ಅಂಜಲಿ ಮಾಂಟೆಸ್ಸರಿ ಸ್ಕೂಲ್ ನ ವಾರ್ಷಿಕ ದಿನಾಚರಣೆಯು ಫೆ.6 ರಂದು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಯ ಅಧ್ಯಕ್ಷರಾದ ಸದಾನಂದ ಮಾವಾಜಿ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶುಭಕರ ಬಿ. ಸಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಡೆನ್ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕರಾದ ಎನ್ ಆರ್ ಹರಿಕುಮಾರ್ ಹಾಗೂ ಗೌರವ ಅತಿಥಿಯಾಗಿ ಚಂದ್ರಶೇಖರ್ ಪೇರಲು ಮತ್ತು ಕೆ.ಟಿ ವಿಶ್ವನಾಥ ವಹಿಸಿದ್ದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಚಂದ್ರಶೇಖರ್ ಅವರು ಮಕ್ಕಳಿಗೆ ಮೊದಲ ತಂದೆ ತಾಯಿ ಗುರು, ಮಕ್ಕಳಿಗೆ ಒತ್ತಡವನ್ನು ಹೇರದೆ ಸ್ವತಂತ್ರ ಸ್ಥಳದಲ್ಲಿ ಕಲಿಕೆಯನ್ನು ಕಲಿಸಬೇಕು ಹಾಗಾಗಿ ಇದನ್ನು ಅಂಜಲಿ ಮಾಂಟೆಸ್ಸರಿಯಲ್ಲಿ ಕಳಿಸುತ್ತಾರೆ, ಮತ್ತು ತಮ್ಮ ಮಕ್ಕಳನ್ನು LKG,UKG ಆದ ನಂತರ 5 ವರ್ಷ ವಿವಿಧ ಚಟುವಟಿಕೆ ಯಲ್ಲಿ ತೊಡಗಿಸಿ ಕೊಂಡು ಮತ್ತೆ ಒಂದನೇ ತರಗತಿಗೆ ಹಾಕಬೇಕು ಎಂದರು, ಹಾಗಾಗಿ ಅಂಜಲಿ ಮಾಂಟೆಸ್ಸರಿ ಸ್ಕೂಲ್ ಸುಳ್ಯದ ಮಕ್ಕಳ ಬಾಳಿಗೆ ಜ್ಯೋತಿ ಆಗಲಿ ಎಂದು ಹಾರೈಸಿದರು.
ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿದ್ದರು ಅದರಲ್ಲಿ ಬಹುಮಾನ ಪಡೆದ ಮಕ್ಕಳಿಕೆ ಸ್ಮರಣಿಕೆ ನೀಡಲಾಯಿತು.

ನಂತರ ಎಲ್ಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ನಡೆಯಿತು. ಸುಮಾರು 8 ರಿಂದ 10 ಹಾಡುಗಳಿಕೆ ನೃತ್ಯವನ್ನು ಮಾಡಿದರು. ಮಕ್ಕಳಿಗೆ ಮಾತ್ರವಲ್ಲದೆ ಪೋಷಕರಿಗೂ ನೃತ್ಯಕ್ಕಾಗಿ ವೇದಿಕೆಯನ್ನು ನೀಡಿದ್ದರು.