February 2025

ಜಬ್ಬಾರ್ ಸಮೋಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

ಸಮಗ್ರ ನ್ಯೂಸ್: ಹಿರಿಯ ವಿದ್ವಾಂಸ ದಿ| ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಯಕ್ಷಗಾನ ಅರ್ಥಧಾರಿ ಮತ್ತು ವೇಷಧಾರಿ ಜಬ್ಬಾರ್‌ ಸಮೋ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25 ಸಾ.ರೂ. ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ. ಫೆ.22ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್‌ ಶೆಟ್ಟಿ ತಿಳಿಸಿದ್ದಾರೆ. ಜಬ್ಟಾರ್‌ 1963ರಲ್ಲಿ ಎಸ್‌. ಮೊದೀನ್‌ ಕುಂಞಿ ಹಾಗೂ ಬೀಫಾತಿಮ ಅವರ ಪುತ್ರನಾಗಿ ಸಂಪಾಜೆಯಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿ ಭಕ್ತ ಪ್ರಹ್ಲಾದ ಪ್ರಸಂಗದಲ್ಲಿ ಧನುಜ […]

ಜಬ್ಬಾರ್ ಸಮೋಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ Read More »

ಪುತ್ತೂರು: ಕಟ್ಟಡ ಧ್ವಂಸ ಆರೋಪ| ಶಾಸಕ ಅಶೋಕ್ ರೈ ವಿರುದ್ಧ ದೂರು

ಸಮಗ್ರ ನ್ಯೂಸ್: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಡೆತನದ ಜಮೀನಿನಲ್ಲಿ ಬಾಡಿಗೆಗಿದ್ದ ಕುಟುಂಬವೊಂದರ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಧ್ವಂಸಗೊಳಿಸಲಾಗಿದೆ ಎಂದು ಬಾಡಿಗೆದಾರರ ಪೈಕಿ ಓರ್ವರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ ಹಾಗೂ ಶಾಸಕ ಅಶೋಕ್‌ ಕುಮಾರ್‌ ರೈ ವಿರುದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಉಜಿರೆ ನಿವಾಸಿ ದಿ| ಜಯಶ್ರೀ ಹೊಳ್ಳ ಅವರ ಪುತ್ರ ವಿಜಯ ರಾಘವೇಂದ್ರ ದೂರು ನೀಡಿದವರು. ಇವರ ಅಜ್ಜ ವಿಷ್ಣಯ್ಯ ಹೊಳ್ಳ ಎಂಬವರಿಗೆ ದೇಗುಲದಿಂದ ಬಾಡಿಗೆಗೆ ನೀಡಿದ ಸ್ಥಳದಲ್ಲಿ

ಪುತ್ತೂರು: ಕಟ್ಟಡ ಧ್ವಂಸ ಆರೋಪ| ಶಾಸಕ ಅಶೋಕ್ ರೈ ವಿರುದ್ಧ ದೂರು Read More »

ಗೋಕಳ್ಳತನ ಮಾಡಿದರೆ ಶೂಟೌಟ್- ಮಂಕಾಳ ವೈದ್ಯ

ಸಮಗ್ರ ನ್ಯೂಸ್: ಉತ್ತರಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳತನ ಈ ಹಿಂದಿನಿಂದಲ್ಲೂ ನಡೆಯುತ್ತಾ ಬಂದಿದೆ. ಆದರೆ ಈಗ ನಾವು ಸುಮ್ಮನಿರಲು ಸಾಧ್ಯವಿಲ್ಲ. ಇನ್ನೇನಾದ್ರೂ ಈ ಪ್ರಕರಣ ಮುಂದುವರೆದರೆ ಗೋ ಕಳ್ಳರ ಮೇಲೆ ಶೂಟೌಟ್ ಮಾಡಲು ಪೊಲೀಸರಿಗೆ ಆದೇಶ ಮಾಡಬೇಕಾಗುತ್ತದೆ ಎನ್ನುವ ಮೂಲಕ ಗೋ ಕಳ್ಳರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ‌‌‌. ಜಿಲ್ಲೆಯಲ್ಲಿ ಗೋ ಕಳ್ಳತನ ಹೊಸದೆನು ಅಲ್ಲ. ಬಿಜೆಪಿ ಸರಕಾರದಲ್ಲೂ ಸಾಕಷ್ಟು ಗೋ ಕಳ್ಳತನ ಪ್ರಕರಣಗಳಾಗಿವೆ. ಆದರೆ ಅವರು ಸುಮ್ಮನಾಗಿದ್ದರು ಅಂತಾನಾವು ಸುಮ್ಮನಿರೋದಕ್ಕೆ ಆಗಲ್ಲ. ಎಂದಿದ್ದಾರೆ. ಅವರು ಜಿಲ್ಲಾಮಟ್ಟದ ಕೆಡಿಪಿ

