ಮೇ ಅಂತ್ಯದೊಳಗೆ‌ ಬಿ.ಸಿ ರೋಡ್ – ಪೆರಿಯಶಾಂತಿ ರಾ.ಹೆದ್ದಾರಿ ಸಂಚಾರಕ್ಕೆ ಮುಕ್ತ – ಚೌಟ

ಸಮಗ್ರ ನ್ಯೂಸ್: ಬಿ.ಸಿ.ರೋಡ್ ನಿಂದ ಪೆರಿಯ ಶಾಂತಿಯವರೆಗಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮೇ 2025ರ ಅಂತ್ಯದ ವೇಳೆಗೆ ಶೇ 90ರಷ್ಟು ಪೂರ್ಣ ಗೊಳ್ಳಲಿದೆ ಮತ್ತು ಸಂಚಾರಕ್ಕೆ ಮುಕ್ತ ವಾಗಲಿದೆ ಎಂದು ದಕ್ಷಿಣ ಕನ್ನಡ ಲೋಕ ಸಭಾ ಸದಸ್ಯ ಬ್ರಿಜೇಶ್ ಚೌಟ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರು ಗುರುವಾರ ಬಿ.ಸಿ.ರೋಡಿನಿಂದ ಗೋಳಿತೊಟ್ಟು ವರೆಗಿನ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

Ad Widget .

ಬಿ.ಸಿ.ರೋಡ್ ನಿಂದ ಪೆರಿಯ ಶಾಂತಿಯ ವರೆಗಿನ ಸುಮಾರು 48 ಕಿ.ಮೀ ರಾಷ್ಟ್ರೀಯ ಹೆದ್ದಾರಿಯ ಮೇಲ್ ಸೇತುವೆ ಕಾಮಗಾರಿ ಗಳಲ್ಲಿ 5 ಕಡೆಯ ಕಾಮಗಾರಿ ಪೂರ್ಣ ಗೊಂಡಿದೆ. ಮಾರ್ಚ್‌ ಅಂತ್ಯದೊಳಗೆ ಶೇ 90ರಷ್ಟು ಕಾಮಾಗಾರಿ ಪೂರ್ಣಗೊಂಡು ಮೇ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

Ad Widget . Ad Widget .

ಬಿ‌.ಸಿ.ರೋಡ್ ನಲ್ಲಿ ನಾರಾಯಣ ಗುರು ವೃತ್ತ ಕಾಮಗಾರಿ, ಪಾಣೆ ಮಂಗಳೂರು, ಮೆಲ್ಕಾರು, ಕಲ್ಲಡ್ಕ, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಸೇರಿದಂತೆ ಪ್ಲೈ ಓವರ್ ಹಾಗೂ ಅಂಡರ್ ಪಾಸ್ ಕಾಮಗಾರಿಗಳು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಕೆಲವು ಕಡೆ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ದೂಳಿನ ಸಮಸ್ಯೆ, ಮಳೆ ನೀರು ಮನೆ ಆವರಣದಲ್ಲಿ ಪ್ರವೇಶಿಸಿ ನೆರೆ ಉಂಟಾದ ಬಗ್ಗೆ ಹಾಗೂ ಸಂಪರ್ಕ ರಸ್ತೆ ಸಮಸ್ಯೆಗಳ ಬಗ್ಗೆ ಬುಡೋಳಿ, ಅಮೈ, ನೆಕ್ಕಿಲಾಡಿ, ಉಪ್ಪಿನಂಗಡಿ ಪ್ರದೇಶದಲ್ಲಿ ಜನರು ಸಂಸದರ ಗಮನಕ್ಕೆ ತಂದರು. ಈ ಬಗ್ಗೆ ಗಮನಹರಿಸಿತು ಬಗೆ ಹರಿಸಲು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ನೀರಕಟ್ಟೆಯಲ್ಲಿ ಟೋಲ್ ಗೇಟ್ ರಚನೆಯಾಗಲಿದೆ. ಕೆಲವು ಕಡೆ ಬಂಡೆ ಒಡೆಯುವ ಕಾಮಗಾರಿ ಕಾಮಗಾರಿ ವಿಳಂಬ ವಾಗಿದೆ. ಆದರೂ ಶೇ 90ರಷ್ಟು ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣ ಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೆದ್ ಅಜ್ಮಿ ತಿಳಿಸಿದ್ದಾರೆ.

ಬಿ.ಸಿ.ರೋಡ್ -ಪೆರಿಯಶಾಂತಿ ವರೆಗಿನ ಹೆದ್ದಾರಿ ಕಾಮಗಾರಿಯ ಗುತ್ತಿಗೆ ದಾರ ಸಂಸ್ಥೆ ಕೆಎನ್ ಆರ್ ಸಂಸ್ಥೆ ಯ ಜನರಲ್ ಮ್ಯಾನೇಜರ್ ರಘುನಾಥ್ ರೆಡ್ಡಿ ಮಾತನಾಡುತ್ತಾ ಬಿ.ಸಿ.ರೋಡ್ -ಪೆರಿಯಶಾಂತಿ ಕಾಮಗಾರಿಯಲ್ಲಿ 35.35ಕಿ.ಮೀ ಕಾಂಕ್ರೀಟ್ ರಸ್ತೆ,ಏಳು ಪ್ಲೈ ಓವರ್ 7 ಕೆಳ ರಸ್ತೆ (ಅಂಡರ್ ಪಾಸ್ )ಗಳು,15 ತಿರುವುಗಳ ಕಾಮಗಾರಿ ಒಳಗೊಂಡಿದೆ ಎಂದರು.

Leave a Comment

Your email address will not be published. Required fields are marked *