Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಇದು ಫೆಬ್ರವರಿ ತಿಂಗಳ ಕೊನೆಯ ವಾರವಾಗಿದೆ. ೨೩-೦೨-೨೦೨೫ರಿಂದ ೦೧-೦೩-೨೦೨೫ರವರೆಗೆ ಇರಲಿದೆ. ಬುಧನು ಮೀನ ರಾಶಿಯನ್ನು ಪ್ರವೇಶಿಸುವನು. ಇದು ಇವನ ನೀಚಸ್ಥಾನವಾದ ಕಾರಣ ಅವನಿಂದ ಸಿಗುವ ತಿಳಿವಳಿಕೆ, ಬಾಂಧವ್ಯ, ಭೂಮಿಯ ವ್ಯವಹಾರ ಎಲ್ಲವೂ ಅಸ್ತವ್ಯಸ್ತ. ಆಪ್ತರೇ ಶತ್ರುಗಳಂತೆ ಕಾಣಿಸುವುದು. ಇದೆಲ್ಲ ಈ ವಾರದ ಭವಿಷ್ಯ. ಯಾವ ರಾಶಿಗೆ ಲಾಭ? ಯಾರಿಗೆ ಶುಭ? ನೋಡೋಣ ಬನ್ನಿ…

Ad Widget . Ad Widget . Ad Widget . Ad Widget .

ಮೇಷ ರಾಶಿ:
ಈ ವಾರ ನಿಮಗೆ ತುಂಬಾನೇ ಶುಭವಾಗಿದೆ, ನಿಮ್ಮೆಲ್ಲಾ ಕೆಲಸ ಕಾರ್ಯಗಳು ಯೋಜಿತ ರೀತಿಯಲ್ಲಿ ಪೂರ್ಣವಾಗಲಿದೆ, ವ್ಯಾಪಾರಸ್ಥರು ಲಾಭ ಗಳಿಸುತ್ತೀರಿ. ತೀರ್ಥ ಕ್ಷೇತ್ರಗಳಿಗೆ ಪ್ರಯಾಣ ಮಾಡಬಯಸಿದ್ದರೆ ಈ ವಾರ ಸಾಧ್ಯವಾಗಲಿದೆ. ಆರ್ಥಿಕವಾಗಿ ನೋಡುವುದಾದರೆ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಲಿದೆ.

Ad Widget . Ad Widget .

ವೃಷಭ ರಾಶಿ:
ಈ ವಾರ ಮಿಶ್ರಫಲಿತಾಂಶ, ಈ ವಾರ ನೀವು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ. ಈ ವಾರ ಖರ್ಚು ಕೂಡ ಹೆಚ್ಚಿರಲಿದೆ, ಹೀಗಾಗಿ ಹಣದ ಚಿಂತೆ ಕಾಡಬಹುದು. ವ್ಯಾಪಾರಿಗಳು ಈ ವಾರ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ, ಇನ್ನು ವೃತ್ತಿ ಜೀವನಕ್ಕೆ ಸಂಬಂಧ ಪಟ್ಟಂತೆ ಹಿರಿಯರು ನೀಡಿದ ಸಲಹೆ ನಿರ್ಲಕ್ಷ್ಯ ಮಾಡದಿರಿ.

ಮಿಥುನ ರಾಶಿ:
ಈ ವಾರ ಏರಳಿತಗಳಿಂದ ಕೂಡಿರಲಿದೆ, ಹೆಚ್ಚು ಹಣದ ಖರ್ಚು ಬರಬಹುದು, ಹೆಚ್ಚು ಆರ್ಥಿಕ ಸವಾಲುಗಳು ಬರಬಹುದು. ಇನ್ನು ಈ ಅವಧಿ ಆರೋಗ್ಯದ ದೃಷ್ಟಿಯಿಂದಲೂ ಅನುಕೂಲಕರವಲ್ಲ, ಒಂದು ಕಡೆ ಕೆಲಸದ ಒತ್ತಡ ಕೂಡ ಇರುತ್ತದೆ, ನೀವು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸುವಂತೆ ಸಲಹೆ ನೀಡಲಾಗಿದೆ.

