January 2025

ಮಹಾಕುಂಭಮೇಳದಲ್ಲಿ‌ ಘೋರ ದುರಂತ| ಕಾಲ್ತುಳಿತಕ್ಕೆ ಸಿಲುಕಿ 15 ಭಕ್ತರು ಸಾವು

ಸಮಗ್ರ ನ್ಯೂಸ್: ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭ ಮೇಳದಲ್ಲಿ ಬುಧವಾರ (ಜ. 29) ಕಾಲ್ತುಳಿತವು ಅನೇಕ ಸಾವುನೋವುಗಳಿಗೆ ಕಾರಣವಾಗಿದೆ ಎಂದು ಪ್ರಯಾಗ್ ರಾಜ್ ನ ಘಟನಾ ಸ್ಥಳದಲ್ಲಿದ್ದ ಛಾಯಾಗ್ರಾಹಕನನ್ನು ಉಲ್ಲೇಖಿಸಿ ಎಎಫ್ ಭಿ ಮಾಧ್ಯಮ ವರದಿ ಮಾಡಿದೆ. “ಈವರೆಗೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿದ ವೈದ್ಯರು ಹೇಳಿದರು. ರಕ್ಷಕರು ಮತ್ತು ಆರಾಧಕರು ಘಟನಾ ಸ್ಥಳದಿಂದ ಸಂತ್ರಸ್ತರನ್ನು ಸ್ಥಳಾಂತರಿಸುತ್ತಿರುವುದು […]

ಮಹಾಕುಂಭಮೇಳದಲ್ಲಿ‌ ಘೋರ ದುರಂತ| ಕಾಲ್ತುಳಿತಕ್ಕೆ ಸಿಲುಕಿ 15 ಭಕ್ತರು ಸಾವು Read More »

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌/ ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ

ಸಮಗ್ರ ನ್ಯೂಸ್‌: ರಾಜಧಾನಿ ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಹೊರ ಬಿದ್ದಿದ್ದು, ಸದ್ಯಕ್ಕೆ ಟಿಕೆಟ್‌ ದರಗಳನ್ನು ಏರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ನಮ್ಮ ಮೆಟ್ರೋದ ಪ್ರಯಾಣ ದರಗಳು ಹೊಸ ವರ್ಷದಿಂದ ಏರಿಕೆಯಾಗಲಿವೆ ಎಂದು ಹೇಳಲಾಗಿತ್ತು. ಟಿಕೆಟ್‌ ದರ ಹೆಚ್ಚಳದ ಕುರಿತು ರಚಿಸಲಾಗಿದ್ದ ಸಮಿತಿ ಈ ಬಗ್ಗೆ ಸೂಚನೆ ನೀಡಿತ್ತು. ಇದೀಗ ಕೇಂದ್ರ ಸರ್ಕಾರ ಟಿಕೆಟ್‌ ಬೆಲೆ ಏರಿಕೆ ನಿರ್ಧಾರಕ್ಕೆ ಬ್ರೇಕ್‌ ಹಾಕಿದೆ. ಹೀಗಾಗಿ ಈ ವರ್ಷ ನಮ್ಮ ಮೆಟ್ರೋ ಟಿಕೆಟ್‌ ಬೆಲೆ

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌/ ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ Read More »

ಐಸಿಸಿ ಚಾಂಪಿಯನ್ಸ್‌ ಟ್ರೋಫಿ/ ಇನ್ನೂ ಸಿದ್ಧಗೊಂಡಿಲ್ಲ ಕ್ರೀಡಾಂಗಣ/ ಜನವರಿ ೩೦ರ ಗಡುವು

ಸಮಗ್ರ ನ್ಯೂಸ್‌: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಪಂದ್ಯಾವಳಿ ನಡೆಯುವ ಕರಾಚಿ, ಲಹೋರ್‌ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳ ನವೀಕರಣ ಕಾರ್ಯ ಸಂಪೂರ್ಣಗೊಂಡಿಲ್ಲ. ಕ್ರೀಡಾಂಗಣಗಳ ನವೀಕರಣ ಕೆಲಸ ಪೂರ್ತಿಗೊಳಿಸಲು ಐಸಿಸಿ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಜ.30ರ ಗುಡುವು ನೀಡಿತ್ತು. ಆದರೆ ಇನ್ನೂ ಕೆಲಸ ಬಾಕಿ ಇರುವ ಕಾರಣ ಕೆಲವು ಪಂದ್ಯವನ್ನು ದುಬೈಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಪಾಕ್‌ ಕ್ರಿಕೆಟ್‌ ಮಂಡಳಿ ಮಾತ್ರ ಯಾವುದೇ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ/ ಇನ್ನೂ ಸಿದ್ಧಗೊಂಡಿಲ್ಲ ಕ್ರೀಡಾಂಗಣ/ ಜನವರಿ ೩೦ರ ಗಡುವು Read More »

