮಿಯಲ್ಲಿ ರಾರಾಜಿಸುತ್ತಿರುವ ಕರ್ನಾಟಕ ಕರಾವಳಿಯ ಬೆದ್ರ!! Read More »

ಬೆಳ್ತಂಗಡಿ: ಬೈಕ್ ಅಪಘಾತಕ್ಕೆ ಯಕ್ಷಗಾನ ಭಾಗವತ ಬಲಿ

ಸಮಗ್ರ ನ್ಯೂಸ್: ಎರಡು ಬೈಕ್ ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯ ಕಿಲಾರ ಮಾರಿಕಾಂಭ ದೇವಸ್ಥಾನದ ತಿರುವಿನಲ್ಲಿ ನಡೆದಿದೆ. ಅಂಡಿಂಜೆ ಗ್ರಾಮದ ಪಿಯೂಲಿರು ಮನೆ ನಿವಾಸಿ ಮಂಗಳಾದೇವಿ ಯಕ್ಷಗಾನ ಮೇಳದ ಯಕ್ಷಗಾನ ಭಾಗವತರಾದ ಸತೀಶ್ ಆಚಾರ್ಯ ಅಂಡಿಂಜೆ (40) ಸಾವನಪ್ಪಿದವರು. ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ 4 ಗಂಟೆಗೆ ಸತೀಶ್ ಆಚಾರ್ಯ ಅವರು ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿರುವ

ಬೆಳ್ತಂಗಡಿ: ಬೈಕ್ ಅಪಘಾತಕ್ಕೆ ಯಕ್ಷಗಾನ ಭಾಗವತ ಬಲಿ Read More »

ಹವಾಮಾನ ವರದಿ| ಎ.2 ರಿಂದ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಏಪ್ರಿಲ್ ​2ರಿಂದ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ವಿಜಯನಗರ, ಶಿವಮೊಗ್ಗ,ತುಮಕೂರು, ಮಂಡ್ಯ, ಕೋಲಾರ,ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್​ನಲ್ಲಿ ಸಾಧಾರಣ ಮಳೆಯಾಗಲಿದೆ. ಈ ಬಾರಿ

ಹವಾಮಾನ ವರದಿ| ಎ.2 ರಿಂದ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ Read More »

ಹಿಮಾಚಲ ಪ್ರದೇಶದ ಕುಲ್ಲುನಲ್ಲಿ ಭೂಕುಸಿತ| 6 ಮಂದಿ ಸಾವು

ಸಮಗ್ರ ನ್ಯೂಸ್: ಹಿಮಾಚಲ ಪ್ರದೇಶದ ಕುಲ್ಲುವಿನ ಗುರುದ್ವಾರ ಮಣಿಕರಣ್ ಸಾಹಿಬ್ ಎದುರಿನ ಪಿಡಬ್ಲ್ಯೂಡಿ ರಸ್ತೆಯ ಬಳಿ ಭಾನುವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ಆರು ಜನ ಸಾವನ್ನಪ್ಪಿದ್ದು, ಈ ಪೈಕಿ ಮೂವರು ಮಹಿಳೆಯರು ಇದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ರಸ್ತೆಯ ಅಂಚಿನಲ್ಲಿ ಕುಳಿತಿದ್ದ ಜನರು ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ನಲುಗಿ ಸಾವನ್ನಪ್ಪಿದರು.ಗಾಯಾಳುಗಳನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಜಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ರಸ್ತೆಬದಿಯ ವ್ಯಾಪಾರಿ, ಕಾರು ಸವಾರ ಮತ್ತು

ಹಿಮಾಚಲ ಪ್ರದೇಶದ ಕುಲ್ಲುನಲ್ಲಿ ಭೂಕುಸಿತ| 6 ಮಂದಿ ಸಾವು Read More »

