ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ದಲ್ಲಿ ಹಿಂದಿ ವಿಭಾಗದ ವತಿಯಿಂದ ವಿಶ್ವ ಹಿಂದಿ ದಿವಸ ಕಾರ್ಯಕ್ರಮವನ್ನು ಫೆ.15 ರಂದು ಆಚರಿಸಲಾಯಿತು.
ವಿಶ್ವಹಿಂದಿ ದಿವಸದ ಪ್ರಯುಕ್ತ “ಹಿಂದಿ ಭಾಷೆ ಮತ್ತು ಉದ್ಯೋಗ” ಎಂಬ ವಿಷಯದ ಕುರಿತು ವಿಶೇಷ ವ್ಯಾಖ್ಯಾನ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಜ್ಯೋತಿ ಜ್ಞಾನೇಶ್ವರಿ ಸಹಾಯಕ ಪ್ರಾಧ್ಯಾಪಕಿ, ಹಿಂದಿ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಮದ್ರಾಸ್ ಇವರು ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ ಟಿ ವಹಿಸಿದರು. ಹಾಗೂ ಹಿಂದಿ ವಿಭಾಗದ ಉಪನ್ಯಾಸಕಿ ಭಕ್ತಿಶ್ರೀ ಕೆ ಬಿ ಸ್ವಾಗತಿಸಿ ಹಿಂದಿ ಸಂಘದ ಉಪಾಧ್ಯಕ್ಷ ಕೀರ್ತನ್ ಬಿ ಎಲ್ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಥಮ ಬಿಕಾಂ ವಿದ್ಯಾರ್ಥಿ ದಿಶಾ ಎಸ್ ನಿರ್ವಹಿಸಿದರು.