ಪ್ರೊ ಕಬಡ್ಡಿ ಲೀಗ್‌/ ಬೆಂಗಳೂರು ಬುಲ್ಸ್‌ಗೆ ನೂತನ ಕೋಚ್‌

ಸಮಗ್ರ ನ್ಯೂಸ್‌: ಪ್ರೊ ಕಬಡ್ಡಿ ಲೀಗ್‌ನ ಬೆಂಗಳೂರು ಬುಲ್ಸ್‌ ತಂಡಕ್ಕೆ ನೂತನ ಕೋಚ್‌ ಆಗಿ ಕನ್ನಡಿಗ ಬಿ.ಸಿ ರಮೇಶ್‌ ಆಯ್ಕೆಯಾಗಿದ್ದಾರೆ. ಆ ಮೂಲಕ ಕಳೆದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ನೀರಸ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಬೆಂಗಳೂರು ಬುಲ್ಸ್‌ ತಂಡದ ಕೋಚ್‌ ರಣದೀರ್‌ ಸಿಂಗ್ ಸೆಹ್ರಾವತ್ ಅವರ ತಲೆದಂಡವಾಗಿದೆ. ಸತತ 11 ಸೀಸನ್‌ಗಳಿಂದ ರಣದೀರ್‌ಗೆ ಬುಲ್ಸ್‌ ತಂಡದೊಂದಿಗೆ ಇದ್ದ ನಂಟು ಇದೀಗ ಕೊನೆಗೊಂಡಿದೆ. ರಣಧೀರ್ ನಿರ್ಗಮನದ ಕುರಿತಾಗಿ ಫ್ರಾಂಚೈಸಿಯು ಇನ್‌ಸ್ಟಾಗ್ರಾಮ್‌ ಪೋಸ್ಟ್‌

ಪ್ರೊ ಕಬಡ್ಡಿ ಲೀಗ್‌/ ಬೆಂಗಳೂರು ಬುಲ್ಸ್‌ಗೆ ನೂತನ ಕೋಚ್‌ Read More »

ಹಂಪಿ ಉತ್ಸವ ೨೦೨೫/ ಲಾಂಛನ ಬಿಡುಗಡೆ

ಸಮಗ್ರ ನ್ಯೂಸ್‌: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ 2025ರ ಹಂಪಿ ಉತ್ಸವದ ಲಾಂಛನವನ್ನು ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಬಿದುಗಡೆಗೊಳಿಸಿದರು. ಫೆ. 28, ಮಾ. 1, 2ರಂದು 3 ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಇನ್ನಷ್ಟು ಅದ್ದೂರಿಯಾಗಿ ಮಾಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ ಉತ್ಸವದಲ್ಲಿ ಯಾವೆಲ್ಲ ಕಲಾವಿದರು

ಹಂಪಿ ಉತ್ಸವ ೨೦೨೫/ ಲಾಂಛನ ಬಿಡುಗಡೆ Read More »

ಶಿವಮೊಗ್ಗ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಸಾವು| ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬಸ್ಥರ ಆರೋಪ

ಸಮಗ್ರ ನ್ಯೂಸ್: ಶಿವಮೊಗ್ಗದ ಸಾಗರ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಮಹಿಳೆ ಸಾವನಪ್ಪಿದ ಘಟನೆ ನಡೆದಿದೆ. ಮೃತರನ್ನು ನಗರ ಹೋಬಳಿಯ ದುಬಾರತಟ್ಟೆ ನಿವಾಸಿ ಅಶ್ವಿನಿ (29) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ನಗರ ಹೋಬಳಿಯ ದುಬಾರತಟ್ಟೆ ಗ್ರಾಮದ ಮಹಿಳೆ ಅಶ್ವಿನಿ ಜ.26 ರಂದು ಸಾಗರ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವಪ್ಪಿದ್ದಾರೆ. ಮೃತ ಮಹಿಳೆ ಕುವೆಂಪು ವಿಶ್ವವಿದ್ಯಾಲಯದಲ್ಲಿ

ಶಿವಮೊಗ್ಗ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಸಾವು| ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬಸ್ಥರ ಆರೋಪ Read More »

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್| ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ವೇತನ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್| ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ Read More »

ಮಂಗಳೂರು: ಉತ್ತರ ‌ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಷರೀಪ್ ಲೋಕಾಯುಕ್ತ ಬಲೆಗೆ

