Ad Widget .

ಸ್ಕೀಂ‌ ಹೆಸರಲ್ಲಿ ವಂಚನೆ; ಐವರು ಅರೆಸ್ಟ್

ಸಮಗ್ರ ನ್ಯೂಸ್: ವಂಚನೆ ಮಾಡುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಆರೋಪದಡಿ ಎಸ್‌.ವಿ. ಸ್ಮಾರ್ಟ್‌ ವಿಷನ್‌ ಎಂಬ ಸ್ಕೀಂನ ಮಾಲಕ ಸಹಿತ ಐವರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget . Ad Widget . Ad Widget .

ಸ್ಕೀಂ ಮಾಲಕ ಮಂಗಳೂರು ಸುರತ್ಕಲ್‌ ಮೂಲದ ಮಹಮದ್‌ ಅಶ್ರಫ್(37), ಮಡಿಕೇರಿಯ ಮಲ್ಲಿಕಾರ್ಜುನ ನಗರದ ನಿವಾಸಿ ಎಂ.ವೈ.ಸುಲೈಮಾನ್‌(37), ತ್ಯಾಗರಾಜ ಕಾಲನಿಯ ಅಬ್ದುಲ್‌ ಗಫ‌ೂರ್‌(34), ಮೊಹಮದ್‌ ಅಕ್ರಮ್‌ (34) ಹಾಗೂ ಕುಂಬಳಕೇರಿ ನಿವಾಸಿ ಎಚ್‌.ಎನ್‌.ಕಿಶೋರ್‌(41) ಬಂಧಿತರು.

Ad Widget . Ad Widget .

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ಕೆ.ರಾಮರಾಜನ್‌, ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಣಿಪೇಟೆಯಲ್ಲಿ ಜ. 30ರಿಂದ ಎಸ್‌.ವಿ. ಸ್ಮಾರ್ಟ್‌ ವಿಷನ್‌ ಸ್ಕೀಂ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾ ಗುತ್ತಿತ್ತು. ಈಗಾಗಲೇ 1100ಕ್ಕೂ ಅಧಿಕ ಮಂದಿ ಈ ಸ್ಕೀಂಗೆ ಸೇರಿಕೊಂಡಿದ್ದಾರೆ. ಸ್ಕೀಂಗೆ ಸೇರಲು ಪ್ರತಿ ತಿಂಗಳು ರೂ. 1 ಸಾವಿರದಂತೆ 24 ಕಂತುಗಳನ್ನು ಗ್ರಾಹಕರು ಕಟ್ಟಬೇಕಾಗಿರುತ್ತದೆ. ಪ್ರತಿ ತಿಂಗಳ 30ನೇ ತಾರೀಕಿನಂದು ಸಂಜೆ 5 ಗಂಟೆಗೆ ಲಕ್ಕಿ ಡ್ರಾ ಮಾಡಿ ಫ‌ಲಿತಾಂಶವನ್ನು ವಾಟ್ಸ್‌ಅಪ್‌ ಗ್ರೂಪ್‌ ಮೂಲಕ ತಿಳಿಸಿ ಬಹುಮಾನವನ್ನು 50-60 ದಿನಗಳಲ್ಲಿ ಗ್ರಾಹಕರಿಗೆ ನೀಡಲಾಗುವುದು. 20 ತಿಂಗಳ ಲಕ್ಕಿ ಡ್ರಾನಲ್ಲಿ ಒಟ್ಟು 96 ಜನರಿಗೆ ವಿವಿಧ ರೀತಿಯ ಬಹುಮಾನವನ್ನು ನೀಡುವುದಾಗಿ ಘೋಷಿಸಿಕೊಂಡಿದ್ದರು ಎಂದರು.

ಇಂತಹ ಸ್ಕೀಂಗಳನ್ನು ನಡೆಸುವವರು ಬ್ಯಾಂಕಿಂಗ್‌ ಸಹಿತ ವಿವಿಧ ಇಲಾಖೆಗಳ ಅನುಮತಿ ಮತ್ತು ಪರವಾನಿಗೆ ಪಡೆದಿರಬೇಕು ಎಂಬ ನಿಯಮವಿದೆ. ಅಲ್ಲದೇ ಸಾರ್ವಜ ನಿಕರಿಂದ ಠೇವಣಿ ಮಾದರಿಯಲ್ಲಿ ಹಣ ಸಂಗ್ರಹಿಸುವ ಮುನ್ನ ಬ್ಯಾಂಕಿಂಗ್‌ ವಲಯದ ಅನುಮತಿ ಪಡೆದಿರಬೇಕು. ಆದಾಯ ತೆರಿಗೆ, ಜಿಎಸ್‌ಟಿ ಪಾವತಿಗೆ ಸಂಬಂಧಿಸಿ ದಾಖಲಾತಿ ಹೊಂದಿರಬೇಕು. ಆದರೆ ಆರೋಪಿಗಳಲ್ಲಿ ಯಾವುದೇ ದಾಖಲೆ, ಪರವಾನಿಗೆ ಇರಲಿಲ್ಲ ಎಂದು ತಿಳಿಸಿದರು.

ಮೊದಲನೇ ತಿಂಗಳ ಬಹುಮಾನವಾಗಿ ಒಬ್ಬರಿಗೆ ಥಾರ್‌ ಜೀಪ್‌ ಹಾಗೂ 8 ಜನರಿಗೆ ಬೈಕ್‌ ನೀಡಬೇಕಾಗಿತ್ತು. ಆದರೆ ಇವರು ಥಾರ್‌ ಜೀಪ್‌ ಬದಲಾಗಿ 7.60 ಲಕ್ಷ ರೂ. ಮತ್ತು 7 ಮಂದಿಗೆ 43 ಸಾ. ರೂ.ಯ ಚೆಕ್‌ ನೀಡಿದ್ದಾರೆ. ಪೊಲೀಸ್‌ ಗುಪ್ತದಳದ ಸಿಬಂದಿ ಮೂಲಕ ಪಡೆದ ಮಾಹಿತಿ ಆಧರಿಸಿ ಈ ಸ್ಕೀಂ ವಿರುದ್ಧ ನಗರ ಠಾಣೆಯಲ್ಲಿ ಸುಮೋಟೋ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಸ್ಕೀಂ ನಡೆಸುತ್ತಿದ್ದ ಕಟ್ಟಡ ಕಚೇರಿಯಲ್ಲಿದ್ದ ವಿವಿಧ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ಮತ್ತೆ ಕಸ್ಟಡಿಗೆ ಕೇಳಲಾಗುವುದು ಎಂದು ಎಸ್‌ಪಿ ಹೇಳಿದರು.

Leave a Comment

Your email address will not be published. Required fields are marked *