ಸಮಗ್ರ ನ್ಯೂಸ್: ಹಿರಿಯ ವಿದ್ವಾಂಸ ದಿ| ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಯಕ್ಷಗಾನ ಅರ್ಥಧಾರಿ ಮತ್ತು ವೇಷಧಾರಿ ಜಬ್ಬಾರ್ ಸಮೋ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 25 ಸಾ.ರೂ. ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ. ಫೆ.22ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಜಬ್ಟಾರ್ 1963ರಲ್ಲಿ ಎಸ್. ಮೊದೀನ್ ಕುಂಞಿ ಹಾಗೂ ಬೀಫಾತಿಮ ಅವರ ಪುತ್ರನಾಗಿ ಸಂಪಾಜೆಯಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿ ಭಕ್ತ ಪ್ರಹ್ಲಾದ ಪ್ರಸಂಗದಲ್ಲಿ ಧನುಜ ಗುರುವಿನ ವೇಷ ಹಾಕುವುದರೊಂದಿಗೆ ಇವರ ಕಲಾಜೀವನ ಆರಂಭವಾಯಿತು. ನಾಡಿನ ಹಿರಿಯ ಕಲಾವಿದರೊಂದಿಗೆ ವಿವಿಧ ಪಾತ್ರಗಳನ್ನು ನಿಭಾಯಿಸಿ ಅರ್ಥಧಾರಿಗಳಾದರು. ರೇಷ್ಮೆ ಇಲಾಖೆಯಲ್ಲಿ ಸೇವೆಯಲ್ಲಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದರು. ಯಕ್ಷಗಾನ ಅಕಾಡೆಮಿ ಸದಸ್ಯರೂ ಆಗಿದ್ದಾರೆ.