ಸಮಗ್ರ ನ್ಯೂಸ್: ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರು ಪತ್ನಿಯ ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲಾಗದೆ ಪರದಾಡುತ್ತಿದ್ದಾರೆ.
ಸುರಂಗ ಕೊರೆದು ಜಮೀನಿಗೆ ನೀರು ಹಾಯಿಸಿದ್ದನ್ನು ಆಧುನಿಕ ಭಗೀರಥನೆಂದು ಕರೆದು ಕೇಂದ್ರ ಸರಕಾರ “ಪದ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿತ್ತು.
ಇದು ಪ್ರಗತಿಪರ ಕೃಷಿಕರಾಗಿ ದೇಶದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾದ ಅವರು ಕೃಷ್ಯುತ್ಪತ್ತಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇದೀಗ ಅವರ ಪತ್ನಿ ಏಕಾಏಕಿ ತಲೆಯ ನರದ ಸಮಸ್ಯೆಗೆ ಒಳಗಾಗಿದ್ದಾರೆ. ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಅವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಪತ್ನಿಯ ಚಿಕಿತ್ಸೆ ವೆಚ್ಚ ಭರಿಸುವುದಕ್ಕಾಗಿ ಅವರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಈಗಾಗಲೇ ಕೈಯಲ್ಲಿರುವ ದುಡ್ಡು, ಅವರಿವರಲ್ಲಿ ಕಾಡಿಬೇಡಿ 2.65 ಲಕ್ಷ ರೂ. ಚಿಕಿತ್ಸೆಯ ವೆಚ್ಚ ಭರಿಸಿದ್ದಾರೆ. ಮತ್ತೆ ಚಿಕಿತ್ಸೆಯ ವೆಚ್ಚ 2.50 ಲಕ್ಷ ರು. ಭರಿಸಬೇಕಿದೆ. ಈ ನಡುವೆ ತಲೆಯ ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿದೆ. ಇದರಿಂದ ಅಮೈ ಮಹಾಲಿಂಗ ನಾಯ್ಕರು ಕಂಗಾಲಾಗಿದ್ದಾರೆ. ಆಸ್ಪತ್ರೆ ವೆಚ್ಚ ಭರಿಸಲಾಗದೆ ಪರದಾಡುತ್ತಿದ್ದ ಅವರ ಸಂಕಷ್ಟಕ್ಕೆ ದಾನಿಗಳು ಸಹಕರಿಸಬೇಕಾಗಿದೆ.
ಬ್ಯಾಂಕ್ ಖಾತೆ ವಿವರ: ಮಹಾಲಿಂಗ ನಾಯ್ಕ, ಕೆನರಾ ಬ್ಯಾಂಕ್ ವಿಟ್ಲ ಶಾಖೆ, ಖಾತೆ -110037237088,
IFSC Code : CNR50010141,ಮೊಬೈಲ್ : 9449981747