ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌/ ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ

ಸಮಗ್ರ ನ್ಯೂಸ್‌: ರಾಜಧಾನಿ ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಹೊರ ಬಿದ್ದಿದ್ದು, ಸದ್ಯಕ್ಕೆ ಟಿಕೆಟ್‌ ದರಗಳನ್ನು ಏರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ನಮ್ಮ ಮೆಟ್ರೋದ ಪ್ರಯಾಣ ದರಗಳು ಹೊಸ ವರ್ಷದಿಂದ ಏರಿಕೆಯಾಗಲಿವೆ ಎಂದು ಹೇಳಲಾಗಿತ್ತು. ಟಿಕೆಟ್‌ ದರ ಹೆಚ್ಚಳದ ಕುರಿತು ರಚಿಸಲಾಗಿದ್ದ ಸಮಿತಿ ಈ ಬಗ್ಗೆ ಸೂಚನೆ ನೀಡಿತ್ತು. ಇದೀಗ ಕೇಂದ್ರ ಸರ್ಕಾರ ಟಿಕೆಟ್‌ ಬೆಲೆ ಏರಿಕೆ ನಿರ್ಧಾರಕ್ಕೆ ಬ್ರೇಕ್‌ ಹಾಕಿದೆ. ಹೀಗಾಗಿ ಈ ವರ್ಷ ನಮ್ಮ ಮೆಟ್ರೋ ಟಿಕೆಟ್‌ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

Ad Widget ... ..

ಕಳೆದ ವಾರವಷ್ಟೇ ಟಿಕೆಟ್ ದರ ಏರಿಕೆ ಸಂಬಂಧ ಬಿಎಂಆರ್​ಸಿಎಲ್ (Bangalore Metro Rail Corporation Limited) ಸಮಿತಿ ರಚಿಸಿ ಸಭೆ ನಡೆಸಿತ್ತು. ಶೇ. 15ರಷ್ಟು ದರ ಹೆಚ್ಚಳ ಮಾಡಲು ನಿರ್ಧರಿಸಿತ್ತು. ಆದರೆ ಇದಕ್ಕೆ ಇದೀಗ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎನ್ನಲಾಗಿದೆ. ರಾಜ್ಯದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಬಸ್‌ ಪ್ರಯಾಣ ದರವನ್ನು ಏರಿಕೆ ಮಾಡಲಾಗಿತ್ತು. ಇದೀಗ ಮೆಟ್ರೋ ಟಿಕೆಟ್‌ ಹೆಚ್ಚಳ ಮಾಡಿದರೆ ಸಮಸ್ಯೆಯಾಗಲಿದೆ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಕೇಂದ್ರವೂ ಇದೇ ಕಾರಣ ನೀಡಿ ಬೆಲೆ ಹೆಚ್ಚಳಕ್ಕೆ ತಡೆ ಒಡ್ಡಿದೆ ಎಂದು ಮೂಲಗಳು ತಿಳಿಸಿವೆ.

Ad Widget

Leave a Comment

Your email address will not be published. Required fields are marked *