ಕರ್ಕ ರಾಶಿ:
ಈ ವಾರ ನೀವು ಬರಿ ಅದೃಷ್ಟ ನಂಬಿ ಕೂರದೆ ಅದಕ್ಕೆ ತಕ್ಕ ಪ್ರಯತ್ನ ಹಾಕಬೇಕಾಗಿ ಸಲಹೆ ನೀಡಲಾಗುವುದು. ಇನ್ನು ಡಾಕ್ಯೂಮೆಂಟ್‌ ವಿಷಯಗಳಿಗೆ ಹೆಚ್ಚು ಓಡಾಡಬೇಕಾಗುತ್ತದೆ, ಆರ್ಥಿಕವಾಗಿ ಕೂಡ ಈ ವಾರ ಅಷ್ಟೊಂದು ಅನುಕೂಲಕರವಲ್ಲ. ಆರೋಗ್ಯದಲ್ಲಿ ಏರಳಿತವಿರಬಹುದು. ಈ ವಾರ ಆರೋಗ್ಯ ಹಾಗೂ ಆರ್ಥಿಕ ಜೀವನದ ಕಡೆಗೆ ಹೆಚ್ಚು ಗಮನಹರಿಸಿದರೆ ಒಳ್ಳೆಯದು.

ಸಿಂಹ ರಾಶಿ:
ಈ ವಾರ ನಿಮಗೆ ಅನುಕೂಲಕರವಾಗಿದೆ. ವೃತ್ತಿ ಬದುಕಿನಲ್ಲಿ ಹೆಚ್ಚು ಜಾಗ್ರತೆವಹಿಸಿ. ನೀವು ಕೆಲಸ ಹುಡುಕುವ ಪ್ರಯತ್ಬದಲ್ಲಿದ್ದರೆ ಇನ್ನೂ ಸ್ವಲ್ಪ ಕಾಯಬೇಕಾಗುತ್ತದೆ. ವ್ಯಾಪಾರಿಗಳು ಅದರಲ್ಲಿಯೂ ಪಾಲುದಾರಿಕೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರ ಹಣದ ಹೂಡಿಕೆ ಮಾಡುವಾಗ ಹೆಚ್ಚು ಜಾಗ್ರತೆವಹಿಸಿ. ಕುಟುಂಬದ ಕಡೆಗೆ ಹೆಚ್ಚು ಗಮನಹರಿಸಿ, ಅವರ ಜೊತೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ.

ಕನ್ಯಾ ರಾಶಿ:
ಈ ವಾರ ನಿಮಗೆ ಸರಾಸರಿಯಾಗಿರಲಿದೆ, ಆರೋಗ್ಯ ಸಂಬಂಧಿ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ, ಉದ್ಯೋಗಿಗಳು ಕೂಡ ತಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಹಣವನ್ನು ಆಸ್ತಿ ಅಥವಾ ಮನೆಗೆ ಹೂಡಿಕೆ ಮಾಡುವಾಗ ಡಾಕ್ಯೂಮೆಂಟ್‌ಕಡೆಗೆ ಹೆಚ್ಚಿನ ಗಮನಹರಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ.

ತುಲಾ ರಾಶಿ:
ಈ ವಾರ ನಿಮಗೆ ಮಿಶ್ರಫಲಿತಾಂಶ, ಕೆಲಸ ಕಾರ್ಯದ ಕಡೆಗೆ ನೀವು ವಿಶೇಷ ಗಮನಹರಿಸಬೇಕು, ಅಲ್ಲದೆ ಈ ವಾರ ನೀವು ನಿಮ್ಮ ಮಾಉ ಅಥವಾ ವರ್ತನೆ ಕಡೆಗೆ ಹೆಚ್ಚು ಗಮನಹರಿಸಬೇಕು. ಸಂಬಂಧದಲ್ಲಿ ಕೆಲ ಭಿನ್ನಾಭಿಪ್ರಾಯ ಉಂಟಾದರೆ ಅದನ್ನು ಕೂತು ಮಾತನಾಡಿ ಬಗೆಹರಿಸಲು ಪ್ರಯತ್ನಿಸಿ. ಆರ್ಥಿಕವಾಗಿ ನೋಡುವುದಾದರೆ ಬಜೆಟ್‌ ಕಡೆಗೆ ಗಮನಹರಿಸಿ.