ಕರಾವಳಿಯಾದ್ಯಂತ ಮಾ.31ರ ನಾಳೆ ಈದ್ ಉಲ್‌ ಫಿತರ್ ಆಚರಣೆ

ಸಮಗ್ರ ನ್ಯೂಸ್: ಶವ್ವಾಲ್ ಚಂದ್ರ ದರ್ಶನವಾದ ಹಿನ್ನೆಲೆ ಕರ್ನಾಟಕದ ಕರಾವಳಿಯಲ್ಲಿ ನಾಳೆ (ಮಾ.31) ರಂದು ಈದ್ ಉಲ್ ಫಿತರ್ ಆಚರಣೆ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಸೋಮವಾರ ಈದ್ ಉಲ್ ಫಿತರ್ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಸೋಮವಾರ ಹಬ್ಬ ಆಚರಣೆ ಮಾಡಲು ಸೂಚಿಸಲಾಗಿದೆ.ನಾಳೆ ಈದ್ಗಾ, ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಹಬ್ಬದ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಕರಾವಳಿಯಾದ್ಯಂತ ಮಾ.31ರ ನಾಳೆ ಈದ್ ಉಲ್‌ ಫಿತರ್ ಆಚರಣೆ Read More »

ದ್ವಾದಶ‌ ರಾಶಿಗಳ ವರ್ಷ ಭವಿಷ್ಯ| ಹೊಸ ಸಂವತ್ಸರದಲ್ಲಿ ರಾಶಿಗಳ ಗೋಚಾರಫಲವೇನು?

ಸಮಗ್ರ ನ್ಯೂಸ್: ಪಂಚಾಂಗದ ಪ್ರಕಾರ ಮಾ. 30ರಿಂದ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಹಾಗಾದರೆ ನೂತನ ವಿಶ್ವಾವಸು ಸಂವತ್ಸರದಲ್ಲಿ ಯಾವ ರಾಶಿಗಳ ಗೋಚಾರ ಫಲ ಏನು? ಯಾರಿಗೆ ಲಾಭ? ತಿಳಿಯೋಣ… ಮೇಷ ರಾಶಿ:ಸಾಡೇಸಾತ್ ಶನಿ ಆರಂಭವಾಗುತ್ತದೆ. ಖರ್ಚಿನ ಪ್ರಮಾಣ ಜಾಸ್ತಿಯಾಗುತ್ತದೆ.

ದ್ವಾದಶ‌ ರಾಶಿಗಳ ವರ್ಷ ಭವಿಷ್ಯ| ಹೊಸ ಸಂವತ್ಸರದಲ್ಲಿ ರಾಶಿಗಳ ಗೋಚಾರಫಲವೇನು? Read More »

ಮಂಗಳೂರು: 9ಲಕ್ಷ ಮೌಲ್ಯದ ಮಾದಕವಸ್ತು ವಶ; ಇಬ್ಬರ ಬಂಧನ

ಸಮಗ್ರ ನ್ಯೂಸ್: ಹೈಡ್ರೊವೀಡ್ ಗಾಂಜಾ, ಚರಸ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಅವರ ಬಳಿ ಇದ್ದ ₹9 ಲಕ್ಷ ಮೌಲ್ಯದ ಮಾದಕ ವಸ್ತು ಮತ್ತು ಇತರ ಸಾಮಗ್ರಿ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಸುಭಾಷ್‌ ನಗರದ ತೈಝೀರ್ ಇಸ್ಮಾಯಿಲ್ ಹುಸೇನ್ (23), ಶಿವಬಾಗ್ ನಿವಾಸಿ ರೋಯ್‌ಸ್ಟನ್ ಕ್ಸೇವಿಯರ್ ಲೋಬೊ (22) ಬಂಧಿತರು. ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತು ಖರೀದಿಸಿ ತಂದು ಮಂಗಳೂರಿನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ

ಮಂಗಳೂರು: 9ಲಕ್ಷ ಮೌಲ್ಯದ ಮಾದಕವಸ್ತು ವಶ; ಇಬ್ಬರ ಬಂಧನ Read More »

ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಗೆ ರೌಡಿ ಶೀಟರ್ ಹೆಸರು ಶಿಫಾರಸು!!? ರಾಜ್ಯದ ನಂ 1 ದೇವಸ್ಥಾನದಲ್ಲಿ ಇದೆಂಥಾ ವಿವಾದ?

ಸಮಗ್ರ ನ್ಯೂಸ್: ದಕ್ಷಿಣ ಭಾರತದ ನಾಗಾರಾಧನೆಯ ಪುಣ್ಯ ಕ್ಷೇತ್ರ, ರಾಜ್ಯದ ಶ್ರೀಮಂತ ದೇವಾಲಯದಲ್ಲಿ ಒಂದಾದ ಪ್ರಸಿದ್ದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಕಳೆದೆರಡು ತಿಂಗಳಿಂದ ಭಾರೀ ರಾಜಕೀಯ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ. ರೌಡಿಶೀಟರ್‌ಗೆ ಸ್ಥಾನ ಕಲ್ಪಿಸಿಕೊಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆಂಬ ಆರೋಪದ ಬೆನ್ನಲ್ಲೇ ದೇಗುಲಕ್ಕೆ ಪ್ರಮುಖವಾಗಿರುವ ಮಲೆಕುಡಿಯ ಜನಾಂಗವನ್ನು ನಿರ್ಲಕ್ಷಿಸಿರುವ ಆರೋಪ ಕೂಡ ಇದೆ. ದಕ್ಷಿಣ ಕನ್ನಡ ಜಿಲ್ಲೆಯ

ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಗೆ ರೌಡಿ ಶೀಟರ್ ಹೆಸರು ಶಿಫಾರಸು!!? ರಾಜ್ಯದ ನಂ 1 ದೇವಸ್ಥಾನದಲ್ಲಿ ಇದೆಂಥಾ ವಿವಾದ? Read More »

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಮಯನ್ಮಾರ್, ಥೈಲ್ಯಾಂಡ್| ಶತಕ‌ ದಾಟಿದ ಸಾವಿನ ಸಂಖ್ಯೆ| ಮುಂದುವರಿದ ಮರಣ ಮೃದಂಗ

ಸಮಗ್ರ ನ್ಯೂಸ್: ಥೈಲ್ಯಾಂಡ್ ಭೂಕಂಪಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗ 144ಕ್ಕೆ ಏರಿದೆ. ಮ್ಯಾನ್ಮಾರ್‌, ಥೈಲ್ಯಾಂಡ್‌ನಲ್ಲಿ ಸಾವಿನ ಸುದ್ದಿಗಳು ಏರಿಕೆಯಾಗುತ್ತಿದ್ದು, ಮತ್ತು 700 ಕ್ಕೂ ಹೆಚ್ಚು ಮಂದಿ ಗಾಯಗೊಂಡ ವರದಿಯಾಗಿವೆ. ಸಾವಿನ ಸಂಖ್ಯೆ 1000ಗಡಿ ದಾಟುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮ್ಯಾನ್ಮಾರ್‌ನಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಸತತ ಭೂಕಂಪಗಳು ಸಂಭವಿಸಿವೆ. ಭೂಕಂಪದ ಕೇಂದ್ರಬಿಂದುವು ಮೋನಿವಾ ನಗರದಿಂದ ಸುಮಾರು 50 ಕಿಲೋಮೀಟರ್ ಪೂರ್ವಕ್ಕೆ ಮಧ್ಯ ಮ್ಯಾನ್ಮಾರ್‌ನಲ್ಲಿದೆ ಎಂದು

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಮಯನ್ಮಾರ್, ಥೈಲ್ಯಾಂಡ್| ಶತಕ‌ ದಾಟಿದ ಸಾವಿನ ಸಂಖ್ಯೆ| ಮುಂದುವರಿದ ಮರಣ ಮೃದಂಗ Read More »