ಗೋಕಳ್ಳತನ ಮಾಡಿದರೆ ಶೂಟೌಟ್- ಮಂಕಾಳ ವೈದ್ಯ Read More »

ಹರಿದ್ವಾರದಲ್ಲಿ ನಡೆಯಲಿರುವ 38ನೇ ರಾಷ್ಟ್ರೀಯ ಪುರುಷ ಕಬಡ್ಡಿ ಚಾಂಪಿಯನ್‌ಶಿಪ್ ಗೆ ಯೇನೆಕಲ್ಲಿನ ಮಿಥುನ್ ಗೌಡ ಆಯ್ಕೆ

ಸಮಗ್ರ ನ್ಯೂಸ್: 38ನೇ Beach national games 2025 ರಾಷ್ಟ್ರೀಯ ಪುರುಷ ಕಬಡ್ಡಿ ಚಾಂಪಿಯನ್‌ಶಿಪ್ ಪಂದ್ಯಾಟವು ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿದೆ. ಈ ಪಂದ್ಯಾಟದಲ್ಲಿ ಕರ್ನಾಟಕ ತಂಡದೊಂದಿಗೆ ಸುಳ್ಯ ತಾಲೂಕಿನ ಯೇನೆಕಲ್ಲಿನ ಮಿಥುನ್ ಗೌಡ ಆಯ್ಕೆ ಆಗಿರುತ್ತಾರೆ.

ಹರಿದ್ವಾರದಲ್ಲಿ ನಡೆಯಲಿರುವ 38ನೇ ರಾಷ್ಟ್ರೀಯ ಪುರುಷ ಕಬಡ್ಡಿ ಚಾಂಪಿಯನ್‌ಶಿಪ್ ಗೆ ಯೇನೆಕಲ್ಲಿನ ಮಿಥುನ್ ಗೌಡ ಆಯ್ಕೆ Read More »

ಜಾರಕಿಹೋಳಿ ಸಿಎಂ ಆಗಲೆಂದು ಪ್ರಯಾಗದಲ್ಲಿ ಹರಕೆ ಕಟ್ಟಿಕೊಂಡ ಅಭಿಮಾನಿಗಳು

ಸಮಗ್ರ ನ್ಯೂಸ್: ಸಚಿವ ಸತೀಶ್​ ಜಾರಕಿಹೋಳಿ ಮುಂದಿನ ಸಿಎಂ ಎಂದು ಸತೀಶ್​ ಅಭಿಮಾನಿಗಳು ಪ್ರಯಾಗ್​ ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಹರಕೆ ಕಟ್ಟಿಕೊಂಡಿದ್ದು, ಸತೀಶ್​ ಜಾರಕಿಹೋಳಿ ಸಿಎಂ ಆಗಬೇಕು ಎಂದು ಅಭಿಯಾನ ಮುಂದುವರಿದಿದೆ. ಕಳೆದ ತಿಂಗಳು ಸಿಗಂದೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸತೀಶ್ ಜಾರಕಿಹೋಳಿ ಅಭಿಮಾನಿಗಳು ಮುಂದಿನ ಸಿಎಂ ಸತೀಸ್​ ಜಾರಕಿಹೋಳಿ ಎಂಬ ಪೋಸ್ಟರ್​ ಹಿಡಿದು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಸತೀಶ್​ ಅಭಿಮಾನಿಗಳು ತಮ್ಮ ಅಭಿಯಾನವನ್ನು ಮುಂದುವರಿಸಿದ್ದು. ಪ್ರಯಾಗ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲೂ ತಮ್ಮ ಅಭಿಯಾನವನ್ನು ಮುಂದುವರಿಸಿದ್ದಾರೆ.

