ಸದ್ಗುರುಶ್ರೀ ರಾಮರವರ ಮಾರ್ಗದರ್ಶನದಲ್ಲಿ ಸುಳ್ಯದ ಗೌಡ ಸಮುದಾಯ ಭವನದಲ್ಲಿ ಮನೋಶಕ್ತಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮವು ಫೆ. 9ರಂದು ನಡೆಯಿತು.
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಡಿ. ವಿ. ಲೀಲಾಧರ್ ರವರು ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಬಗ್ಗೆ ಮಾತನಾಡಿದ ಇವರು ನಮ್ಮ ಹೃದಯ ಮತ್ತು ಮನಸ್ಸು ಶಾಂತವಾಗಿರಲು ಇಂತಹ ಕಾರ್ಯಕ್ರಮ ಸಹಕಾರಿಯಾಗಬಲ್ಲದು” ಎಂದು ಶುಭಹಾರೈಸಿದರು.
ಉಪಾಸನ ಫೌಂಡೇಶನ್ ನ ಮುಖ್ಯಸ್ಥ ಸದ್ಗುರುಶ್ರೀ ರಾಮರವರು ಮಾತನಾಡಿ, “ನಮ್ಮ ಮನಸ್ಸೇ ಎಲ್ಲವೂ ಆಗಿದೆ. ಜೀವನ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲು ಮನಸ್ಸೇ ಶತ್ರು ಆಗಬಾರದು, ಮನಸ್ಸಿನ ಚಿತ್ತವನ್ನು ಅರ್ಥ ಮಾಡಿಕೊಂಡರೆ, ಮನಸ್ಸನ್ನು ಮಿತ್ರನನ್ನಾಗಿಸಿದರೆ ಆಗ ಏನನ್ನು ಸಾಧಿಸಬಹುದು” ಎಂದು ಹೇಳಿದರು.
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಪ್ರಗತಿಪರ ಕೃಷಿಕ ನೂಜಾಲು ಪದ್ಮನಾಭ ಗೌಡ, ಅಡ್ವಕೇಟ್ ರಾಮಣ್ಣ ಗೌಡ ವಿಟ್ಲ ಕಾರ್ಯಕ್ರಮದ ಸಂಘಟಕ, ಶ್ರೀ ಉಪಾಸಕ ಧರ್ಮತೇಜ ಎನ್. ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲತಾಶ್ರೀ ಸುಪ್ರೀತ್ ಮೊಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಉಪಾಸಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.