ಸಮಗ್ರ ನ್ಯೂಸ್: ತಮಿಳಿನ ಖ್ಯಾತ ನಟ ವಿಶಾಲ್ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗಾಗಿ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ಅವರಿಗೆ ಜಾರಂದಾಯ ದೈವವು ನಾನು ಇದ್ದೇನೆ. ಭಯ ಪಡಬೇಡ ಎಂಬುದಾಗಿ ಅಭಯ ನೀಡಿರುವುದಾಗಿ ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಸ್ಥಾನದ ದೈವದ ಮೊರೆಯನ್ನು ನಟ ವಿಶಾಲ್ ಅನಾರೋಗ್ಯ ಸಮಸ್ಯೆ ನಿವಾರಿಸುವಂತೆ ಮೊರೆ ಹೋಗಿದ್ದಾರೆ.
ಮುಲ್ಕಿಯ ಹರಿಪಾದೆ ಧರ್ಮದೈವದ ನೇಮೋತ್ಸವ, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಆರೋಗ್ಯ ಸಮಸ್ಯೆ ನಿವಾರಿಸುವಂತೆ ಕೋರಿಕೊಂಡರು. ಜಾರಂದಾಯ ದೈವವು ನಾನು ಇದ್ದೇನೆ. ಕಣ್ಣೀರು ಹಾಕಬೇಡ ಎಂಬುದಾಗಿ ಅಭಯ ನೀಡಿದೆ.
ಇನ್ನೂ ಜಾರಂದಾಯ ನೇಮೋತ್ಸವದಲ್ಲಿ ಭಾಗಿಯಾದಂತ ನಟ ವಿಶಾಲ್ ಗೆ ಆರೋಗ್ಯ ಸಮಸ್ಯೆ ಸಂಪೂರ್ಣ ಸರಿಯಾಗಲಿದೆ. ನೀನು ಹೆದರಬೇಡ. ಸಮಸ್ಯೆ ಕ್ಲಿಯರ್ ಆದ ನಂತ್ರ ಬಂದು ತುಲಾಭಾರ ಮಾಡಿಕೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ.