ಸಮಗ್ರ ನ್ಯೂಸ್: ಕಾಫಿನಾಡಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಇದೀಗ ಮತ್ತೊಬ್ಬ ಕಾರ್ಮಿಕ ಮಹಿಳೆ ಕಾಡಾನೆ ದಾಳಿಯಿಂದ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಎನ್.ಆರ್.ಪುರ ತಾಲೂಕಿನ ಕತ್ತಲೇಖಾನ್ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ. ವಿನೋದಾ (39) ಮೃತ ಕಾರ್ಮಿಕ ಮಹಿಳೆಯಾಗಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ಮೂಲದ ವಿನೋದಾ ಬಾಯಿ, ಕೂಲಿಗಾಗಿ ವಿಜಯನಗರ ಜಿಲ್ಲೆಯಿಂದ ತಮ್ಮ ಕುಟುಂಬದೊಂದಿಗೆ ವಲಸೆ ಬಂದಿದ್ದರು.
ಇಂದು ಬೆಳಗ್ಗೆ ಕಾಫಿ ಹಣ್ಣು ಕೊಯ್ಯುವಾಗ ತೋಟದಲ್ಲಿದ್ದ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ಪರಿಣಾಮವಾಗಿ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.