ಜಾರಕಿಹೋಳಿ ಸಿಎಂ ಆಗಲೆಂದು ಪ್ರಯಾಗದಲ್ಲಿ ಹರಕೆ ಕಟ್ಟಿಕೊಂಡ ಅಭಿಮಾನಿಗಳು Read More »

ಸುಳ್ಯ: ಆನ್ ಲೈನ್ ಜಾಬ್ ನೀಡುವುದಾಗಿ ಮೋಸ| ಲಕ್ಷಾಂತರ ರೂ. ವಂಚನೆ ಬಗ್ಗೆ ದೂರು

ಸಮಗ್ರ ನ್ಯೂಸ್ ಸುಳ್ಯ: ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹಣ ಪಡೆದು ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯದ ಜಾಲ್ಸೂರಿನ 25 ವರ್ಷ ಪ್ರಾಯದ ಮಹಿಳೆ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ಗೃಹಣಿಯಾಗಿದ್ದು, ಜ.19ರಂದು ಕೃಪಾದಿಶಾ ಎಂಬ ಟೆಲಿಗ್ರಾಂ ಖಾತೆಯಿಂದ ಆನ್‌ಲೈನ್ ಪಾರ್ಟ್ಟೈಮ್ ಜಾಬ್ ನೀಡುವುದಾಗಿ ಹೇಳಿ, ಈ ಬಗ್ಗೆ ವಿವಿಧ ವಿಚಾರಗಳನ್ನು ತಿಳಿಸಿ, ಅದರಂತೆ ಮುಂದುವರಿಯಲು

ಸುಳ್ಯ: ಆನ್ ಲೈನ್ ಜಾಬ್ ನೀಡುವುದಾಗಿ ಮೋಸ| ಲಕ್ಷಾಂತರ ರೂ. ವಂಚನೆ ಬಗ್ಗೆ ದೂರು Read More »

*ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿದ “ಅಲೆಮಾರಿ ಆರ್ಭಟ” ಮ್ಯೂಸಿಕ್ ಆಲ್ಬಮ್ ದಾವಣಗೆರೆಯಲ್ಲಿ ಬಿಡುಗಡೆ ಮತ್ತು ಸನ್ಮಾನ*

ಸುಳ್ಯದ ಸಾಹಿತಿ, ಜ್ಯೋತಿಷಿ, ಚಿತ್ರ ನಿರ್ದೇಶಕ ಮತ್ತು ಸಂಘಟಕರಾದ  ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸಾಹಿತ್ಯ ರಚಿಸಿ ಹಾಡಿರುವ “ಅಲೆಮಾರಿ ಆರ್ಭಟ” ಮ್ಯೂಸಿಕ್ ಆಲ್ಬಮ್ ನ್ನು ಇತ್ತೀಚಿಗೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜರುಗಿದ ರಾಜ್ಯಮಟ್ಟದ ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ -2025  ಮಹಾ ಸಮ್ಮೇಳನದಲ್ಲಿ ಚಿತ್ರದುರ್ಗ ಛಲವಾದಿ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಬಸವನಾಗಿದೇವ ಸ್ವಾಮೀಜಿಯವರು ಬಿಡುಗಡೆ ಮಾಡಿದರು.  ಜ್ಯೋತಿಷಿ ಮತ್ತು ಸಾಹಿತಿಯಾದ ಭೀಮರಾವ್ ವಾಷ್ಠರ್ ಅವರಗೆ

*ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿದ “ಅಲೆಮಾರಿ ಆರ್ಭಟ” ಮ್ಯೂಸಿಕ್ ಆಲ್ಬಮ್ ದಾವಣಗೆರೆಯಲ್ಲಿ ಬಿಡುಗಡೆ ಮತ್ತು ಸನ್ಮಾನ* Read More »

ಪುತ್ತೂರು: * ಪವರ್ ಟೆಕ್ ಸೋಲಾರ್ ಸಿಸ್ಟಮ್ಸ್ ಗೃಹೋಪಯೋಗಿ ವಸ್ತುಗಳ ಮೇಲೆ ಸುವರ್ಣಾಕಾಶ** ಮಾಸಿಕ 1000/- ರೂ. 24 ಕಂತುಗಳಂತೆ ಪಾವತಿಸಿ ಅದೃಷ್ಟದ ಆಯ್ಕೆ ನಿಮ್ಮದಾಗಿಸಿ**ಹೆಚ್ಚಿನ ಮಾಹಿತಿಗಾಗಿ 6363109847

