ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ಪತ್ನಿಗೆ ಸಂಕಷ್ಟ

ಸಮಗ್ರ ನ್ಯೂಸ್: ಮುಡಾ ಹಗರಣದಲ್ಲಿ ಒಂದೆಡೆ ಲೋಕಾಯುಕ್ತ ತನಿಖೆ ನಡೆಸಿ ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿಗೆ ಕ್ಲೀನ್ ಚಿಟ್ ನೀಡಿದ ವರದಿ ಬೆನ್ನಲ್ಲೇ ಇಡಿ ಇಕ್ಕುಳ ಹಾಕಿದೆ. ಮುಡಾ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿತ್ತು. ಆದರೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿ ಹೆಸರಿಗೆ ಸೈಟು ಮಾಡಿಸಿಕೊಂಡಿಲ್ಲ. ಅಧಿಕಾರಿಗಳಿಂದಲೇ ತಪ್ಪಾಗಿದ್ದು ಎಂದು ಲೋಕಾಯುಕ್ತ ವರದಿ ನೀಡಿದೆ ಎನ್ನಲಾಗಿದೆ.

Ad Widget ... ..

ಇದರ ಬೆನ್ನಲ್ಲೇ ಈಗ ಜಾರಿ ನಿರ್ದೇಶನಾಲಯ ಸಿಎಂ ಪತ್ನಿ ಪಾರ್ವತಿಗೆ ನೋಟಿಸ್ ನೀಡಿದೆ. ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪವಿದೆ. ಈ ಕಾರಣಕ್ಕೆ ಪ್ರಕರಣದಲ್ಲಿ ಇಡಿ ಈಗ ಸಿಎಂ ಪತ್ನಿಗೆ ನೋಟಿಸ್ ನೀಡಿದೆ.

Ad Widget

ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೇ ಸುಮಾರು 300 ಕೋಟಿ ರೂ. ಮೌಲ್ಯದ ಆಸ್ತಿ ಮಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಅನೇಕ ಗಣ್ಯರ ಆಸ್ತಿ ಪಾಸ್ತಿಗಳೂ ಸೇರಿವೆ ಎನ್ನಲಾಗಿದೆ. ಇದೀಗ ಲೋಕಾಯುಕ್ತದಿಂದ ರಿಲೀಫ್ ಸಿಕ್ಕ ಬೆನ್ನಲ್ಲೇ ಈಗ ಇಡಿ ಸಿದ್ದರಾಮಯ್ಯ ಮತ್ತು ಪತ್ನಿಗೆ ಕಂಟಕವಾಗುವ ಸಾಧ್ಯತೆಯಿದೆ.

Leave a Comment

Your email address will not be published. Required fields are marked *