Ad Widget .

ಇಂದು‌(ಫೆ.1) ಕೇಂದ್ರ ಬಜೆಟ್ | ಹಲವು ಕ್ಷೇತ್ರಗಳಲ್ಲಿ ಗರಿಗೆದರಿದ ನಿರೀಕ್ಷೆ

ಸಮಗ್ರ ನ್ಯೂಸ್: ಬಹುನಿರೀಕ್ಷೆಯ ಕೇಂದ್ರ ಸರ್ಕಾರದ 2025-2026ನೇ ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ 11ಗಂಟೆಗೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಡವರು, ಮಧ್ಯಮ ವರ್ಗದವರು, ಕೃಷಿ ವಲಯ ಸೇರಿದಂತೆ ವಿವಿಧ ವಲಯಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿವೆ. ಕೇಂದ್ರ ವಿತ್ತ ಸಚಿವೆ ಎಂಟನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ.

Ad Widget . Ad Widget . Ad Widget .

ಕೇಂದ್ರ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳು ಇವೆ. 140 ಕೋಟಿ ಭಾರತೀಯರ ಕನಸುಗಳು ಈಡೇರಿಸುವ ಹಂಬಲ ಹೊತ್ತಿರುವ ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ದೇಶಧ ಆರ್ಥಿಕ ಚಟುವಟಿಕೆಗೂ ಉತ್ತೇಜನ ನೀಡಬೇಕು, ಹಣದುಬ್ಬರದ ಸುಳಿಗೆ ಸಿಲುಕಿರುವ ಬಡವರು, ಮಧ್ಯಮ ವರ್ಗದ ಜನರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಪೂರಕವಾದ ಬಜೆಟ್ ಮಂಡಿಸುವ ಸವಾಲು ಕೇಂದ್ರದ ಮುಂದಿದೆ. ಹೀಗಾಗಿ ನಿರೀಕ್ಷೆಗಳು ಸಾಕಷ್ಟಿದ್ದು, ಸರ್ಕಾರ ಹೇಗೆ ಸಮತೋಲನ ಸಾಧಿಸಲಿದೆ ಎಂಬ ಕುತೂಹಲವು ಇದೆ.

Ad Widget .

ಆಸ್ತಿ ತೆರಿಗೆ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ. ತೆರಿಗೆ ಸ್ಲಾಬ್ ಗಳಲ್ಲಿ ಹೊಸ ನಿಯಮ ಜಾರಿ, ಆದಾಯ ತೆರಿಗೆ ವಿನಾಯಿತಿ, ಶೇಕಡಾ 30ರಷ್ಟು ತೆರಿಗೆ ಸ್ಲಾಬ್ ಆದಾಯ ಮಿತಿ 15 ರಿಂದ 20 ಲಕ್ಷಕ್ಕೆ ಏರಿಕೆ ಸಾಧ್ಯತೆ, ಗೃಹ ಸಾಲಗಳಿಗೆ ತೆರಿಗೆ ವಿನಾಯಿತಿ, ಮಹಿಳೆ ಮತ್ತು ವಿದ್ಯಾರ್ಥಿಗಳ ಪರ ಹೊಸ ಯೋಜನೆ ಘೋಷಣೆ ಆಗಬಹುದು ಎನ್ನಲಾಗಿದೆ.

ಜನರಿಗೆ ತೆರಿಗೆ ಹೊರೆ ಆಗದಂತೆ ತಡೆಯಲು ತೆರಿಗೆ ಸ್ತರದಲ್ಲಿ ಬದಲಾವಣೆ ಆಗಬಹುದು. ಮಂದಗತಿಯ ದೇಶದ ಆರ್ಥಿಕತೆಗೆ ವೇಗವು ಈ ಬಜೆಟ್‌ನಿಂದ ಸಿಗಬಹುದು. ಹಾಗೆಂದು ತೆರಿಗೆ ಹಚ್ಚಿಸಲೂ ಆಗ ಸ್ಥೀತಿಯಲ್ಲಿ ಕೇಂದ್ರ ಇದೆ. ವಿತ್ತಿ ಶಿಸ್ತು ಕಾಯ್ದುಕೊಂಡು ವಿತ್ತ ಸಚಿವರು ಬಜೆಟ್ ಮಂಡನೆ ಮಾಡಬೇಕಿದೆ.

ಬಜೆಟ್ ಕುರಿತು ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಕೃಪೆ ತೋರುವಂತೆ ಲಕ್ಷ್ಮೀ ದೇವಿಯಲ್ಲಿ ಪ್ರಾರ್ಥಿಸಲಾಗಿದೆ. ಮಹಿಳೆಯರಿಗೆ ಸಮಾನ ಅವಕಾಶ ಸಿಗುವಂತೆ ಪ್ರಮುಖ ನಿರ್ಧಾರಗಳೂ ಪ್ರಕಟಗೊಳ್ಳಬಹುದು ಎಂದು ಬಜೆಟ್ ಮುನ್ನಾದಿನ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

Leave a Comment

Your email address will not be published. Required fields are marked *