ಸಮಗ್ರ ನ್ಯೂಸ್: ಹೂವಿನ ಹಡಗಲಿಯ ಐತಿಹಾಸಿಕ ತಾಲೂಕಿನ ಸುಕ್ಷೇತ್ರ ಮೈಲಾರ ಕಾರ್ಣಿಕೋತ್ಸವ ಇಂದು ಸಂಜೆ(ಫೆ.14) ಲಕ್ಷಾಂತರ ಭಕ್ತರ ಮಧ್ಯೆ ಸಂಪನ್ನವಾಯಿತು. ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಕಾರ್ಣಿಕೋತ್ಸವದಲ್ಲಿ ‘ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂದು ಗೊರವಯ್ಯ ಅವರು ದೈವವಾಣಿ ನುಡಿದರು.
ಪ್ರತಿವರ್ಷದಂತೆ ಈ ಬಾರಿಯೂ ಪ್ರತಿವರ್ಷ ಈ ದೇವರು ನುಡಿಯುವ ಕಾರ್ಣಿಕ ನುಡಿಗೆ ಲಕ್ಷಾಂತರ ಭಕ್ತರು ಕಾದು ಕುಳಿತಿರುದ್ದರು. ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರಲ್ಲಿದೆ. ಅದರಂತೆ ಗೋರವಯ್ಯ ‘ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂದು ಭವಿಷ್ಯವಾಣಿಯನ್ನು ನುಡಿದರು.
ಕಾರ್ಣಿಕ ನುಡಿಗೂ ಮುನ್ನ ಗೊರವಯ್ಯ 9 ದಿನಗಳ ಉಪವಾಸ ವ್ರತ ಆಚರಿಸಿದರು. ನಿನ್ನೆ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ಸಂಜೆ 5.46ಕ್ಕೆ ಬಿಲ್ಲನ್ನೇರುತ್ತಿದ್ದಂತೆ ಅಲ್ಲಿದ್ದವರೆಲ್ಲ ಒಂದು ಕ್ಷಣ ಮೌನವಾದರು. ಇದಾದ ಕೆಲವೇ ಕ್ಷಣಗಳಲ್ಲಿ ‘ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂದು ಕಾರ್ಣಿಕವನ್ನು ನುಡಿದು ಕೆಳಗೆ ಬಿದ್ದರು. ಈ ವೇಳೆ ಅವರನ್ನು ಗೊರವ ಸಮೂಹ ಎತ್ತಿ ಹಿಡಿದರು.
ಇನ್ನು ‘ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂಬ ಅರ್ಥವನ್ನು ನೋಡುವುದಾರೆ, ನಾಡಿನಲ್ಲಿ ಮಳೆ ಬೆಳೆ ಸಮೃದ್ಧ ಆಗಲಿದೆ. ರೈತರ ಮುಖದಲ್ಲಿ ಇಮ್ನಷ್ಟು ಸಂತಸ ಮತ್ತು ರಾಜ್ಯ, ದೇಶದಲ್ಲಿ ಎಲ್ಲಾರ ವರ್ಗದ ಜನರಿಗೆ ಒಳ್ಳೆದಾಗಲಿದೆ ಎನ್ನಲಾಗಿದೆ.