ಪವರ್ ಟೆಕ್ ಸೋಲಾರ್ ಸಿಸ್ಟಮ್ಸ್ ಕಳೆದ 4ವರ್ಷಗಳಿಂದ ಉತ್ತಮ ಗುಣಮಟ್ಟದ ಸೋಲಾರ್ ಸಿಸ್ಟಮ್ಸ್, ಇನ್ವರ್ಟಸ್್ರ, ಬ್ಯಾಟರೀಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟದಿಂದ ಅತ್ಯಂತ ಜನಪ್ರಿಯವಾದ ಪಡೆದ ಸಂಸ್ಥೆ. ಈ ಸಂಸ್ಥೆಯು ಇದೀಗ ತಮ್ಮ ಗ್ರಾಹಕರಿಗೆ ಸುಲಭವಾಗಿ ಸೋಲರ್ ವಾಟರ್ ಹೀಟರ್ ಇನ್ವರ್ಟರ್ ಬ್ಯಾಟರೀಸ್,& ಗೃಹೋಪಯೋಗಿ ವಸ್ತುಗಳನ್ನು “ನಿಮ್ಮ ಆಯ್ಕೆ”ಯ ಪಡೆದುಕೊಳ್ಳಲು ಸುವರ್ಣಾಕಾಶವನ್ನು ನೀಡಿದೆ. ಮೂಲಕ ಕಳೆದ ಎರಡು ಯಶಸ್ವಿ ಮಾಸಿಕ ಕಂತಿನ ಯೋಜನೆಗಳನ್ನು ನಿರ್ವಹಿಸಿ ಗ್ರಾಹಕರ ನಂಬುಗೆಗೆ ಈ ಸಂಸ್ಥೆಯು ಪಾತ್ರವಾಗಿದೆ. ಇದೀಗ ನೂತನ “ನಿಮ್ಮ ಆಯ್ಕೆ”

ಪುತ್ತೂರು: * ಪವರ್ ಟೆಕ್ ಸೋಲಾರ್ ಸಿಸ್ಟಮ್ಸ್ ಗೃಹೋಪಯೋಗಿ ವಸ್ತುಗಳ ಮೇಲೆ ಸುವರ್ಣಾಕಾಶ** ಮಾಸಿಕ 1000/- ರೂ. 24 ಕಂತುಗಳಂತೆ ಪಾವತಿಸಿ ಅದೃಷ್ಟದ ಆಯ್ಕೆ ನಿಮ್ಮದಾಗಿಸಿ**ಹೆಚ್ಚಿನ ಮಾಹಿತಿಗಾಗಿ 6363109847 Read More »

ಉಡುಪಿ: ನಕ್ಸಲ್ ಚಟುವಟಿಕೆ ತೊರೆದು ಶರಣಾದ ತೊಂಬಟ್ಟು ಲಕ್ಷ್ಮೀ

ಸಮಗ್ರ ನ್ಯೂಸ್::ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಳಿಕ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಫೆ.2ರಂದು ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗಿದ್ದಾರೆ. ಬಿಗಿ ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರು ಮತ್ತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯರು ಇದ್ದರು. ಎಸ್ ಪಿ ಡಾ. ಕೆ ಅರುಣ್, ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಿತು. ನಕ್ಸಲ್ ಚಳವಳಿಯಲ್ಲಿ

ಉಡುಪಿ: ನಕ್ಸಲ್ ಚಟುವಟಿಕೆ ತೊರೆದು ಶರಣಾದ ತೊಂಬಟ್ಟು ಲಕ್ಷ್ಮೀ Read More »

ಪ್ರತಿಭಟನೆ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು| ಮಾ.7ರವರೆಗೆ ಗಡುವು ವಿಸ್ತರಣೆ

ಸಮಗ್ರ ನ್ಯೂಸ್: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಕೈಬಿಟ್ಟಿದ್ದಾರೆ. ಕಳೆದ 5 ದಿನಗಳಿಂದ ಸಾವಿರಾರು ಅಂಗನವಾಡಿ ನೌಕರರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರು. ತಮ್ಮ ಬೇಡಿಕೆ ಈಡೇರಿಕೆಗೆ ಮಾ.7 ರವರೆಗೆ ಗಡುವು ಕೊಟ್ಟು ಪ್ರತಿಭಟನೆ ಹಿಂಪಡೆಯಲಾಗಿದೆ. ಮಾ-7ರ ಒಳಗಾಗಿ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಮೊನ್ನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಟಿಸ್ ಕೊಟ್ಟರೂ ಪ್ರತಿಭಟನೆ

ಪ್ರತಿಭಟನೆ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು| ಮಾ.7ರವರೆಗೆ ಗಡುವು ವಿಸ್ತರಣೆ Read More »