February 2025

SSLC, PUC ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ

ಸಮಗ್ರ ನ್ಯೂಸ್: ಇನ್ನೇನು SSLC ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಕೆಲವು ದಿನಗಳಷ್ಟೇ ಬಾಕಿ ಇದೆ. ಇದೇ ಸಮಯದಲ್ಲಿ ಉಚಿತ ಬಸ್ ಪ್ರಯಾಣವನ್ನು ಒದಗಿಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಘೋಷಿಸಿದೆ. ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, KSRTC ತನ್ನ ಬಸ್‌ಗಳಲ್ಲಿ (ನಗರ, ಉಪನಗರ, ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್) ತಮ್ಮ ನಿವಾಸದಿಂದ ಅವರಿಗೆ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲು ನಿರ್ಧರಿಸಿದೆ […]

SSLC, PUC ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ Read More »

24 ವರ್ಷಗಳಿಂದ ಮನೆ ಬಿಟ್ಟು ಹೋದವನು ಇದೀಗ ವಾಪಸ್: ಮಹಾ ಕುಂಭಮೇಳ ಸಾಕ್ಷಿ

ಸಮಗ್ರ ನ್ಯೂಸ್: 24 ವರ್ಷಗಳಿಂದ ಮನೆ ಬಿಟ್ಟು ಹೋಗಿದ್ದವ ಇದೀಗ ಮತ್ತೆ ವಾಪಸ್ ಮನೆಗೆ ಸೇರಿದ್ದಾನೆ. ಇದಕ್ಕೆಲ್ಲ ಕಾರಣ ಮಹಾ ಕುಂಭಮೇಳ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ರಮೇಶ ಚೌಧರಿ ಕಳೆದ 2001 ರಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು, ಇದೀಗ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಾದಲ್ಲಿ ಪತ್ತೆಯಾಗಿದ್ದಾರೆ. 24 ವರ್ಷಗಳಿಂದ ನಾಪತ್ತೆಯಾಗಿದ್ದ ರಮೇಶ ಚೌಧರಿ ಕುಂಭಮೇಳಕ್ಕೆ ತೆರಳಿದ್ದವರಿಗೆ ಕಾಶಿಯಲ್ಲಿ ಸಿಕ್ಕಿದ್ದಾರೆ. ಇನ್ನು ರಮೇಶನನ್ನು ತಮ್ಮ ವಾಹನದಲ್ಲಿ ವಾಪಸ್ ಬಳೂತಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ. ಸುಮಾರು

24 ವರ್ಷಗಳಿಂದ ಮನೆ ಬಿಟ್ಟು ಹೋದವನು ಇದೀಗ ವಾಪಸ್: ಮಹಾ ಕುಂಭಮೇಳ ಸಾಕ್ಷಿ Read More »

ಶಿವನೊಲಿಯೆ ಕೊರಡು ಕೊನರುವುದಯ್ಯಾ| ಶಿವನ ಉಗಮ ಹೇಗಾಯಿತು ಗೊತ್ತೇ?

ಸಮಗ್ರ ವಿಶೇಷ: ರಾತ್ರಿಗಳಲ್ಲಿ ಮಹಾನ್ ರಾತ್ರಿ ಶಿವರಾತ್ರಿಯಂತೆ. ಈ ರಾತ್ರಿಯಂದು ಶಿವನನ್ನು ಭಜಿಸಿ, ಆರಾಧಿಸಿ, ಮೈಮನಗಳಲ್ಲಿ ತುಂಬಿಕೊಂಡರೆ ಜನ್ಮ ಪಾವನವಾಗುವುದು ಎನ್ನುತ್ತದೆ ಶಾಸ್ತ್ರ. ಶಿವರಾತ್ರಿ ದಿನ ಜಾಗರಣೆ, ಉಪವಾಸ, ವ್ರತಾಧಿಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದೂ ಸಂಸ್ಕೃತಿಯಲ್ಲಿನ ನಂಬಿಕೆ. ಹಾಗಾದರೆ ಶಿವರಾತ್ರಿ ದಿನ ಶಿವನ ಕಲ್ಪನೆ ಅಥವಾ ಶಿವನ ಉಗಮ ಹೇಗಾಯಿತು‌ ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ… ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾಶಿವರಾತ್ರಿಯನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ಭೋಲೆನಾಥ, ಶಿವಶಂಭು,

ಶಿವನೊಲಿಯೆ ಕೊರಡು ಕೊನರುವುದಯ್ಯಾ| ಶಿವನ ಉಗಮ ಹೇಗಾಯಿತು ಗೊತ್ತೇ? Read More »

ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾರು ಅಪಘಾತ

ಸಮಗ್ರ ನ್ಯೂಸ್: ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರಿನ ಶಾಸಕರ ಭವನ ಬಳಿ ಈ ಘಟನೆ ಸಂಭವಿಸಿದೆ. ಶಾಸಕರ ಸರ್ಕಾರಿ ಕಾರಿಗೆ ಪೊಲೀಸ್ ವಾಹನವೇ ಬಂದು ಡಿಕ್ಕಿ ಹೊಡೆದಿದ್ದು ಪೊಲೀಸ್‌ ವಾಹನ ಗುದ್ದಿದ ರಭಸಕ್ಕೆ ಶಿವಲಿಂಗೇಗೌಡರ ಕಾರು ಜಖಂ ಆಗಿದೆ. ಶಿವಲಿಂಗೇಗೌಡರ ಕಾರು ಶಾಸಕರ ಭವನದ ಮುಂದೆ ನಿಂತಿತ್ತು. ಈ ಸಂದರ್ಭದಲ್ಲಿ ಮತ್ತೊಂದು ಬದಿಯಿಂದ ಬಂದ ಪೊಲೀಸ್‌ ಜೀಪ್‌ ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದೆ. ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಶಾಸಕರ

ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾರು ಅಪಘಾತ Read More »

ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿವೆ : ಡಾ. ಜಿ ಪರಮೇಶ್ವರ್

ಸಮಗ್ರ ನ್ಯೂಸ್: ಗ್ಯಾರಂಟಿ ಯೋಜನೆಗಳ ವಿಚಾರವಾಗಿ ನಾನಾ ವಿವಿಧಾತ್ಮಕ ಹೇಳಿಕೆಗಳು ಮುನ್ನೆಲೆಗೆ ಬರುತ್ತಲೆ ಇರುತ್ತದೆ. ಅದೇ ರೀತಿ ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ. ಹೌದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಹೊರೆಯಾಗುತ್ತಿರುವುದು ನಿಜ. ಆದರೆ, ಅದನ್ನು ನಾವು ಗೊತ್ತಿದ್ದೇ ಜಾರಿಗೆ ತಂದಿದ್ದೇವೆ. ಬಡವರಿಗಾಗಿ ಆಗುವ ಹೊರೆಯನ್ನು ನಾವು ಸಹಿಸಿಕೊಳ್ಳಬೇಕು ಅಷ್ಟೆ ಎಂದರು. ಮುಂದುವರೆದು ಮಾತನಾಡಿದ ಅವರು ಬಿಜೆಪಿಯವರ ಮೇಲೆ ಹರಿಹಾಯ್ದಿದ್ದಾರೆ.ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದು

ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿವೆ : ಡಾ. ಜಿ ಪರಮೇಶ್ವರ್ Read More »

ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಅಪಘಾತ : ಇಬ್ಬರು ಯಾತ್ರಿಕರ ಸಾವು

ಸಮಗ್ರ ನ್ಯೂಸ್: ಪ್ರಯಾಗ್ ರಾಜ್ ನಲ್ಲಿ ಕುಂಭ ಮೇಳ ನಡೆಯುತ್ತಿದ್ದು, ಅಲ್ಲಿಗೆ ತೆರಳುತ್ತಿದ್ದ ರಾಜ್ಯದ ಇಬ್ಬರು ಯಾತ್ರಿಗಳು ಗುಜರಾತ್​​ನ ಪೋರ್ ​ಬಂದರ್​​ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ನಿವಾಸಿಗಳಾದ ವಿಶ್ವನಾಥ ಅವಜಿ (55), ಮಲ್ಲಿಕಾರ್ಜುನ ಸದ್ದಲಗಿ (40) ಮೃತ ದುರ್ದೈವಿಗಳು. ವಾಹನದಲ್ಲಿ ಒಟ್ಟು 17 ಜನ ಪ್ರಯಾಗ್​ರಾಜ್​ಗೆ ತೆರಳುತ್ತಿದ್ದರು. ಯಾತ್ರಾರ್ಥಿಗಳಿದ್ದ ವಾಹನ ಮಾರ್ಗ ಮಧ್ಯೆ ನಿಂತಿದ್ದ ಟಿಪ್ಪರ್​​ಗೆ ಡಿಕ್ಕಿಯಾಗಿದೆ. ವಾಹನದಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಪೋರಬಂದರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ

ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಅಪಘಾತ : ಇಬ್ಬರು ಯಾತ್ರಿಕರ ಸಾವು Read More »

ನಾಳೆ ಪ್ರಯಾಗದಲ್ಲಿ‌ ಕೊನೆಯ ಮಹಾಕುಂಭ ಪುಣ್ಯಸ್ನಾನ| ಹರಿದು‌‌ ಬರುತ್ತಲಿದೆ‌‌ ಭಕ್ತಸಾಗರ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳವು ಅಂತಿಮ ಘಟ್ಟಕ್ಕೆ ತಲುಪಿದೆ. ಈಗಾಗಲೇ 60 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು, ನಾಳೆ ನಡೆಯುವ ಕೊನೆಯ ಪುಣ್ಯ ಸ್ನಾನದಲ್ಲಿ ಅತಿ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಜನವರಿ 13 ರಿಂದ ಆರಂಭವಾದ ಈ ಮಹಾ ಕುಂಭ ಮೇಳ ಪವಿತ್ರ ಸ್ನಾನ ಇದೇ ಫೆ.26 ಅಂದರೆ ನಾಳೆ ಮುಕ್ತಾಯವಾಗಲಿದೆ. ಕುಂಭ ಮೇಳದಲ್ಲಿ ಬರುವ ಪವಿತ್ರ ಸ್ನಾನಕ್ಕೂ ಶಾಹಿ ಸ್ನಾನಕ್ಕೂ

ನಾಳೆ ಪ್ರಯಾಗದಲ್ಲಿ‌ ಕೊನೆಯ ಮಹಾಕುಂಭ ಪುಣ್ಯಸ್ನಾನ| ಹರಿದು‌‌ ಬರುತ್ತಲಿದೆ‌‌ ಭಕ್ತಸಾಗರ Read More »

ಕಡಬ: ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ| ಐತ್ತೂರು ಗ್ರಾ.ಪಂ ಸದಸ್ಯ ಮನಮೋಹನ ಗೋಳ್ಯಾಡಿ‌ ಗಂಭೀರ

ಸಮಗ್ರ ನ್ಯೂಸ್: ಬೈಕ್‌ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ, ಐತೂರು ಗ್ರಾಮ ಪಂಚಾಯತ್ ಸದಸ್ಯ ಮನಮೋಹನ್ ಗೋಲ್ಯಾಡಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ಪೆರಿಯಶಾಂತಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ‌ ಸಮೀಪದ‌ ಕಲ್ಲಾಜೆ ‌ಎಂಬಲ್ಲಿ ಸಂಭವಿಸಿದೆ. ಅಪಘಾತದಲ್ಲಿ ತೀವ್ರತರವಾದ ಗಾಯಗಳಾಗಿದ್ದು, ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಡಬ: ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ| ಐತ್ತೂರು ಗ್ರಾ.ಪಂ ಸದಸ್ಯ ಮನಮೋಹನ ಗೋಳ್ಯಾಡಿ‌ ಗಂಭೀರ Read More »

ಬೆಳಗಾವಿ: ಕಂಡಕ್ಟರ್ ವಿರುದ್ಧ ದಾಖಲಾದ ಪೋಕ್ಸೋ ಕೇಸ್ ವಾಪಸ್ – ಸಂತ್ರಸ್ತ ಬಾಲಕಿ ತಾಯಿ ಸ್ಪಷ್ಟನೆ

ಸಮಗ್ರ ನ್ಯೂಸ್: ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮಹಾದೇವಪ್ಪ ಮೇಲೆ ನೀಡಿರುವ ಪೋಕ್ಸೋ (POCSO) ದೂರನ್ನು ವಾಪಸ್ ಹಿಂಪಡೆದಿದ್ದೇವೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಹೇಳಿಕೆ ನೀಡಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆಯ ತಾಯಿ, ನಾವು ಕೂಡ ಕನ್ನಡಿಗರೇ. ಈ ವಿಚಾರದಲ್ಲಿ ಕನ್ನಡ-ಮರಾಠಿಗರ ನಡುವೆ ಜಗಳ ಆಗುತ್ತಿದೆ. ನಿರ್ವಾಹಕ ಮಹಾದೇವಪ್ಪ ಅವರ ಮೇಲೆ ನೀಡಿದ್ದ ದೂರನ್ನು ಹಿಂಪಡೆದಿದ್ದೇವೆ ಎಂದರು. ನಮ್ಮ ಮಗ, ಮಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಬಸ್ನಲ್ಲಿ ಟಿಕೆಟ್ ವಿಚಾರವಾಗಿ

ಬೆಳಗಾವಿ: ಕಂಡಕ್ಟರ್ ವಿರುದ್ಧ ದಾಖಲಾದ ಪೋಕ್ಸೋ ಕೇಸ್ ವಾಪಸ್ – ಸಂತ್ರಸ್ತ ಬಾಲಕಿ ತಾಯಿ ಸ್ಪಷ್ಟನೆ Read More »

ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ:ಖಾಸಗಿ ವಾಹನಗಳ ಪ್ರವೇಶ ನಿಷೇಧ

ಸಮಗ್ರ ನ್ಯೂಸ್: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾಮಹೋತ್ಸವ ನಡೆಯುತ್ತದೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ತೆರಳುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಈ ಕಾರಣದಿಂದ ಫೆಬ್ರವರಿ 25 ರಿಂದ ಮಾರ್ಚ್ 1ರವರೆಗೆ ಐದು ದಿನಗಳ ಕಾಲ ಮಹದೇಶ್ವರಬೆಟ್ಟಕ್ಕೆ ದ್ವಿಚಕ್ರ, ಆಟೋ ರಿಕ್ಷಾ, ಗೂಡ್ಸ್ ವಾಹನ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ಕೌದಳ್ಳಿ ಬಳಿ ವಾಹನ ನಿಲುಗಡೆಗೆ

ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ:ಖಾಸಗಿ ವಾಹನಗಳ ಪ್ರವೇಶ ನಿಷೇಧ Read More »