January 2025

ದೆಹಲಿ ವಿಧಾನಸಭಾ ಚುನಾವಣೆ/ ಇಂದು ದಿನಾಂಕ ಪ್ರಕಟ

ಸಮಗ್ರ ನ್ಯೂಸ್‌: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಸಿದ್ಧಗೊಳ್ಳುತ್ತಿದ್ದು, ಚುನಾವಣೆಯ ದಿನಾಂಕವನ್ನು ಇಂದು ಮಧ್ಯಾಹ್ನ 2 ಗಂಟೆಗೆ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಲಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯ ಅವಧಿ ಫೆಬ್ರವರಿ 23ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಚುನಾವಣೆ ನಡೆಯಬೇಕಿದೆ.

ದೆಹಲಿ ವಿಧಾನಸಭಾ ಚುನಾವಣೆ/ ಇಂದು ದಿನಾಂಕ ಪ್ರಕಟ Read More »

ಅತ್ಯಾಚಾರ ಆರೋಪಿಯೊಡನೆ ಒತ್ತಾಯದ ಮದುವೆ ಮಾಡಿಸಿದ ಪೊಲೀಸರು!

ಸಮಗ್ರ ನ್ಯೂಸ್: ರೇಪ್ ಮಾಡಿದ ವ್ಯಕ್ತಿಯ ಜತೆ ಪೊಲೀಸರು ಯುವತಿಗೆ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಉತ್ತರ ಪ್ರದೇಶದ ಬದೊಹಿಯಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನ ವ್ಯಕ್ತಿ ಯೋರ್ವ ಅನೇಕ ಬಾರಿ ರೇಪ್ ಮಾಡಿದ್ದಾನೆ. ಈ ಬಗ್ಗೆ ಕಂಪ್ಲೇಂಟ್ ಕೊಡಲು ಯುವತಿ ತನ್ನ ಪೋಷಕರ ಜತೆ ಸ್ಟೇಷನ್ ಗೆ ತೆರಳಿದ್ದಾರೆ. ಈ ವೇಳೆ ಯುವತಿ ಗರ್ಭ ಧರಿಸುವ ಸಾಧ್ಯತೆ ಜಾಸ್ತಿಯಿದ್ದು, ರೇಪ್ ಮಾಡಿದ ವ್ಯಕ್ತಿಯನ್ನೇ ಮದುವೆ ಆಗುವಂತೆ ಒತ್ತಾಯಿಸಿದ್ದಾರೆ.ಅಲ್ಲದೆ ಪೊಲೀಸರು ಮುಂದೆ ನಿಂತು ಬಲವಂತವಾಗಿ ಆತನ ಜತೆ

ಅತ್ಯಾಚಾರ ಆರೋಪಿಯೊಡನೆ ಒತ್ತಾಯದ ಮದುವೆ ಮಾಡಿಸಿದ ಪೊಲೀಸರು! Read More »

ಮಹಾಕುಂಭ ಮೇಳಕ್ಕೆ ಬಾಂಬ್ ಬೆದರಿಕೆ |ಮುಸ್ಲಿಂ ಸೋಗಿನಲ್ಲಿ ಪೋಸ್ಟ್ ಮಾಡಿದ್ದ ಆಯುಷ್ ಕುಮಾರ್ ಜೈಸ್ವಾಲ್ ನನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್ : ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಮೇಲೆ ಭಯೋತ್ಪಾದಕ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಒಡ್ಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಆಯುಷ್ ಕುಮಾರ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ದಾಳಿಯ ಬೆದರಿಕೆ ಒಡ್ಡಿರುವುದು ಆಯುಷ್ ಕುಮಾರ್ ಜೈಸ್ವಾಲ್ ಎಂಬ ವ್ಯಕ್ತಿಯೇ ಎಂದು ದೃಢಪಟ್ಟ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.ಮಹಾ ಕುಂಭ ಮೇಳದ ಮೇಲೆ ಬಾಂಬ್ ದಾಳಿ ನಡೆಸಿ, 1,000 ಮಂದಿಯನ್ನು

ಮಹಾಕುಂಭ ಮೇಳಕ್ಕೆ ಬಾಂಬ್ ಬೆದರಿಕೆ |ಮುಸ್ಲಿಂ ಸೋಗಿನಲ್ಲಿ ಪೋಸ್ಟ್ ಮಾಡಿದ್ದ ಆಯುಷ್ ಕುಮಾರ್ ಜೈಸ್ವಾಲ್ ನನ್ನು ಬಂಧಿಸಿದ ಪೊಲೀಸರು Read More »

ಹೆತ್ತ ತಾಯಿಯನ್ನು ಹುಡುಕುತ್ತಾ ಭಾರತಕ್ಕೆ ಮರಳಿದ 21 ವರ್ಷದ ಸ್ಪೇನ್ ಯುವತಿ

ಸಮಗ್ರ ನ್ಯೂಸ್ : ಭಾರತ ಮೂಲದ ಸ್ಪೇನ್‌ನ 21 ವರ್ಷದ ಯುವತಿಯೊಬ್ಬರು ಒಂದು ವರ್ಷದ ಮಗುವಾಗಿದ್ದಾಗ ತಮ್ಮನ್ನು ಸಹೋದರನ ಜತೆ ಅನಾಥವಾಗಿಸಿ ಬಿಟ್ಟು ಹೋಗಿದ್ದ ತಾಯಿಯನ್ನು ಹುಡುಕಿಕೊಂಡು ಒಡಿಶಾದ ರಾಜಧಾನಿ ಭುವನೇಶ್ವರಕ್ಕೆ ಮರಳಿ ಬಂದಿದ್ದಾರೆ. ಸ್ಪೇನ್ ಮೂಲದ ಸಾಕು ತಾಯಿ ಗೆಮಾ ವಿಡಾಲ್‌ ಜತೆಗೂಡಿ ಡಿ.19 ರಂದು ಭಾರತಕ್ಕೆ ಬಂದಿರುವ ಸ್ನೇಹಾ, ಜನ್ಮ ನೀಡಿದ ತಾಯಿ ಬನಲತಾ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.ಆದರೆ, 20 ವರ್ಷಗಳ ಹಿಂದೆ ಬಿಟ್ಟು ಹೋಗಿದ್ದ ಜನ್ಮ ನೀಡಿದ ಅಮ್ಮನ ಬಗ್ಗೆ ಯಾವುದೇ ಸುಳಿವು

ಹೆತ್ತ ತಾಯಿಯನ್ನು ಹುಡುಕುತ್ತಾ ಭಾರತಕ್ಕೆ ಮರಳಿದ 21 ವರ್ಷದ ಸ್ಪೇನ್ ಯುವತಿ Read More »

ಉಪರಾಷ್ಟ್ರಪತಿ ಜಗದೀಪ್ ಧನಕರ್ ಇಂದು ದ.ಕ ಜಿಲ್ಲೆಗೆ ಆಗಮನ| ಧರ್ಮಸ್ಥಳದಲ್ಲಿ ಶ್ರೀಸಾನಿಧ್ಯ ಉದ್ಘಾಟನೆ

ಸಮಗ್ರ ನ್ಯೂಸ್: ಉಪರಾಷ್ಟ್ರಪತಿ ಜಗದೀಪ್ ಧನಕರ್ ಜ.7ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಮಂಗಳವಾರ ಬೆಳಗ್ಗೆ ದಿಲ್ಲಿಯಿಂದ ಹೊರಟು ಮಧ್ಯಾಹ್ನ 1:05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತೆರಳಿ 1:45ಕ್ಕೆ ಧರ್ಮಸ್ಥಳ ಆಗಮಿಸಲಿದ್ದಾರೆ. 2 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದರ್ಶನ, 2 ಗಂಟೆಯಿಂದ ಧರ್ಮಸ್ಥಳದಲ್ಲಿ ಮೆಗಾ ಕ್ಯೂ ಕಾಂಪ್ಲೆಕ್ಸ್ ಉದ್ಘಾಟನೆ ಮತ್ತು 2024-25 ಜ್ಞಾನದೀಪ ಕಾರ್ಯಕ್ರಮಕ್ಕೆ ಚಾಲನೆ. ಬಳಿಕ 3:50ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ದಿಲ್ಲಿಗೆ ತೆರಳಲಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್ ಧನಕರ್ ಇಂದು ದ.ಕ ಜಿಲ್ಲೆಗೆ ಆಗಮನ| ಧರ್ಮಸ್ಥಳದಲ್ಲಿ ಶ್ರೀಸಾನಿಧ್ಯ ಉದ್ಘಾಟನೆ Read More »

ಮಂಗಳೂರು: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಸಮಗ್ರ ನ್ಯೂಸ್: ಅತಿ ಅಪರೂಪದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಮಕ್ಕಳಿಗೆ ಜನನ ನೀಡಿದ ಮಹಾತಾಯಿ. ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಅವರು ಜನನ ನೀಡಿದ್ದಾರೆ. ಈ ನಾಲ್ಕು ಮಕ್ಕಳೂ

ಮಂಗಳೂರು: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ Read More »

ನೇಪಾಳದ ಗಡಿಯಲ್ಲಿ ಪ್ರಬಲ ಭೂಕಂಪ| ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ

ಸಮಗ್ರ ನ್ಯೂಸ್: ನೇಪಾಳದ ಗಡಿ ಬಳಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ನಸುಕಿನ ವೇಳೆ ಸಂಭವಿಸಿದ ಭೂಕಂಪದ ಪರಿಣಾಮ ದೆಹಲಿ, ಬಿಹಾರ, ಅಸ್ಸಾಂ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅಲ್ಲಿನ ಜನರು ಭಯಭೀತರಾಗಿ ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಹೊರಗೆ ಕಾಣಿಸಿಕೊಂಡರು. ಭೂಕಂಪದಿಂದಾಗಿ ಯಾವುದೇ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ನೇಪಾಳವು ಭೌಗೋಳಿಕವಾಗಿ ಸಕ್ರಿಯವಾಗಿರುವ ಪ್ರದೇಶದಲ್ಲಿ ನೆಲೆಸಿದೆ. ಅಲ್ಲಿ ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳು ಘರ್ಷಣೆಯಾಗಿ ಹಿಮಾಲಯವನ್ನು ರೂಪಿಸುತ್ತವೆ.

ನೇಪಾಳದ ಗಡಿಯಲ್ಲಿ ಪ್ರಬಲ ಭೂಕಂಪ| ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ Read More »

HSPR ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಿಸಲಾಗಿದೆ. ಜ.31 ರವರೆಗೆ ರವರೆಗೆ HSRP ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆಧಿಕೃತ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸುಮಾರು 2 ಕೋಟಿ ಹಳೆ ವಾಹನಗಳಿದ್ದು, 55 ಲಕ್ಷ ವಾಹನ ಮಾತ್ರ HSRP ಅಳವಡಿಸಿಕೊಂಡಿವೆ. 2019ರ ಏ. 1ಕ್ಕೆ ಮೊದಲು ನೋಂದಣಿಯಾದ ವಾಹನಗಳಿಗೆ HSRP ಕಡ್ಡಾಯ ಮಾಡಲಾಗಿದೆ. ಬಹುತೇಕ ವಾಹನಗಳಿಗೆ ಇನ್ನೂ ಹೆಚ್.ಎಸ್.ಆರ್.ಪಿ. ಹಾಕಿಸದ ಹಿನ್ನಲೆಯಲ್ಲಿ ಮತ್ತೆ ಗಡುವು ವಿಸ್ತರಣೆ ಮಾಡಲಾಗಿದೆ. HSRP

HSPR ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ Read More »

ಛತ್ತೀಸ್ ಘಡ್: ಭದ್ರತಾ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ ನಕ್ಸಲರು| ಎಂಟು ಯೋಧರು ಸೇರಿ 9 ಮಂದಿ ಮೃತ್ಯು

ಸಮಗ್ರ ನ್ಯೂಸ್ : ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳು ತೆರಳುತ್ತಿದ್ದ ವಾಹನವನ್ನು ನಕ್ಸಲರು ಸುಧಾರಿತ ಐಇಡಿ ಸ್ಪೋಟಕ ಬಳಸಿ ಸ್ಪೋಟಿಸಿದ್ದು 8 ಸೈನಿಕರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬಿಜಾಪುರ ಜಿಲ್ಲೆಯ ಬೇದ್ರೆ-ಕುಟ್ರು ರಸ್ತೆಯಲ್ಲಿ ಸ್ಫೋಟ ಸಂಭವಿಸಿದೆ. ಛತ್ತೀಸ್ ಗಢದ ಬಿಜಾಪುರದಲ್ಲಿ ಮಧ್ಯಾಹ್ನ 2.15ಕ್ಕೆ ಸರಿಯಾಗಿ ನಕ್ಸಲರು ವಾಹನ ಸ್ಫೋಟಿಸಿದ ಪರಿಣಾಮ ಎಂಟು ಭದ್ರತಾ ಸಿಬ್ಬಂದಿಗಳು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತೀಸ್ ಘಡ್: ಭದ್ರತಾ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ ನಕ್ಸಲರು| ಎಂಟು ಯೋಧರು ಸೇರಿ 9 ಮಂದಿ ಮೃತ್ಯು Read More »

ರಾಜ್ಯದಲ್ಲಿ HMPV ವೈರಸ್ ಪತ್ತೆ ಹಿನ್ನಲೆ| ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಸಮಗ್ರ ನ್ಯೂಸ್: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ 8 ತಿಂಗಳ ಮಗು ಹಾಗೂ 3 ತಿಂಗಳ ಮಗುವಿನಲ್ಲಿ HMPV ಸೋಂಕು ದೃಢಪಟ್ಟಿದ್ದು, ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ಉಸಿರಾಟದ ವೈರಸ್ ಆಗಿದ್ದು, ಇದು ಚಿಕ್ಕ ಮಕ್ಕಳು ಮತ್ತು ವೃದ್ಧರಿಗೆ ಹೆಚ್ಚು ಮಾರಕವಾಗಿದೆ. ಶಂಕಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. HMPV ಸೋಂಕಿಗೆ ಮಾರ್ಗಸೂಚಿ ಹೀಗಿದೆ:ಜ್ವರ, ಕೆಮ್ಮು, ನೆಗಡಿ ಹೊರಗೆ ಓಡಾಡದೆ ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯಿರಿ. ಕೈಗಳನ್ನೂ ಸಾಬೂನು ಹಾಗೂ

ರಾಜ್ಯದಲ್ಲಿ HMPV ವೈರಸ್ ಪತ್ತೆ ಹಿನ್ನಲೆ| ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ Read More »