ವೃಶ್ಚಿಕ ರಾಶಿ:
ಈ ವಾರ ವೃಶ್ಚಿಕ ರಾಶಿಯವರು ಜಾಗ್ರತೆವಹಿಸಿ, ಆದಾಯಕ್ಕಿಂತ ಹೆಚ್ಚಿನ ಖರ್ಚು ಇರಬಹುದು. ಉದ್ಯೋಗಿಗಳಿಗೆ ಈ ದಿನ ತುಂಬಾ ಉತ್ತಮವಾಗಿರಲಿದೆ, ಹಣದ ಪ್ರಯತ್ನದಲ್ಲಿ ನೀವು ನಿರೀಕ್ಷಿಸಿದಷ್ಟು ಹಣ ಸಿಗದೆ ಹೋಗಬಹುದು. ಇನ್ನು ಸಂಬಂಧದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಪರಿಸ್ಥಿತಿ ನಿಭಾಯಿಸಬೇಕು.

ಧನು ರಾಶಿ:
ಧನು ರಾಶಿಯವರಿಗೆ ಈ ವಾರ ಶುಭವಾಗಿದೆ, ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ, ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಲು ಸಾಧ್ಯವಾಗುವುದು.ವ್ಯಾಪಾರಿಗಳಿಗೆ ಈ ಸಮಯ ಲಾಭದಾಯಕವಾಗಿರಲಿದೆ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.

ಮಕರ ರಾಶಿ:
ಈ ವಾರ ನಿಮಗೆ ಮಿಶ್ರಫಲಿತಾಂಶ, ವೃತ್ತಿ ಬದುಕಿಗೆ ಸಂಬಂಧಿಸಿದ ಚಿಂತೆ ಕಾಡಬಹುದು. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಭಿನ್ನಾಭಿಪ್ರಾಯ ಉಂಟಾಗಿದ್ದರೆ ಅದು ಬಗಹರಿಯಲಿದೆ.

ಕುಂಭ ರಾಶಿ:
ಕುಂಭ ರಾಶಿಯವರು ಈ ವಾರ ಸ್ವಲ್ಪ ಜಾಗ್ರತೆವಹಿಸಬೇಕು, ಈ ವಾರ ಯಾವುದೇ ನಿರ್ಧಾರವಾದರೂ ಆತುರದಿಂದ ತೆಗೆದುಕೊಳ್ಳಬೇಡಿ. ವ್ಯಾಪಾರಿಗಳು ತಮ್ಮ ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳಬೇಕು. ಈ ವಾರ ನೀವು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ.

ಮೀನ ರಾಶಿ:
ಮೀನ ರಾಶಿಯವರು ಈ ವಾರ ಸ್ವಲ್ಪ ಜಾಗ್ರತೆವಹಿಸಬೇಕು, ಈ ವಾರ ಅತಿ ಹೆಚ್ಚಿನ ಮಾನಸಿಕ ಒತ್ತಡ ಅನುಭವಿಸಬಹುದು. ಉದ್ಯೋಗಿಗಳು ಕೆಲಸ ಕಾರ್ಯವನ್ನು ಪೆಂಡಿಂಗ್ ಮಾಡದೆ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಇನ್ನು ನಿಮ್ಮ ಹಾಗೂ ಸಂಗಾತಿ ನಡುವಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಕೂಡ ಜಾಗ್ರತೆವಹಿಸಿ.

Leave a Comment

Your email address will not be published. Required fields are marked *