ಸಮಗ್ರ ನ್ಯೂಸ್: ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರಿನ ಶಾಸಕರ ಭವನ ಬಳಿ ಈ ಘಟನೆ ಸಂಭವಿಸಿದೆ. ಶಾಸಕರ ಸರ್ಕಾರಿ ಕಾರಿಗೆ ಪೊಲೀಸ್ ವಾಹನವೇ ಬಂದು ಡಿಕ್ಕಿ ಹೊಡೆದಿದ್ದು ಪೊಲೀಸ್ ವಾಹನ ಗುದ್ದಿದ ರಭಸಕ್ಕೆ ಶಿವಲಿಂಗೇಗೌಡರ ಕಾರು ಜಖಂ ಆಗಿದೆ.
ಶಿವಲಿಂಗೇಗೌಡರ ಕಾರು ಶಾಸಕರ ಭವನದ ಮುಂದೆ ನಿಂತಿತ್ತು. ಈ ಸಂದರ್ಭದಲ್ಲಿ ಮತ್ತೊಂದು ಬದಿಯಿಂದ ಬಂದ ಪೊಲೀಸ್ ಜೀಪ್ ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದೆ. ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಶಾಸಕರ ಕಾರು ಜಖಂ ಆಗಿದೆ. ಅದೃಷ್ಟವಶಾತ್ ಶಾಸಕರ ಕಾರ್‌ನಲ್ಲಿದ್ದ ಏರ್‌ಬ್ಯಾಗ್ ಕೂಡಲೇ ಓಪನ್ ಆಗಿದೆ. ಘಟನೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರ ಕೈಗೆ ಚೂರು ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಪೊಲೀಸ್ ಕಾನ್‌ಸ್ಟೆಬಲ್ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಎಂದೂ ಈ ಘಟನೆ ಬಗ್ಗೆ ಗರಂ ಆಗಿರುವ ಶಿವಲಿಂಗೇಗೌಡರು ಪೊಲೀಸ್ ಜೀಪ್ ಚಲಾಯಿಸಿದ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಜನ ಜಮಾಯಿಸಿದ್ದಾರೆ. ಕೂಡಲೇ ಡಿಕ್ಕಿ ಹೊಡೆದ ಪೊಲೀಸ್ ವಾಹನವನ್ನು ತೆರವು ಮಾಡಿದ್ದಾರೆ.