ಸಮಗ್ರ ನ್ಯೂಸ್: ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, 10 ಗ್ರಾಂ ಚಿನ್ನದ ಬೆಲೆ 88,500 ಕ್ಕೆ ಏರಿಕೆಯಾಗಿದೆ. ಬಂಗಾರ ಖರೀದಿ ಮಾಡಬೇಕು ಎನ್ನುವವರಿಗೆ ಬಿಗ್ ಶಾಕ್ ಎದುರಾಗಿದೆ. ಚಿನ್ನದ ಬೆಲೆಯು 88,500 ಸಾವಿರ ರೂ ಮುಟ್ಟುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.
ಸೋಮವಾರ ಒಂದೇ ದಿನ 10 ಗ್ರಾಂ ಚಿನ್ನದ ಬೆಲೆ 2430 ರೂ ನಷ್ಟು ಏರಿಕೆಯಾಗಿದೆ. ಇದರಿಂದಾಗಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 88,500 ಕ್ಕೆ ತಲುಪಿದೆ.ಬೆಳ್ಳಿ ದರದಲ್ಲಿಯೂ ಸೋಮವಾರ ಏರಿಕೆ ಕಂಡು ಬಂದಿದ್ದು, 1 ಸಾವಿರ ರೂ ಏರಿಕೆಯೊಂದಿಗೆ 97,500 ರೂಗೆ ತಲುಪಿದೆ.
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಮದುವೆ ಹಬ್ಬದ ಸೀಸನ್ ನಲ್ಲಿ ಗ್ರಾಹಕರಿಗೆ ಶಾಕ್ ಎದುರಾಗಿದೆ. ಮದುವೆ ಸೀಸನ್ ಶುರುವಾದ ಹೊತ್ತಲ್ಲೇ ಚಿನ್ನದ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ಚಿನ್ನ ಖರೀದಿಸುವುದು ಬಹಳ ಕಷ್ಟವೇ ಸರಿ.