ಪುತ್ತೂರು: ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ಸರ್ಜಿಕಲ್ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ ವೈದ್ಯ| ಖಾಸಗಿ ಆಸ್ಪತ್ರೆ ವಿರುದ್ದ ಕುಟುಂಬಸ್ಥರಿಂದ ದೂರು
ಸಮಗ್ರ ನ್ಯೂಸ್: ಹೆರಿಗೆ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ಮಾಡಿದ ಎಡವಟ್ಟಿನಿಂದ ಬಾಣಂತಿಯೊಬ್ಬರು ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡುವಂತಾಗಿತ್ತು. ಕೊನೆಗೂ ಬಾಣಂತಿಯ ಅಸ್ವಸ್ಥತೆಗೆ ನಿಜ ಕಾರಣ ಬಯಲಾಗಿದ್ದು, ಖಾಸಗಿ ಆಸ್ಪತ್ರೆಯ ವಿರುದ್ಧ ಬಾಣಂತಿಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ಸಂಭವಿಸಿದೆ. ಘಟನೆಯ ವಿವರ:2024ರ ನವೆಂಬರ್ 27ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ, ಪುತ್ತೂರು […]