ಸಮಗ್ರ ನ್ಯೂಸ್: ಚಾರ್ಮಾಡಿ ಘಾಟ್ ರಸ್ತೆಯ ತಿರುವಿನಲ್ಲೇ ಕೆಎಸ್‌ಆರ್‌ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ತುಂಡಾಗಿದ್ದರೂ ಚಾಲಕನ ಚಾಕಚಕ್ಯತೆಯಿಂದ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KA 17-F-1487 ನಂಬರಿನ ಶಿವಮೊಗ್ಗ ವಿಭಾಗದ ಬಸ್ ಚಾರ್ಮಾಡಿ ಘಾಟ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಹಠಾತ್ ಸ್ಟೀರಿಂಗ್ ಜಾಯಿಂಟ್ ಕಟ್ ಆಗಿತ್ತು. ಆದರೆ, ಚಾಲಕ ಎಚ್ಚರಿಕೆಯಿಂದ ಬಸ್‌ನ್ನು ನಿಯಂತ್ರಣಕ್ಕೆ ತಂದು, ಅಪಘಾತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಯೋಚಿತ ನಿರ್ವಹಣೆಯಿಂದ ಪ್ರಯಾಣಿಕರು ಯಾವುದೇ ಗಾಯಗಳಾಗದೆ ಸುರಕ್ಷಿತರಾಗಿದ್ದು, ಪ್ರಯಾಣಿಕರನ್ನು ಬದಲಿ ಬಸ್‌ನಲ್ಲಿ ಕಳಿಸಿಕೊಡಲಾಯಿತು.