ಸಮಗ್ರ ನ್ಯೂಸ್: ಠಾಣೆಯಿಂದಸ್ಕೂಟರ್‌ ಬಿಡುಗಡೆಗೊಳಿಸಲು ಲಂಚ ಪಡೆದ ಆರೋಪದ ಮೇಲೆ ನಗರದ ಉತ್ತರ ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮಹಮ್ಮದ್ ಷರೀಫ್‌ ಹಾಗೂ ಸಿಬ್ಬಂದಿ ಪ್ರವೀಣ್ ನಾಯ್ಕನನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ‘ಪೊಲೀಸರ ವಶದಲ್ಲಿದ್ದ ಸ್ಕೂಟರ್‌ ಬಿಡುಗಡೆಗೊಳಿಸಲು ನ್ಯಾಯಾಲಯವು ಆದೇಶ ಮಾಡಿತ್ತು. ಈ ಸಲುವಾಗಿ ದೂರುದಾರರು ಠಾಣೆಯ ಇನ್‌ಸ್ಪೆಕ್ಟರ್ ಮಹಮ್ಮದ್ ಷರೀಫ್ ಅವರನ್ನು ಭೇಟಿ ಮಾಡಿದ್ದರು. ಸ್ಕೂಟರ್‌ ಬಿಡುಗಡೆಗೊಳಿಸಲು ₹ 5ಸಾವಿರ ಲಂಚ ನೀಡುವಂತೆ ಷರೀಫ್‌ ಬೇಡಿಕೆ ಇಟ್ಟಿದ್ದರು. ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿದಾಗ ಠಾಣಾ

ಮಂಗಳೂರು: ಉತ್ತರ ‌ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಷರೀಪ್ ಲೋಕಾಯುಕ್ತ ಬಲೆಗೆ Read More »

ಚಾರ್ಮಾಡಿ ಘಾಟ್: ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಳ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ನಿಯೋಜನೆ ಮಾಡಿದೆ. ಕೊಟ್ಟಿಗೆಹಾರಅರಣ್ಯ ಇಲಾಖೆಯಲ್ಲಿ ಬೆಂಕಿ ವೀಕ್ಷಕರು ಇದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ಕಿಡಿಗೇಡುಗಳು ಹಚ್ಚುವ ಬೆಂಕಿಯಿಂದ ಉಂಟಾಗುತ್ತಿರುವ ಕಾಳ್ಗಿಚ್ಚು ತಡೆಯಲು ಸಾಧ್ಯವಾಗುತ್ತಿಲ್ಲ. ಬಿದರತಳ ಬಳಿ ಅರಣ್ಯದಲ್ಲಿ ಬೆಂಕಿ ಹರಡಿತ್ತು. ಅದಾದ ಒಂದೇ ವಾರದ ನಂತರ ಘಾಟಿಯಲ್ಲಿ ಅಣ್ಣಪ್ಪಸ್ವಾಮಿ ದೇಗುಲದ ಸಮೀಪ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಹುಲ್ಲುಗಾವಲು ಅಗ್ನಿಗೆ ಆಹುತಿಯಾಯಿತು. ಇದನ್ನು ತಪ್ಪಿಸಲು ಈಗ

ಚಾರ್ಮಾಡಿ ಘಾಟ್: ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ Read More »

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ;ಡಾ. ಅನುರಾಧಾ ಕುರುಂಜಿ

ಶಿಕ್ಷಣ ವ್ಯಕ್ತಿಯ ಬದುಕನ್ನು ರೂಪಿಸುವುದರೊಂದಿಗೆ ಮೌಲ್ಯಯುತ ಜೀವನವನ್ನು ನಿರ್ವಹಿಸಲು ಸಾಧ್ಯವಾಗಬೇಕು. ಆ ನಿಟ್ಟಿನಲ್ಲಿ  ಶಿಕ್ಷಣ ವ್ಯವಸ್ಥೆಯ ಪರೀಕ್ಷೆ ನಿಮ್ಮ ಜೀವನದ ಅವಿಭಾಜ್ಯ ಅಂಗವೆಂದರಿಯಿರಿ. ಆ ಮೂಲಕ ನೀವು ಪಡೆದ ಶಿಕ್ಷಣ ಸಾರ್ಥಕವಾಗಲಿ. ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ.  ಅನುರಾಧಾ ಕುರುಂಜಿಯವರು ಅಭಿಪ್ರಾಯ ಪಟ್ಟರು.  ಇವರು ಸರ್ಕಾರಿ ಪ್ರೌಢಶಾಲೆ ಎಡಮಂಗಲ ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ  8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪರೀಕ್ಷಾ ತಯಾರಿ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿಕಾರ್ಯಾಗಾರದಲ್ಲಿ

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ;ಡಾ. ಅನುರಾಧಾ ಕುರುಂಜಿ Read More »