ಸಮಗ್ರ ನ್ಯೂಸ್: ಮಹಾಕುಂಭ ಮೇಳದಿಂದ ಹಿಂದಿರುಗುವಾಗ ಭೀಕರ ಅಪಘಾತದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸಂಸದೆ ಮಹುವಾ ಮಾಜಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಅವರ ಕುಟುಂಬ ಸದಸ್ಯರು ಕೂಡ ಗಾಯಗೊಂಡಿದ್ದಾರೆ. ಅವರ ಕಾರು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಅವರನ್ನು ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಂಭವಿಸಿದೆ. ಜೆಎಂಎಂನ ರಾಜ್ಯಸಭಾ ಸಂಸದೆ ಮಹುವಾ ಮಾಂಜಿ ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಿ ಪ್ರಯಾಗ್‌ರಾಜ್‌ನಿಂದ ಹಿಂತಿರುಗುತ್ತಿದ್ದರು. ಈ ಸಮಯದಲ್ಲಿ ಅವರ ಮಗ ಮತ್ತು ಸೊಸೆ ಕೂಡ ಅವರೊಂದಿಗೆ ಇದ್ದರು. ರಾಷ್ಟ್ರೀಯ ಹೆದ್ದಾರಿ-39ರ ಲತೇಹಾರ್‌ನ ಹೊಟ್‌ವಾಗ್ ಗ್ರಾಮದಲ್ಲಿ ಅವರ ಕಾರು, ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ತಕ್ಷಣ ಅವರನ್ನು ರಾಂಚಿಯ ಆರ್ಕಿಡ್ ವೈದ್ಯಕೀಯ ಕೇಂದ್ರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯಸಭಾ ಸದಸ್ಯೆಯಾಗಿರುವ ಮಹುವಾ ಎಡ ಮಣಿಕಟ್ಟಿನಲ್ಲಿ ಮೂಳೆ ಮುರಿತ ಉಂಟಾಗಿದ್ದು, ಪಕ್ಕೆಲುಬುಗಳಿಗೆ ಸ್ವಲ್ಪ ಹಾನಿಯಾಗಿದೆ.
ನಾವು ಪ್ರಯಾಗರಾಜ್‌ನ ಮಹಾ ಕುಂಭದಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ, ನನ್ನ ತಾಯಿ ಹಾಗೂ ಪತ್ನಿ ಹಿಂದಿನ ಸೀಟಿನಲ್ಲಿದ್ದರು. ನಾನು ಕಾರು ಓಡಿಸುತ್ತಿದ್ದೆ, ಆಗ ಒಮ್ಮೆ ಕಣ್ಣುಮುಚ್ಚಿದಂತಾಗಿ ಅಪಘಾತ ಸಂಭವಿಸಿದೆ. ತಕ್ಷಣ ಕಾರಿನ ಒಳಗೆಲ್ಲಾ ಹೊಗೆ ತುಂಬಿಕೊಂಡಿತ್ತು, ನಾವು ಹೊರಗೆ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಾಯಿಗೆ ಮಣಿಕಟ್ಟಿಗೆ ಪೆಟ್ಟುಬಿದ್ದಿತ್ತು, ಎದೆ ಹಾಗೂ ಕೈ ತುಂಬಾ ನೋಯುತ್ತಿದೆ ಎಂದು ಹೇಳಿದ್ದಾಗಿ ಮಹುವಾ ಪುತ್ರ ತಿಳಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪುತ್ರ ಸೋಮ್ವಿತ್ ತಿಳಿಸಿದ್ದಾರೆ.